tag:blogger.com,1999:blog-32138345.post1253663160820915513..comments2024-02-05T22:13:08.593+05:30Comments on ಅಂತರಗಂಗೆ: ಇಸ್ಲಾಮಿಕ್ ವಿಜ್ಞಾನದ ಸುವರ್ಣ ಯುಗ ಮತ್ತು ಅನುವಾದ ಆಂದೋಲನಡಾ. ಜೆ.ಬಾಲಕೃಷ್ಣhttp://www.blogger.com/profile/03731547508862530676noreply@blogger.comBlogger2125tag:blogger.com,1999:blog-32138345.post-53554793982704164672021-11-21T22:58:41.300+05:302021-11-21T22:58:41.300+05:30ಡಾ ಬಾಲು ರವರು ಬಹಳಷ್ಟು ಸಂಶೋದನೆ ನಡೆಸಿ ಒಂದು ಉತ್ತಮವಾದ &...ಡಾ ಬಾಲು ರವರು ಬಹಳಷ್ಟು ಸಂಶೋದನೆ ನಡೆಸಿ ಒಂದು ಉತ್ತಮವಾದ "ಇಸ್ಲಾಮಿಕ್ ವಿಜ್ಞಾನದ ಸುವರ್ಣ ಯುಗ ಮತ್ತು ಅನುವಾದ ಆಂದೋಲನ" ಬಗ್ಗೆ ಬಹಳ ಉಪಯುಕ್ತವಾದ ಲೇಖನ ಬರೆದು ಇತಿಹಾಸದಲ್ಲಿ ಅಡಗಿದ್ದ ವಿಷಯಗಳನ್ನು ಇದ್ದದ್ದು ಹಾಗೆ ಬರೆದು ಒಂದು ಉತ್ತಮವಾದ ಲೇಖನವನ್ನು ಬಹಳ ಅರ್ಥಪೂರ್ಣವಾಗಿ ಬರೆದಿದ್ದಾರೆ.
ಅಂದಹಾಗೆ ಅಂದಿನ ಅರಬರು ವಿವಿಧ ಶಾಸ್ತ್ರಗಳ ಬಗ್ಗೆ ಅರಿತಿದ್ದರು ಎಂದು ಲೇಖನ ದಿoದ ತಿಳಿದುಬರುತ್ತದೆ, ಇದರ ಜೊತೆಗೆ ಸಾಕಷ್ಟು ಸಸ್ಯಶಾಸ್ತ್ರ ಬಗ್ಗೆ ಸಹ ಅವರಿಗೆ ತಿಳಿದಿತ್ತು ಎಂದು "ಹದೀಸ್" ನಲ್ಲಿ ಉಲ್ಲೇಖವಿದೆ. ಆಗಿನ ಕಾಲದಲ್ಲಿ ಖರ್ಜೂರದ ಗಿಡಗಳಲ್ಲಿ ಜನರು ಮರಹತ್ತಿ ಪರಾಗಸ್ಪರ್ಶ ಮಾಡುತ್ತಿದ್ದದ್ದು ಪ್ರವಾದಿಗಳು ನೋಡಿ ಅವುಗಳನ್ನು ಹಾಗೆಯೇ ಮುಂದುವರಿಸಿ ಎಂದು ತಿಳಿಸಿರುವುದು ಉಲ್ಲೇಖವಿದೆ ಇದರ ಜೊತೆಗೆ ಕರ್ಜೂರದ ಗಿಡಗಳಲ್ಲಿ " ಕಸಿ" ಮಾಡುವುದನ್ನು ಕಲಿತಿದ್ದರಂತೆ.
ಒಟ್ಟಿನಲ್ಲಿ ಇದೊಂದು ಬಾಲು ರವರ ವಿಶಿಷ್ಟ ಲೇಖನ ಬಹಳ ಚನ್ನಾಗಿ ಮಾಹಿತಿಯನ್ನು ಕೊಟ್ಟಿದ್ದಾರೆ
- ಆನ್ಸರ್.ಅನ್ಸರ್ ಸ್ ಬ್ಲಾಗ್.https://www.blogger.com/profile/11341897802382913391noreply@blogger.comtag:blogger.com,1999:blog-32138345.post-16408962455617645482021-08-09T18:28:49.854+05:302021-08-09T18:28:49.854+05:30 ಪ್ರಪಂಚದಲ್ಲಿ ವಿಜ್ಞಾನ, ಖಗೋಳಶಾಸ್ತ್ರ, ಗಣಿತಶಾಸ್ತ್ರ, ಮು... ಪ್ರಪಂಚದಲ್ಲಿ ವಿಜ್ಞಾನ, ಖಗೋಳಶಾಸ್ತ್ರ, ಗಣಿತಶಾಸ್ತ್ರ, ಮುಂತಾದ ಅನೇಕ ಶಾಸ್ತ್ರಗಳ ಗ್ರಂಥಗಳು ಪ್ರಪಂಚದ ನಾನಾ ದೇಶಗಳಲ್ಲಿ ಹೇಗೆ ಬೆಳೆದವು ಮತ್ತು ಬೇರೆ ಬೇರೆ ಭಾಷೆಗಳಿಗೆ ಅವು ಯಾವ ರೀತಿ ಭಾಷಾಂತರಗೊಂಡು ಜನರನ್ನು ತಲುಪಿದವು ಎಂಬ ಬಗ್ಗೆ ಲೇಖನ ವಿಶೇಷ ಬೆಳಕು ಚೆಲ್ಲುತ್ತದೆ.
ಪ್ರಪಂಚದ ಇತಿಹಾಸದಲ್ಲಿ ನಾವು ಹೆಚ್ಚಾಗಿ ಯಾವ ಯಾವ ದೇಶಗಳ ಮೇಲೆ ಯಾರು ದಂಡೆತ್ತಿ ಹೋದರು ಮತ್ತು ಯಾರು ಆಳ್ವಿಕೆಯನ್ನು ಮಾಡಿದರು ಎನ್ನುವ ವಿಚಾರಗಳನ್ನೇ ಹೆಚ್ಚಾಗಿ ಓದುತ್ತೇವೆ. ಆದರೆ ವಿಶ್ವದ ಯಾವ-ಯಾವ ಮೂಲೆಗಳಲ್ಲಿ ವಿದ್ವಾಂಸರು ಯಾವ ಯಾವ ವಿಷಯಗಳ ಬಗ್ಗೆ ಸಂಶೋಧನೆ ಮಾಡಿದರು ಮತ್ತು ಅವುಗಳು ಭಾಷಾಂತರದ ಮೂಲಕ ವಿಶ್ವದ ಮೂಲೆಗಳಲ್ಲಿ ತಲುಪಿದವು ವಿಚಾರ ಬಹಳಷ್ಟು ಕುತೂಹಲಕಾರಿಯಾಗಿದೆ.
ಪ್ರಪಂಚದಲ್ಲಿ ಕಾಗದ ಇನ್ನು ಅವಿಷ್ಕಾರ ಆಗದ ಸಂದರ್ಭದಲ್ಲಿ ಯಾವ ಯಾವ ವೈಜ್ಞಾನಿಕ ಸಂಶೋಧನೆ ಮತ್ತು ವಿಚಾರಗಳ ಪುಸ್ತಕಗಳು ಮತ್ತು ಲೇಖನಗಳು ಬೇರೆ ಬೇರೆ ಭಾಷೆಗಳ ಮೂಲಕ ಪ್ರಪಂಚದಾದ್ಯಂತ ತಲುಪಿದ್ದು ಬಹಳ ಕುತೂಹಲಕಾರಿಯಾಗಿದೆ.
ಸುಮಾರು ಒಂದೂವರೆ ಸಾವಿರ ವರ್ಷಗಳ ಇತಿಹಾಸವನ್ನು ಬಾಲಕೃಷ್ಣ ಅವರು ಸಾಕಷ್ಟು ಸಂಶೋಧನೆ ಮಾಡಿ ನಮಗಾಗಿ ಕೊಟ್ಟಿದ್ದಾರೆ. ಬಹುಶಹ ಇನ್ನೂ ಕೆಲವು ನೂರು ವರ್ಷಗಳಲ್ಲಿ ಎಲ್ಲಾ ಗ್ರಂಥಗಳು ತಮ್ಮದೇ ಮೂಲ ಎಂದು ಎಲ್ಲಾ ಭಾಷೆಗಳ ಜನರು ಹೇಳಲು ಸಾಧ್ಯವಿದೆ. ಏಕೆಂದರೆ ಸಂಶೋಧನೆ ನಡೆಯಲಾದ ಮತ್ತು ಲೇಖನ ರೂಪಕ್ಕೆ ಬಂದ ಗ್ರಂಥಗಳಿಗಿಂತ ಹೆಚ್ಚಿನ ವಿಷಯಗಳು ಅನುವಾದಿತ ಗ್ರಂಥಗಳಲ್ಲಿ ಲಭ್ಯವಾದಾಗ ಇಂತಹ ಮೂಲಗ್ರಂಥಗಳನ್ನು ಗುರುತಿಸುವುದು ಕಷ್ಟವಾಗಬಹುದು.
ಈ ಎಲ್ಲ ದೃಷ್ಟಿಯಿಂದ ಬಾಲಕೃಷ್ಣ ಅವರ ಲೇಖನವು ಬಹಳ ಉಪಯುಕ್ತ ಮಾಹಿತಿಯನ್ನು ಕೊಡುತ್ತದೆ.Girish Babuhttps://www.blogger.com/profile/17448034479685026270noreply@blogger.com