https://nammasuddi.net/2023/01/12/kannada-sahithya-sammela-president-j-balakrishna/?fbclid=IwAR3sWDO1y2lzIL-DZrRzU_TEYwdupEdxP5lhG8DpUXrfqLj4qiz-fEP9UJA
ಮುಳಬಾಗಿಲಿನಲ್ಲಿ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ ಸರ್ವಾಧ್ಯಕ್ಷರಾಗಿ ಲೇಖಕ ಜೆ.ಬಾಲಕೃಷ್ಣ ಸರ್ವಾನುಮತ ಆಯ್ಕೆ
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫೆಬ್ರವರಿ ಮೊದಲ ವಾರದಲ್ಲಿ ಮುಳಬಾಗಿಲು ಪಟ್ಟಣದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಲೇಖಕ ಜೆ.ಬಾಲಕೃಷ್ಣ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಟಿ.ಚನ್ನಯ್ಯರಂಗಮಂದಿರ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಅಧ್ಯಕ್ಷತೆಯಲ್ಲಿ ಸೇರಿದ್ದ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಇವರ ಆಯ್ಕೆ ನಡೆಯಿತು.
ಮೂಲತಃ ಮುಳಬಾಗಿಲು ತಾಲೂಕಿನವರೇ ಆಗಿರುವ ಜೆ.ಬಾಲಕೃಷ್ಣ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಖ್ಯಾತ ಲೇಖಕರು, ಅನುವಾದಕರು ಹಾಗು ವ್ಯಂಗ್ಯ ಚಿತ್ರಕಾರರಾಗಿ ಖ್ಯಾತರಾಗಿದ್ದಾರೆ.
ಡಾ. ಜೆ.ಬಾಲಕೃಷ್ಣ ಕಿರು ಪರಿಚಯ:
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಡಾ.ಜೆ.ಬಾಲಕೃಷ್ಣ ಕೃಷಿ ವಿಜ್ಞಾನದಲ್ಲಿ ಸ್ನಾತಕ ಪದವಿ, ಕೃಷಿ ಸೂಕ್ಷ್ಮ್ಮಜೀವಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕನ್ನಡದ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಯನಕ್ಕಾಗಿ ಹಂಪಿಯಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟೊರೇಟ್ ಪದವಿ ಪಡೆದಿದ್ದಾರೆ.
ಕೋಲಾರಜಿಲ್ಲೆಯ ಮುಳಬಾಗಿಲು ತಾಲೂಕಿನ ಮಂಡಿಕಲ್‌ಗ್ರಾಮ ಇವರ ಸ್ವಗ್ರಾಮ.ತಾಯಿಯ ಸ್ವಂತ ಸ್ಥಳ ಅದೇ ತಾಲೂಕಿನ ಸಿದ್ಧಘಟ್ಟ.ಡಾ.ಜೆ.ಬಾಲಕೃಷ್ಣ ಲೇಖಕರು, ಅನುವಾದಕರು ಹಾಗೂ ವ್ಯಂಗ್ಯಚಿತ್ರಕಾರರು.ಅವರಆಸಕ್ತಿಯ ವಲಯಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು.
ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ, ಚರಿತ್ರೆ, ಕಲೆ, ಸೂಫಿ, ಝೆನ್ ತತ್ವದರ್ಶನಗಳವರೆಗೆ ಹೊಕ್ಕಾಡಿದರೂಅಂತಿಮವಾಗಿಅವರ ಮನಸ್ಸು ನೆಲೆಗೊಳ್ಳುವುದು ಜೀವಕಾರುಣ್ಯದಲ್ಲೇ. ಕಾಲೂರಿದ ಲೌಕಿಕ ಬದುಕಿನ ಬೇರುಗಳಲ್ಲೇ ಅಲೌಕಿಕ ಗುಂಗು ಹೀರಬಲ್ಲರಾದರೂ ಮಣ್ಣಿನತಾಯಿಗುಣದಿಂದ ಅವರೆಂದೂ ದೂರವಾಗಿಲ್ಲ.
ಚಿಂತನೆಗಳ ಶ್ರೇಷ್ಠತೆಗೆ ಸಹಜವಾಗಿತುಡಿದರೂ, ವ್ಯಸನಿಯಲ್ಲ. ಹಾಗಾಗಿಯೇಅವರ ಲೇಖನ ಅಭಿವ್ಯಕ್ತಿ ಸರಳತೆಯಲ್ಲೇ ಸೌಂದರ್ಯವನ್ನು ಹಿಡಿವ ಬಾಲ್ಯ ಸಂಭ್ರಮದ್ದು! ಖಭೌತದ ಅನಂತ ನಿಗೂಢತೆ, ನಿಸರ್ಗದ ನಿಷ್ಠುರ ಲಯಗಳು, ಮನುಷ್ಯರಾಳದ ಇನ್‌ಸ್ಟಿಂಕ್ಟ್‌ಗಳನ್ನು ಹಾಗೂ ಮನೋವಿಜ್ಞಾನದಅಜ್ಞಾತ ಪದರಗಳನ್ನು ಬಿಚ್ಚಿತಡವಿ ನೋಡುವ ಅವರ ಅನನ್ಯ ಪ್ರಯೋಗಗಳಿಂದಾಗಿ ಬಾಲಕೃಷ್ಣರವರ ಬರವಣಿಗೆಗೆ ಸಾಹಿತ್ಯೇತರವಾದ ಕೌತುಕದಾಯಾಮಗಳೂ ದಕ್ಕುತ್ತವೆ.
ಇವರ ಕೆಲವು ಕೃತಿಗಳೆಂದರೆ
‘ನೆನಪುಗಳಿಗೇಕೆ ಸಾವಿಲ್ಲ?’(ಕಥಾ ಸಂಕಲನ),
‘ಕನಸೆಂಬ ಮಾಯಾಲೋಕ’, ‘ಮಿಥುನ’ (ಮನೋವಿಜ್ಞಾನದ ಬರಹಗಳು)
ವಿಜ್ಞಾನ ಲೇಖನಗಳು, ‘ಮಾತಾಹರಿ’, ‘ಮಳೆಬಿಲ್ಲ ನೆರಳು (೨೦೧೨ರ ಕರ್ನಾಟಕ ವಿಜ್ಞಾನ ಮತ್ತುತಂತ್ರಜ್ಞಾನಅಕಾಡೆಮಿಯಅತ್ಯುತ್ತಮ ವಿಜ್ಞಾನ ಪುಸ್ತಕ ಪ್ರಶಸ್ತಿ ವಿಜೇತಕೃತಿ)
‘ವ್ಯಂಗ್ಯಚಿತ್ರ-ಚರಿತ್ರೆ’ ‘ಮೌನ ವಸಂತ’ (ಮಹಿಳಾ ಕಥನಗಳು), ‘ಕೃಷಿ ವಿಜ್ಞಾನ ಸಾಹಿತ್ಯ ನಡೆದುಬಂದ ಹಾದಿ’ (ಅಧ್ಯಯನ).
ಪದಕೋಶ ‘ಜೀವತಂತ್ರಜ್ಞಾನಅರ್ಥವಿವರಣಾ ಕೋಶ’, ‘ಕೃಷಿ ವಿಜ್ಞಾನತಾಂತ್ರಿಕ ಪದಕೋಶ’,
‘ಆಡಳಿತ ಪದಕೋಶ’.
ಅನುವಾದಿತ ಕೃತಿಗಳು: ‘ನೀನೆಂಬ ನಾನು- ಸೂಫಿ ಎಂಬ ಮಾನಸಿಕ ಅವಸ್ಥೆ ಮತ್ತು ಸೂಫಿ ಕತೆಗಳು’, ‘ಬೊಕಾಷಿಯೋನ ರಸಿಕತೆಗಳು’, ‘ಮಾಂಟೋ ಕತೆಗಳು’, ‘ಪುಟ್ಟರಾಜಕುಮಾರ’,
‘ನಮ್ಮ ನಿಮ್ಮೊಳಗೊಬ್ಬ ನಸ್ರುದ್ದೀನ್’, ‘ಬೌದ್ದಿಕ ಆಸ್ತಿ ಹಕ್ಕು ಮತ್ತು ಸಾಂಪ್ರದಾಯಕಜ್ಞಾನ’,
‘ಗ್ರಾಮ್ಯ ಧ್ವನಿಗಳು’, ‘ನಡು ಮಧ್ಯಾಹ್ನದಚಂದ್ರ ಹಾಗೂ ಇತರ ಕತೆಗಳು’ ಹಾಗೂ
‘ಮನೆಯೇ ಇಲ್ಲದ ಬಾಗಿಲು – ಮುಲ್ಲಾ ನಸ್ರುದ್ದೀನ್ ಕತೆಗಳು’.
ಪ್ರವಾಸ ಕಥನ, ನಡೆದಷ್ಟುದೂರ-(ಮುದ್ರಣದಲ್ಲಿದೆ.)
ಇವರವ್ಯಂಗ್ಯಚಿತ್ರಗಳು ನಾಡಿನಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
೨೦೦೮ರಿಂದಲೂ ಇವರು ತಮ್ಮಬ್ಲಾಗ್ ‘ಅಂತರಗಂಗೆಯಲ್ಲಿ ನಿರಂತರವಾಗಿ ತಮ್ಮ ಬರಹ ಹಾಗೂ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ.