Translate
ಭಾನುವಾರ, ನವೆಂಬರ್ 09, 2025
ಜೇಮ್ಸ್ ವ್ಯಾಟ್ಸನ್ - ಬೌದ್ಧಿಕತೆ ಹಾಗೂ ಮಾನವೀಯ ಮೌಲ್ಯಗಳು
ಜೇಮ್ಸ್ ವ್ಯಾಟ್ಸನ್ - ಡಿ.ಎನ್.ಎ. ರಚನೆ ಕಂಡು ಹಿಡಿದ ವಿಜ್ಞಾನಿ (ಫ್ರಾನ್ಸಿಸ್ ಕ್ರಿಕ್ ರವರೊಂದಿಗೆ) ಹಾಗೂ ಅದಕ್ಕಾಗಿ ನೋಬೆಲ್ ಪ್ರಶಸ್ತಿ ಸಹ ಪಡೆದರು. ವೈಜ್ಞಾನಿಕ ಕ್ಷೇತ್ರಕ್ಕೆ ಹಾಗೂ ಮಾನವ ಅರಿವಿಗೆ ಇದು ಮಹತ್ತರ ಸಂಶೋಧನೆ. ಜೇಮ್ಸ್ ವ್ಯಾಟ್ಸನ್ ಇದೀಗ ತೀರಿಕೊಂಡಿದ್ದಾರೆ.
ಆದರೆ ವ್ಯಾಟ್ಸನ್ ರವರ ಬದುಕು ಹಲವು ವಿರೋಧಾಭಾಸಗಳಿಂದ ಕೂಡಿತ್ತು. ಅವರ ಡಿ.ಎನ್.ಎ. ಸಂಶೋಧನೆಯಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್ ಎಂಬ ಮಹಿಳಾ ವಿಜ್ಞಾನಿಯ ಸಂಶೋಧನೆಗಳನ್ನು ಕದ್ದರೆಂಬ ಆರೋಪ ಸಹ ಇದ್ದಿತು. (ಅದು ನನ್ನ ರೋಸಾಲಿಂಡ್ ಫ್ರಾಂಕ್ಲಿನ್ ಕುರಿತ ಲೇಖನದಲ್ಲಿದೆ: ). ಅಷ್ಟಲ್ಲದೆ ವ್ಯಾಟ್ಸನ್ ಹಲವಾರು ಜನಾಂಗೀಯ ನಿಂದನೆಯ, ಮಹಿಳಾ ನಿಂದನೆಯ ಹೇಳಿಕೆಗಳನ್ನು ನೀಡಿದರು. ಅವರ ನಡತೆಯಿಂದಾಗಿ ವಿಜ್ಞಾನ ಕ್ಷೇತ್ರ ಅವರನ್ನು ದೂರವಿರಿಸಿತು, ಯಾವುದೇ ಸಭೆ, ಸಮಾವೇಶಗಳಿಗೆ ಅವರನ್ನು ಕರೆಯುತ್ತಿರಲಿಲ್ಲ. ಇದರಿಂದಾಗಿ ಅವರ ಆದಾಯ ಕುಂಠಿತವಾಗಿ ಅವರು ತಮ್ಮ ನೋಬೆಲ್ ಪ್ರಶಸ್ತಿ ಪದಕವನ್ನು ಮಾರಾಟಕ್ಕೆ ಸಹ ಇಟ್ಟರು. ಅವರ ಈ ನಡತೆಯ ಬಗೆಗಿನ ಮಾಹಿತಿ ಇಲ್ಲಿದೆ: ಇದು ನನ್ನ ರೋಸಾಲಿಂಡ್ ಫ್ರಾಂಕ್ಲಿನ್ ಲೇಖನದ ಪ್ರವೇಶ. ಇಡೀ ಲೇಖನ ಓದಲು ಬಯಸುವವರು ನನ್ನ ಬ್ಲಾಗ್ ನೋಡಬಹುದು: https://antaragange.blogspot.com/2021/06/blog-post_14.html
"ಏಪ್ರಿಲ್ 1953ರ ಪ್ರತಿಷ್ಠಿತ `ನೇಚರ್’ ಪತ್ರಿಕೆಯಲ್ಲಿ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಬರೆದ ಒಂದು ಕಿರು ವೈಜ್ಞಾನಿಕ ಪ್ರಬಂಧ ಪ್ರಕಟವಾಯಿತು. ಆಧುನಿಕ ವೈಜ್ಞಾನಿಕ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯುಂಟುಮಾಡಿದ ಈ ಪ್ರಬಂಧ ಎಲ್ಲ ಜೀವಿಗಳ ಜೀವಿಕೋಶಗಳಲ್ಲಿನ ಆನುವಂಶಿಕ ಧಾತುವಾದ ಡಿ.ಎನ್.ಎ.ನ (ಡಿಯಾಕ್ಸಿರೈಬೋಸ್ ನ್ಯೂಕ್ಲಿಯಿಕ್ ಆಮ್ಲ) ರಾಸಾಯನಿಕ ರಚನೆ ಎರಡು ಎಳೆಗಳ ಸುರುಳಿಯಾಕಾರವೆಂದು (`ಡಬಲ್ ಹೆಲಿಕ್ಸ್’) ಪ್ರಸ್ತಾವಿಸಿತ್ತು. ಇದು ಅದ್ಭುತ ಸಂಶೋಧನೆಯಾದ್ದರಿಂದ ವ್ಯಾಟ್ಸನ್ ಮತ್ತು ಕ್ರಿಕ್ರ್ವರಿಗೆ ಹಾಗೂ ಮತ್ತೊಬ್ಬ ವಿಜ್ಞಾನಿ ಮೌರೀಸ್ ವಿಲ್ಕಿನ್ಸ್ರಯವರಿಗೆ 1962ರಲ್ಲಿ ನೋಬೆಲ್ ಪ್ರಶಸ್ತಿ ಸಹ ದೊರಕಿತು.
ಆದರೆ ವ್ಯಾಟ್ಸನ್ ಮತ್ತು ಕ್ರಿಕ್ರದವರು ತಮ್ಮ ಪ್ರಬಂಧಕ್ಕಾಗಿ ಡಿ.ಎನ್.ಎ. ಕುರಿತಂತೆ ಯಾವುದೇ ಪ್ರಯೋಗವನ್ನೂ ಮಾಡಿರಲಿಲ್ಲವೆಂಬುದನ್ನು ಜನ ಬಹಳ ಬೇಗ ಮರೆತರು. ಅವರು ತಮ್ಮ ಸಂಶೋಧನಾ ಪ್ರಬಂಧಕ್ಕೆ ಆಧಾರವಾಗಿದ್ದ ಪ್ರಯೋಗಗಳನ್ನೆಲ್ಲಾ ಹಿಂದಿನ ಮೂರು ವರ್ಷಗಳು ಕಿಂಗ್ಸ್ ಕಾಲೇಜಿನ ಮೆಡಿಕಲ್ ರೀಸರ್ಚ್ ಕೌನ್ಸಿಲ್ ಬಯೋಫಿಸಿಕ್ಸ್ ಘಟಕದ ಸ್ಟ್ರ್ಯಾಂಡ್ ಪ್ರಯೋಗಾಲಯದಲ್ಲಿ ನಡೆಸಲಾಗಿತ್ತು. ಆ ಬಹುಪಾಲು ಸಂಶೋಧನೆಯನ್ನು ನಡೆಸಿದ್ದುದು ರೋಸಾಲಿಂಡ್ ಫ್ರಾಂಕ್ಲಿನ್ ಎಂಬ ಮಹಿಳಾ ವಿಜ್ಞಾನಿ. ಡಿ.ಎನ್.ಎ. ರಾಸಾಯನಿಕ ರಚನೆ ಅರ್ಥಮಾಡಿಕೊಳ್ಳುವಲ್ಲಿ ಆಕೆಯ ಕೊಡುಗೆ ಮಹತ್ವದ್ದು. ಆಕೆಯ ಸಂಶೋಧನೆಗಳನ್ನು ಆಕೆಗೆ ತಿಳಿಸದೆ, ಆಕೆಯ ಅನುಮತಿಯಿಲ್ಲದೆ ವ್ಯಾಟ್ಸನ್ ಮತ್ತು ಕ್ರಿಕ್ರಮವರು ವಿಲ್ಕಿನ್ಸ್ರವರ ಸಹಾಯದಿಂದ ಬಳಸಿಕೊಂಡು ಡಿ.ಎನ್.ಎ. ರಾಸಾಯನಿಕ ರಚನೆ ಕಂಡುಹಿಡಿದ ಪ್ರಖ್ಯಾತ ವಿಜ್ಞಾನಿಗಳಾದರು. ಅವರು ನೋಬೆಲ್ ಪ್ರಶಸ್ತಿ ಪಡೆದಾಗ ರೋಸಾಲಿಂಡ್ ಫ್ರಾಂಕ್ಲಿನ್ ಅಂಡಾಶಯ ಕ್ಯಾನ್ಸರ್ನಿಂ ದ ತಮ್ಮ 37ನೇ ವಯಸ್ಸಿನಲ್ಲಿಯೇ ಜೀವತೆತ್ತು ನಾಲ್ಕು ವರ್ಷಗಳಾಗಿದ್ದವು. ದುರಂತವೆಂದರೆ ಇಂದು ಡಿ.ಎನ್.ಎ. ರಾಸಾಯನಿಕ ರಚನೆಯ ವಿಷಯ ಬಂದಾಗಲೆಲ್ಲಾ ವ್ಯಾಟ್ಸನ್ ಮತ್ತು ಕ್ರಿಕ್ರಂವರನ್ನು ನೆನಪಿಸಿಕೊಳ್ಳಲಾಗುತ್ತದೆ, ಆದರೆ ಕಿಂಗ್ಸ್ ಕಾಲೇಜಿನಲ್ಲಿ ನಡೆದ ಅದರ ಹಿಂದಿನ ಸಂಶೋಧನೆಗಳನ್ನು ಮತ್ತು ರೋಸಾಲಿಂಡ್ ಫ್ರಾಂಕ್ಲಿನ್ರವರ ಶ್ರಮವನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಡಿ.ಎನ್.ಎ. ರಾಸಾಯನಿಕ ರಚನೆಯ ಆವಿಷ್ಕಾರದ ಹಿಂದಿನ ಕತೆ ಹಲವಾರು ನೈತಿಕ ಪ್ರಶ್ನೆಗಳನ್ನು ಎದುರಿಗಿಡುತ್ತವೆ ಹಾಗೂ ಇದರ ಜೊತೆಗೆ ರೋಸಾಲಿಂಡ್ ಫ್ರಾಂಕ್ಲಿನ್ ಮಹಿಳೆಯಾಗಿದ್ದುದು ಮತ್ತೊಂದು."
ಅವರ ಉಳಿದ ವಿವಾದಾಸ್ಪದ ಹೇಳಿಕೆಗಳ ಬಗ್ಗೆ ಗಮನಿಸೋಣ:
ಅವರ ವೈಜ್ಞಾನಿಕ ಕೊಡುಗೆಗಳು:
1. DNA ರಚನೆಯ ಆವಿಷ್ಕಾರ: ಈ ಆವಿಷ್ಕಾರ ಆಧುನಿಕ ಆನುವಂಶಿಕ ಶಾಸ್ತ್ರ ಮತ್ತು ಆಣ್ವಿಕ ಜೀವವಿಜ್ಞಾನದ ಅಡಿಗಲ್ಲಾಯಿತು.
2. ಹ್ಯೂಮನ್ ಜೀನೋಮ್ ಪ್ರಾಜೆಕ್ಟ್: ಈ ಮಹತ್ವದ ಪ್ರಾಜೆಕ್ಟ್ಗೆ ಅವರು ಪ್ರಮುಖ ಪ್ರೇರಕರಾಗಿದ್ದರು.
3. ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯ: ಈ ಪ್ರಮುಖ ಜೀವವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳು ಮತ್ತು ವಿವಾದಗಳು:
1. ಜನಾಂಗೀಯತೆ ಮತ್ತು ಬುದ್ಧಿಮತ್ತೆ ಸಂಬಂಧಿತ ಹೇಳಿಕೆಗಳು:
* 2007 ರಲ್ಲಿ, ವ್ಯಾಟ್ಸನ್ ಅವರು ಆಫ್ರಿಕನ್ ಮೂಲದ ಜನರು ಪಾಶ್ಚಾತ್ಯ ಜನರಿಗಿಂತ ಕಡಿಮೆ ಬುದ್ಧಿಮತ್ತೆ ಹೊಂದಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
* ಅವರು ತಮ್ಮ ಪುಸ್ತಕ "ಅವಾಯಿಡಿಂಗ್ ಬೋರಿಂಗ್ ಪೀಪಲ್" ನಲ್ಲಿ ಬುದ್ಧಿಮತ್ತೆಯಲ್ಲಿ ಜನಾಂಗೀಯ ವ್ಯತ್ಯಾಸಗಳ ಬಗ್ಗೆ ವಾದ ಮಂಡಿಸಿದ್ದರು.
* ಈ ಹೇಳಿಕೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದಿಂದ ಅವರನ್ನು ನಿವೃತ್ತಿ ಹಂತದಲ್ಲಿ ವರ್ಗಾಯಿಸಲಾಯಿತು.
2. ಸ್ತ್ರೀವಾದ ಮತ್ತು ಮಹಿಳೆ ವಿಜ್ಞಾನಿಗಳ ಬಗ್ಗೆ ಹೇಳಿಕೆಗಳು:
* ಅವರು ಮಹಿಳೆ ವಿಜ್ಞಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
* "ಮಹಿಳೆಯರು ಪ್ರಯೋಗಾಲಯದಲ್ಲಿ ಕೆಲಸ ಮಾಡುವುದು ಹೆಚ್ಚು ಉತ್ಸಾಹಭರಿತವಾಗಿರುತ್ತದೆ" ಎಂಬಂತಹ ಲಿಂಗಭೇದದ ಹೇಳಿಕೆ ನೀಡಿದ್ದಾರೆ.
3. ಸಲಿಂಗ ಕಾಮದ ಬಗ್ಗೆ ಅಭಿಪ್ರಾಯಗಳು:
* ಸಲಿಂಗಕಾಮವನ್ನು "ಜನನ ದೋಷ" ಎಂದು ಕರೆದಿದ್ದಾರೆ.
* ಭ್ರೂಣಾವಸ್ಥೆಯ ಸಮಯದಲ್ಲಿ ಸಲಿಂಗಕಾಮತ್ವವನ್ನು ಗುರುತಿಸಲು ಮತ್ತು "ಚಿಕಿತ್ಸೆ" ಮಾಡಲು ಸಾಧ್ಯವೆಂದು ವಾದಿಸಿದ್ದಾರೆ.
ಪರಿಣಾಮಗಳು ಮತ್ತು ಪ್ರತಿಕ್ರಿಯೆಗಳು:
1. ವೃತ್ತಿಜೀವನದ ಪತನ: ಅವರ ವಿವಾದಾತ್ಮಕ ಹೇಳಿಕೆಗಳಿಂದಾಗಿ ವೈಜ್ಞಾನಿಕ ಸಮುದಾಯದಲ್ಲಿ ಅವರ ಗೌರವ ಮತ್ತು ಪ್ರತಿಷ್ಠೆ ಗಣನೀಯವಾಗಿ ಕುಗ್ಗಿದೆ.
2. ಪ್ರಶಸ್ತಿ ಹಿಂತೆಗೆದುಕೊಳ್ಳುವಿಕೆ: 2019 ರಲ್ಲಿ, ವ್ಯಾಟ್ಸನ್ ಅವರ ವಿವಾದಾತ್ಮಕ ಹೇಳಿಕೆಗಳ ನಂತರ ಅವರಿಗೆ ಲಭಿಸಿದ ಹಲವಾರು ಪ್ರಶಸ್ತಿಗಳನ್ನು ಹಿಂಪಡೆಯಲಾಯಿತು.
3. ವೈಜ್ಞಾನಿಕ ಸಮುದಾಯದ ನಿಂದನೆ: ಪ್ರಪಂಚದಾದ್ಯಂತದ ವಿಜ್ಞಾನಿಗಳು ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ.
ವೈಜ್ಞಾನಿಕ ಬುದ್ಧಿಮತ್ತೆ, ಸಂಶೋಧನೆ ಹಾಗೂ ಮಾನವೀಯತೆಯ ಮನೋಭಾವ ಎಲ್ಲವೂ ಒಬ್ಬರಲ್ಲೇ ಇರಬೇಕಿಲ್ಲ ಎಂಬುದಕ್ಕೆ ವ್ಯಾಟ್ಸನ್ ಉದಾಹರಣೆಯಲ್ಲವೆ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
