ಕೆಲದಿನಗಳ ಹಿಂದೆ ಪತ್ರಿಕೆಯಲ್ಲಿ ಸುದ್ದಿಯೊಂದಿತ್ತು. ಉತ್ತರ ಕರ್ನಾಟಕದಲ್ಲಿ ಹಿಂದೂ ದೇವಾಲಯದಲ್ಲಿ ನಮಾಜು ಮಾಡುತ್ತಿದ್ದ ಇಬ್ಬರು ಕಾಶ್ಮೀರದವರನ್ನು ಜನ ಹಿಡಿದು ಪೋಲಿಸರಿಗೆ ಕೊಟ್ಟಿದ್ದರು. ಆ ಇಬ್ಬರು ದೇವಸ್ಥಾನದಲ್ಲಿ ನಮಾಜು ಮಾಡಲು ಕಾರಣಗಳೇನು ಅಥವಾ ಅವರ ಮನಸ್ಸಿನಲ್ಲಿ ಏನಿತ್ತೆಂಬುದು ನನಗೆ ತಿಳಿದಿಲ್ಲ.
ಹೋದ ವರ್ಷ ಇಂಗ್ಲಿಷ್ ವಾರಪತ್ರಿಕೆಯೊಂದರಲ್ಲಿ ಓದಿದ ಸಣ್ಣ ವರದಿಯೊಂದು ನೆನಪಾಯಿತು. ಆ ವರದಿಗಾರ ಕಾಶ್ಮೀರಕ್ಕೆ ಹೋಗಿದ್ದಾಗ ಟ್ಯಾಕ್ಸಿಯೊಂದರಲ್ಲಿ ಸಂಜೆ ಶ್ರೀನಗರಕ್ಕೆ ಹಿಂದಿರುಗುವಾಗ ಟ್ಯಾಕ್ಸಿಯ ಡ್ರೈವರ್ ಹತ್ತಿರದಲ್ಲೇ ಸೂರ್ಯದೇವನ ದೇವಾಲಯವೊಂದಿದೆಯೆಂದೂ , ಅದು ತುಂಬಾ ಸುಂದರವಾಗಿರುವುದರಿಂದ ಅದನ್ನು ನೋಡುವಿರೇನು ಎಂದು ಕೇಳಿದ. ವರದಿಗಾರನಿಗೂ ಸಮಯವಿದ್ದುದರಿಂದ ಆ ದೇವಾಲಯವನ್ನು ನೋಡೋಣವೆಂದು ಒಪ್ಪಿ ಹೊರಟರು. ಆ ಸುಂದರ ದೇವಾಲಯವನ್ನು ನೋಡುತ್ತಾ ಪ್ರಾಂಗಣದಲ್ಲಿ ಓಡಾಡುವಾಗ ಅಲ್ಲಿ ಕೆಲ ಮುಸಲ್ಮಾನರು ನಮಾಜು ಮಾಡುತ್ತಿದ್ದರು. ಈ ವರದಿಗಾರನಿಗೆ ಹಿಂದೂ ದೇವಾಲಯದಲ್ಲಿ ನಮಾಜು ಮಾಡುತ್ತಿದ್ದ ಮುಸಲ್ಮಾನರನ್ನು ಕಂಡು ಅಚ್ಚರಿಯಾಗಿ, ಕುತೂಹಲದಿಂದ ಅವರನ್ನೇ ಕೇಳೋಣವೆಂದು ಅವರ ಬಳಿ ಹೋಗಿ ಅವರಿಗೆ ಹಿಂದೂ ದೇವಾಲಯದಲ್ಲಿ ನಮಾಜು ಮಾಡಲು ಏನೂ ಅನ್ನಿಸುವುದಿಲ್ಲವೇ ಎಂದು ಕೇಳಿದನು. ಅದಕ್ಕವರಲ್ಲಿ ಒಬ್ಬಾತ, `ಧರ್ಮ ಅಥವಾ ದೇವಾಲಯ ಯಾವುದಾದರೇನು, ಎಲ್ಲರಿಗೂ ದೇವರು ಒಬ್ಬನೇ ಅಲ್ಲವೆ?’ ಎಂದು ಪ್ರಶ್ನಿಸಿದನಂತೆ.
1 ಕಾಮೆಂಟ್:
ಮಾನ್ಯರೇ,
ನಿಮ್ಮ `ಅಂತರಗಂಗೆ'ಯಲ್ಲಿ ಮಿಂದು ಪಾವನನಾದೆ. ಅಭಿನಂದನೆಗಳು. ನನ್ನದೂ ಒಂದು ಗುಪ್ತಗಾಮಿನಿ ಹರಿಯುತ್ತಿದೆ ಒಮ್ಮೆ ಭೇಟಿ ನೀಡಿ, ಮನಸ್ಸಿಗೆ ಒಪ್ಪಿದರೆ ನಿಮ್ಮ ಪುಟದಲ್ಲಿ ಇಲ್ಲಿಗೆ ಒಂದು ಕೊಂಡಿ ಸಿಕ್ಕಿಸಿ: [http://kalaravablog.blogspot.com]
ಕಾಮೆಂಟ್ ಪೋಸ್ಟ್ ಮಾಡಿ