ಫೋಟೋಗಳು: ಎಸ್. ರೇಣುಕಾ
ನೀವು ಥಾಯ್ಲೆಂಡ್‌ಗೆ ಭೇಟಿ ನೀಡಿದಲ್ಲಿ ಪಟ್ಟಾಯ ಹಾಗೂ ಬ್ಯಾಂಕಾಕ್‌ಗಳಿಗೆ ಭೇಟಿ ನೀಡುವುದು ಖಚಿತ. ಬೀಚ್ ಹಾಗೂ ನಗರದಲ್ಲಿ ಸುತ್ತಾಡುವುದರ ನಡುವೆ ಪಟ್ಟಾಯಾದಲ್ಲಿನ ಆಲ್ಕಜಾರ್ ಕ್ಯಾಬರೆ ನೋಡುವುದನ್ನು ಮರೆಯಬೇಡಿ. ಜಗತ್ಪ್ರಸಿದ್ಧವಾದ ಈ ಕ್ಯಾಬರೆ ಕಳೆದ ಇಪ್ಪತ್ತು ವರ್ಷಗಳಿಂದ ನಡೆಯುತ್ತಿದೆ. ಸುಮಾರು ನಾಲ್ಕು ನೂರು ಅತ್ಯಂತ ಸುಂದರ ಸ್ತ್ರೀ ಕಲಾವಿದರನ್ನು ಹೊಂದಿರುವ ಈ ಕ್ಯಾಬರೆ ಒಂದೂ ಒಂದೂವರೆ ಗಂಟೆಗಳ ಕಾಲ ವೀಕ್ಷಕರನ್ನು ಮನಮೋಹಕ ನೃತ್ಯಗಳಿಂದ, ಅತ್ಯದ್ಭುತ ರಂಗಸಜ್ಜಿಕೆಯಿಂದ ಮಂತ್ರಮುಗ್ಧಗೊಳಿಸುತ್ತದೆ. ಆಲ್ಕಜಾರ್ ಕ್ಯಾಬರೆ ವಿಶ್ವದರ್ಜೆಯದಾಗಿದ್ದು ಅದನ್ನು ಪ್ಯಾರಿಸ್‌ನ ಜಗದ್ವಿಖ್ಯಾತ ಲಿಡೊ ಮತ್ತು ಮೌಲಿನ್ ರೂಗೂ ಹೋಲಿಸಲಾಗುತ್ತದೆ.
ಸಾವಿರದ ಇನ್ನೂರು ಆಸನಗಳುಳ್ಳ ಸಭಾಂಗಣದಲ್ಲಿ ನೀವು ಕೂರುತ್ತಿದ್ದಂತೆ ನಿಮಗೆ ಕೋಲಾ ಅಥವಾ ಬಿಯರ್ ನೀಡಲಾಗುತ್ತದೆ. ಥಾಯ್ ಹಾಗೂ ಇಂಗ್ಲಿಷಿನ ಹಾಡುಗಳಿಗೆ ದಂಗುಬಡಿಸುವ ಸೌಂದರ್ಯದ, ನೀಳ ನಡುವಿನ, ತುಂಬಿದೆದೆಯ ಸುಂದರಿಯರು ನರ್ತಿಸುತ್ತಾರೆ. ಹಲವಾರು ಥಾಯ್‌ನ ಸಾಂಪ್ರದಾಯಕ ನೃತ್ಯಗಳೂ ಇರುತ್ತವೆ. ನಿಮಗೆ ಸಮಯಹೋಗುವುದೇ ತಿಳಿಯುವುದಿಲ್ಲ. ಇಷ್ಟು ಬೇಗ ಮುಗಿದುಹೋಯಿತೇ ಎನ್ನಿಸುತ್ತದೆ.
ಕಾರ್ಯಕ್ರಮ ಮುಗಿದ ನಂತರ ನೀವು ಹೊರಬರುತ್ತಿದ್ದಂತೆ ನೃತ್ಯಮಾಡಿದ ಆ ಸುರಸುಂದರಿಯರು ನಿಮಗಾಗಿಯೇ ಕಾಯುತ್ತಿರುತ್ತಾರೆ. ಹತ್ತು ಹದಿನೈದು ಬಾಟ್ (ಥಾಯ್ಲೆಂಡಿನ ಹಣ) ನೀಡಿದಲ್ಲಿ ನೀವು ಅವರನ್ನು ಅಪ್ಪಿಕೊಳ್ಳಬಹುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬಹುದು. ಆ ಸುಂದರಿಯರನ್ನು ಕ್ಯಾಮೆರಾಗಳಲ್ಲಿ ಹಾಗೂ ಮನಸ್ಸುಗಳಲ್ಲಿ ಸೆರೆಹಿಡಿದು ತಾವು ಕೊಂಡೊಯ್ಯಬಹುದು.
ಅಂದಹಾಗೆ ನೀವು ತಿಳಿದುಕೊಳ್ಳಬೇಕಾದ ಮತ್ತೊಂದು ವಿಷಯವಿದೆ. ಆ ಸುರಸುಂದರಿಯರು ಹೆಂಗಸರಲ್ಲ, ಹೆಂಗಸಿನ ರೂಪದಲ್ಲಿರುವ ಗಂಡಸರು! ಅಥವಾ 'ಹೆಂಗಂಡಸರು'.
ಥಾಯ್ಲೆಂಡಿನಲ್ಲಿ ಒಂದು ಪ್ರಸಿದ್ಧ ಮಾತಿದೆ: 'ನೀನು ಅತ್ಯಂತ ಸುಂದರ ಹೆಣ್ಣನ್ನು ಭೇಟಿಯಾದಲ್ಲಿ, ಎಚ್ಚರದಿಂದಿರು, ಆ ಹೆಣ್ಣು ಗಂಡಾಗಿರಬಹುದು'. ಇಂಥ ಹೆಂಗಂಡಸರನ್ನು 'ಲೇಡಿ-ಬಾಯ್' ಎಂದು ಕರೆಯುತ್ತಾರೆ. ಥಾಯ್ ಭಾಷೆಯಲ್ಲಿ 'ಕಥೋಯ್' ಎಂದು ಕರೆಯುತ್ತಾರೆ. ಕಥೋಯ್ ಎನ್ನುವುದೊಂದು ಆಡುಭಾಷೆಯ ಪದ. ಅದರ ನಿಜವಾದ ಅರ್ಥ ಹೆಂಗಸಿನ ವೇಷ ಧರಿಸುವ ಗಂಡಸು ಎಂದು.

63 ದಶ ಲಕ್ಷ ಜನಸಂಖ್ಯೆಯಿರುವ ಥಾಯ್ಲೆಂಡಿನಲ್ಲಿ ಸುಮಾರು 2 ಲಕ್ಷ ಲೇಡಿಬಾಯ್ಸ್ ಇದ್ದಾರೆ. ಅವರನ್ನು ಥಾಯ್ ಭಾಷೆಯಲ್ಲಿ ಕಥೋಯ್ ಎಂದು ಕರೆಯುತ್ತಾರೆ. ಅವರು ನಿಮ್ಮ ಎದುರಿಗೆ ಬಂದರೂ ಅವರು ಅದೆಷ್ಟು ಸುಂದರವಾಗಿರುತ್ತಾರೆಂದರೆ ಅವರನ್ನು ಗುರುತಿಸುವುದು ತೀರಾ ಕಷ್ಟ. ಕಥೋಯ್‌ಗಳನ್ನು ಮೂರನೇ ಲಿಂಗವೆಂದೂ ಕರೆಯುತ್ತಾರೆ. ಥಾಯ್ಲೆಂಡಿನಲ್ಲಿ ಅದೇಕೆ ಹೆಚ್ಚಿನ ಸಂಖ್ಯೆಯಲ್ಲಿ ಕಥೋಯ್‌ಗಳಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಈ ಮೂರು ಲಿಂಗಗಳ ಪರಿಕಲ್ಪನೆ ಥಾಯ್ಲೆಂಡಿನಲ್ಲಿ ಪ್ರಾಚೀನವಾದುದು. ಸೃಷ್ಟಿಯ ಕತೆಗಳು ಹೇಳುವಂತೆ ದಂಪತಿಗಳೊಬ್ಬರಿಗೆ ಮೂವರು ಮಕ್ಕಳಿದ್ದರಂತೆ: ಒಂದು ಗಂಡು, ಒಂದು ಹೆಣ್ಣು ಹಾಗೂ ಮತ್ತೊಂದು ಮೂರನೇ ಲಿಂಗ. ಈ ಮೂರನೇ ಲಿಂಗದ ಮಗುವೇ ಕಥೋಯ್ ಎಂದು ಹೇಳುತ್ತಾರೆ.
ಬಹುಪಾಲು ಈ ವಿಪರ್ಯಸ್ತ ಲಿಂಗಿಗಳು ತಮ್ಮ ಬಾಲ್ಯದಿಂದಲೇ ತಾವು ತಪ್ಪು ಲಿಂಗದಲ್ಲಿ ಜನಿಸಿದ್ದೇವೆಂದು ಭಾವಿಸಿರುತ್ತಾರೆ. ಹಾಗಾಗಿ ಅವರು ಹುಡುಗರಾಗಿ ಹುಟ್ಟಿದ್ದರೂ ಹುಡುಗಿಯರಂತೆ ಬಟ್ಟೆ ಧರಿಸಿ, ಅವರಂತೆಯೇ ಹಾವಭಾವಗಳಿಂದ ವರ್ತಿಸುತ್ತಿರುತ್ತಾರೆ. ತನ್ನಲ್ಲಿ ಗಂಡಸಿನ ಚಹರೆಗಳು ಅಭಿವೃದ್ಧಿಯಾಗದಿರಲಿ ಎಂದು ಸ್ತ್ರೀ ಹಾರ್ಮೋನ್‌ಗಳನ್ನು ಬಳಸತೊಡಗುತ್ತಾರೆ. ಕೊನೆಗೊಂದು ದಿನ ಲಿಂಗಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು 'ಸಂಪೂರ್ಣ ಸ್ತ್ರೀ'ಯಾಗಲು ಪ್ರಯತ್ನಿಸುತ್ತಾರೆ. ಲಿಂಗಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಆರ್ಥಿಕ ಸಾಮರ್ಥ್ಯವಿಲ್ಲದವರು ಸ್ತ್ರೀಯರಂತೆ ಬಟ್ಟೆಗಳನ್ನು ಧರಿಸಿ ಅವರಂತೆಯೇ ನಡೆದುಕೊಳ್ಳುತ್ತಿರುತ್ತಾರೆ.
ಕಥೋಯ್‌ಗಳನ್ನು ಥಾಯ್ ಸಮಾಜ ಸ್ವೀಕರಿಸಿದೆ ಹಾಗೂ ಅವರನ್ನು ಕೀಳಾಗಿ ಕಾಣುವುದಿಲ್ಲ. ಸಹಿಷ್ಣುತೆಯನ್ನು ಬೋಧಿಸುವ ಬೌದ್ಧ ಧರ್ಮ ಥಾಯ್‌ನ ಪ್ರಮುಖ ಧರ್ಮವಾಗಿರುವುದೇ ಈ ಸಹನೆಗೆ ಕಾರಣ ಎನ್ನಲಾಗಿದೆ. ಆದರೂ ಮೇಲ್ನೋಟಕ್ಕೆ ಎದ್ದುಕಾಣದಿದ್ದರೂ ಅವರನ್ನು ತಮಾಷೆಯ ವಸ್ತುಗಳಾಗಿ ಒಳಗೊಳಗೇ ಕಾಣುತ್ತಾರೆನ್ನಲಾಗಿದೆ. ಕಥೋಯ್‌ಗಳು ಹೆಣ್ಣಾಗಿರಲು ಬಯಸುವುದರಿಂದ ಅವರನ್ನು ಈ ಲೇಖನದಲ್ಲಿ ಸ್ತ್ರೀಲಿಂಗವೆಂದೇ ಪರಿಗಣಿಸಿ ಬರೆಯಲಾಗಿದೆ. ಕಥೋಯ್‌ಗಳನ್ನು ನೀವು ಎಲ್ಲೆಡೆಯೂ ಕೆಲಸಮಾಡುತ್ತಿರುವುದನ್ನು ಕಾಣಬಹುದು- ಹೋಟೆಲುಗಳಲ್ಲಿ, ಬಾರ್‌ಗಳಲ್ಲಿ, ಅಂಗಡಿಗಳಲ್ಲಿ. ಕೆಲವರು ಬೋಧಕರಾಗಿ, ವಿಮಾನ ಪರಿಚಾರಿಕೆಯರಾಗಿ, ಸಿನೆಮಾ ಕಲಾವಿದರಾಗಿ, ರೂಪದರ್ಶಿಗಳಾಗಿ, ನರ್ಸ್‌ಗಳಾಗಿಯೂ ಸಹ ಕೆಲಸಮಾಡುತ್ತಿದ್ದಾರೆ. ನೋಂಗ್ ತುಮ್ ಎಂಬಾಕೆ ಥಾಯ್ ಬಾಕ್ಸಿಂಗ್‌ನ ಛಾಂಪಿಯನ್ ಸಹ ಆಗಿದ್ದಳು. ಆದರೆ ಈ ಉದ್ಯೋಗಗಳಲ್ಲಿ ಸಲ್ಲದವರು ಬೀದಿಗಿಳಿದು ವೇಶ್ಯೆಯರಂತೆ, ಸೆಕ್ಸ್ ಶೋಗಳಲ್ಲಿ ಕೆಲಸಮಾಡಿ ಜೀವನ ಸಾಗಿಸುತ್ತಿದ್ದಾರೆ. ಥಾಯ್ಲೆಂಡಿನ ಕಥೋಯ್‌ಗಳ ಖ್ಯಾತಿ ಇರುವುದು ಅಲ್ಕಜಾರ್‌ನಂತಹ ಕ್ಯಾಬರೆಗಳಲ್ಲಿ. ಆ ಕ್ಯಾಬರೆಗಳಲ್ಲಿ ಅವಕಾಶ ಸಿಗಬೇಕಾದಲ್ಲಿ ಸೌಂದರ್ಯವೊಂದಿದ್ದರೆ ಸಾಲದು, ಅವರಿಗೆ ನಟನೆ, ನೃತ್ಯದಂತಹ ಪ್ರತಿಭೆಯಿರಬೇಕು ಹಾಗೂ ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸಬೇಕು.
ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗಳಿಗೆ ಥಾಯ್ಲೆಂಡ್ ಪ್ರಸಿದ್ಧಿಯಾಗಿದೆ. ಇಲ್ಲಿನ ಹಲವಾರು ಆಸ್ಪತ್ರೆಗಳು ಪಾಶ್ಚಿಮಾತ್ಯ ದೇಶಗಳ ಆಸ್ಪತ್ರೆಗಳಷ್ಟು ದುಬಾರಿಯಲ್ಲ ಹಾಗೂ ಉತ್ತಮ ಸೌಲಭ್ಯಗಳನ್ನೂ ಸಹ ಹೊಂದಿವೆ. ಈ ಶಸ್ತ್ರಚಿಕಿತ್ಸೆಗಳಲ್ಲಿ ಗಂಡು ಸ್ತ್ರೀ ಜನನಾಂಗಗಳನ್ನು ಹಾಗೂ ಸ್ತನಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಇಂತಹ ಶಸ್ತ್ರಚಿಕಿತ್ಸೆಗಳು ಗಂಡುಮಕ್ಕಳು ವಯಸ್ಕರಾಗುವ ಮೊದಲೇ ನಡೆಸಿದಲ್ಲಿ ಯಶಸ್ವಿಯಾಗುತ್ತದೆ ಎನ್ನುತ್ತಾರೆ. ಶಸ್ತ್ರಚಿಕಿತ್ಸೆಗೆ ಮೊದಲು ಅಂಥವರು ಹಾರ್ಮೋನ್‌ಗಳನ್ನು ತೆಗೆದುಕೊಂಡಿರಬೇಕು.
ಕಥೋಯ್‌ಗಳನ್ನು ಥಾಯ್ಲೆಂಡಿನ ಕಾನೂನು ಅವರನ್ನು ಪ್ರತ್ಯೇಕವೆಂದು ಗುರುತಿಸುವುದಿಲ್ಲ. ಇತರರಂತೆ ಅವರಿಗೆ ಸಮಾನ ಹಕ್ಕುಗಳಿದ್ದರೂ ಸಹ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಸಹ ಅವರನ್ನು ಸರ್ಕಾರ ಹೆಣ್ಣೆಂದು ಪರಿಗಣಿಸುವುದಿಲ್ಲ. ಅವರ ಪಾಸ್‌ಪೋರ್ಟ್‌ಗಳಲ್ಲಿ ಪುರುಷರೆಂದೇ ಇರುತ್ತದೆ ಹಾಗೂ ಅವರೇನಾದರೂ ಅಪರಾಧ ಮಾಡಿ ಜೈಲಿಗೆ ಹೋದರೆ ಪುರುಷರ ಜೈಲುಗಳಲ್ಲೇ ಇರಬೇಕಾಗುತ್ತದೆ.
1996ರಲ್ಲಿ ಬರೇ ಕಥೋಯ್‌ಗಳೇ ಇರುವ ವಾಲಿಬಾಲ್ ತಂಡವೊಂದು ರಾಷ್ಟ್ರೀಯ ಛಾಂಪಿಯನ್ ಸಹ ಆಗಿತ್ತು. ಅವರ ಬದುಕನ್ನಾಧರಿಸಿದ ದ ಐರನ್ ಲೇಡೀಸ್ ಎಂಬ ಚಲನಚಿತ್ರವನ್ನು ಸಹ ತಯಾರಿಸಲಾಗಿತ್ತು. ಅದಾದ ನಂತರ ದೇಶದ ಹೆಸರಿಗೆ ಧಕ್ಕೆಬರಬಹುದೆನ್ನುವ ಕಾರಣದಿಂದ ಥಾಯ್ ಸರ್ಕಾರ ಕಥೋಯ್‌ಗಳನ್ನು ರಾಷ್ಟ್ರೀಯ ತಂಡಗಳಿಗೆ ಸೇರದಂತೆ ಹಾಗೂ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿತು.
ಥಾಯ್ಲೆಂಡಿನ ಮತ್ತೊಬ್ಬ ಪ್ರಖ್ಯಾತ ಕಥೋಯ್ ನೋಂಗ್ ತುಮ್ ಎಂದು ಪ್ರಸಿದ್ಧವಾಗಿರುವ ಪರಿನ್ಯ ಕಿಯಾಟ್‌ಬುಸಬ ಎಂಬಾಕೆ. 1998ರಲ್ಲಿ ಥಾಯ್ ಬಾಕ್ಸಿಂಗ್‌ನಲ್ಲಿ ಛಾಂಪಿಯನ್ ಆದ ಈಕೆ ತನ್ನ ಉದ್ದನೆಯ ಕೂದಲೊಂದಿಗೆ, ಲಿಪ್‌ಸ್ಟಿಕ್ ಹಾಗೂ ಮೇಕಪ್ ಬಳಸಿ ಆಖಾಡಕ್ಕಿಳಿಯುತ್ತಿದ್ದಳು ಹಾಗೂ ಸೋತ ಎದುರಾಳಿಗೆ ಚುಂಬನ ಸಹ ನೀಡುತ್ತಿದ್ದಳು. ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಯ ನಂತರ ಆಕೆ ವೃತ್ತಿಪರ ಬಾಕ್ಸಿಂಗ್‌ಗೆ ವಿದಾಯ ಹೇಳಿದಳು. ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗಾಗಿ ಹಣ ಸಂಪಾದಿಸಲೆಂದೇ ಆಕೆ ಥಾಯ್ ಬಾಕ್ಸಿಂಗ್‌ಗೆ ಬಂದಳೆಂದು ಹೇಳುತ್ತಾರೆ. ಆನಂತರ ಕೋಚ್ ಆಗಿ ಕೆಲಸಮಾಡಿದಳು. ಜೊತೆಗೆ ಮಾಡೆಲಿಂಗ್ ಮತ್ತು ನಟನೆ ಸಹ ಮಾಡಿದಳು. ಆಕೆಯ ಬದುಕಿನ ಮೇಲೆ 2003ರಲ್ಲಿ ಬ್ಯೂಟಿಫುಲ್ ಬಾಕ್ಸರ್ ಎಂಬ ಚಲನಚಿತ್ರವನ್ನು ಸಹ ನಿರ್ಮಿಸಲಾಗಿದೆ. 2005ರಲ್ಲಿ ನಿರ್ಮಿಸಿದ ದ ವಾರಿಯರ್ ಕಿಂಗ್ ಎಂಬ ಥಾಯ್ ಯುದ್ಧಕಲೆಯ ಚಿತ್ರದ ಖಳನಾಯಕಿಯ ಪಾತ್ರವಾದ ಮೇಡಮ್ ರೋಸ್ ಪಾತ್ರವನ್ನು ವಿಪರ್ಯಸ್ತ ಲಿಂಗಿಯೇ ಆಗಿದ್ದ ಜಿನ್ ಕ್ಸಿಂಗ್ ಎಂಬಾಕೆ ವಹಿಸಿದ್ದಳು.
ಮಿಮಿ ಎಂಬ ಫ್ಯಾಶನ್ ಅಂಕಣಗಾರ್ತಿ ಒಂದು ಸಂಪ್ರದಾಯಸ್ಥ ಕುಟುಂಬದಿಂದಲೇ ಬಂದವಳು. ಆಕೆ ಒಂದು ಪ್ರಖ್ಯಾತ ವಿಶ್ವವಿದ್ಯಾನಿಲಯದ ಪದವೀಧರೆ ಸಹ. ಆಕೆ ಕಥೋಯ್ ಆಗಬೇಕೆಂದಾಗ ಆಕೆಯ ಮನೆಯವರು ಆಕೆಯನ್ನು ವಿರೋಧಿಸಿ ಹೊರತಳ್ಳಲಿಲ್ಲ. ಮೊದಲು ಆಕೆ ಮಹಿಳಾ ಪತ್ರಿಕೆಗೆ ಅನುವಾದಕಿಯಾಗಿ ಕೆಲಸಮಾಡಿದಳು. ಎಲ್ಲ ಕಥೋಯ್‌ಗಳಿಗೂ ಈ ರೀತಿಯ ಅವಕಾಶ ಸಿಗುವುದಿಲ್ಲ. ಸಾಮಾನ್ಯವಾಗಿ ಕಥೋಯ್‌ಗಳಾಗಬೇಕೆಂದಾಗ ಮನೆಗಳಲ್ಲಿ, ವಿಶೇಷವಾಗಿ ತಂದೆ ವಿರೋಧಿಸುತ್ತಾನೆ. ಬಹುಪಾಲು ಕಥೋಯ್‌ಗಳು ಮನೆಬಿಟ್ಟು ಹೊರನಡೆಯಬೇಕಾಗುತ್ತದೆ.
ಬ್ಯಾಂಕಾಕ್‌ನಲ್ಲಿರುವ ಸುವಾನ್ ಡ್ಯುಸಿಟ್ ವಿಶ್ವವಿದ್ಯಾನಿಲಯವು ಕಥೋಯ್‌ಗಳಿಗೆ ವಿಶೇಷ ಆಮಂತ್ರಣ ನೀಡಿ ತನ್ನ ಪದವಿ ಕೋರ್ಸ್‌ಗಳಿಗೆ ಪ್ರವೇಶ ನೀಡುತ್ತದೆ. ಯಾವ ಅಂಜಿಕೆ, ಹಿಂಜರಿಕೆ ಇಲ್ಲದೆ ಈ ವಿಶ್ವವಿದ್ಯಾನಿಲಯಕ್ಕೆ ಬಂದು ಅವರು ಶಿಕ್ಷಣ ಮುಗಿಸಿ ಗೌರವಯುತ ಕೆಲಸಗಳಿಗೆ ಸೇರಿಕೊಳ್ಳಲೆಂಬುದು ಅದರ ಉದ್ದೇಶ. ಇಲ್ಲಿ ಕಥೋಯ್‌ಗಳು ಮಾತ್ರವಲ್ಲ ಇತರ ಎಲ್ಲರೂ ಇಲ್ಲಿ ಶಿಕ್ಷಣ ಪಡೆಯುತ್ತಾರೆ. ಥಾಯ್ಲೆಂಡಿನ ಸಂಸ್ಕೃತಿ ಸಚಿವಾಲಯದ ಕೆಲವು ಅಧಿಕಾರಿಗಳು ಸುವಾನ್ ಡ್ಯುಸಿಟ್‌ನ ಈ ಪ್ರಯೋಗದಿಂದಾಗಿ ಗೊಂದಲದಲ್ಲಿರುವ ಬಾಲಕರು ದಿಕ್ಕುತಪ್ಪಬಹುದೆಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು, 'ನಮ್ಮ ದೃಷ್ಟಿಯಲ್ಲಿ ಹುಡುಗರು, ಹುಡುಗಿಯರು ಹಾಗೂ ಲೇಡಿ-ಬಾಯ್‌ಗಳು ಎಲ್ಲರೂ ಒಂದೇ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು' ಎಂದಿದ್ದಾರೆ. ಆ ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ ಕಥೋಯ್‌ಗಳ ಸೌಂದರ್ಯ ಸ್ಪರ್ಧೆ ನಡೆಯುತ್ತದೆ. ಅಲ್ಲಿ ಆಯ್ಕೆಯಾದವರು ಥಾಯ್ಲೆಂಡಿನ ಜಗತ್ಪ್ರಸಿದ್ಧ ಕಥೋಯ್‌ಗಳ ಸೌಂದರ್ಯ ಸ್ಪರ್ಧೆಯಾದ ಮಿಸ್ ಟಿಫ್ಯಾನಿ ಯೂನಿವರ್ಸ್ ಸ್ಪರ್ಧೆಗೆ ಹೋಗುತ್ತಾರೆ.
2004ರಲ್ಲಿ ಚಿಯಾಂಗ್ ಮಾಯ್ ಟೆಕ್ನಾಲಜಿ ಶಾಲೆಯಲ್ಲಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಥೋಯ್ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಿತು. ಆ ಶಾಲೆಯಲ್ಲಿನ 1200 ವಿದ್ಯಾರ್ಥಿಗಳಲ್ಲಿ 200 ಕಥೋಯ್ ವಿದ್ಯಾರ್ಥಿಗಳಿದ್ದರಂತೆ!

4 ಕಾಮೆಂಟ್‌ಗಳು:
ಅದ್ಭುತ ಲೇಖನ ಸರ್..
ಇದನ್ನು ನಮ್ಮ ಮೋಟುಗೋಡೆಯಲ್ಲಿ ಲಿಂಕಿಸಿಕೊಂಡಿದ್ದೇವೆ: ನಿಮ್ಮ ಅನುಮತಿ ಇದೆ ಅಂದುಕೊಂಡು.
ಧನ್ಯವಾದಗಳು.
ಕಥೋಯ್ ಗಳ ಬಗ್ಗೆ ಉತ್ತಮ ಮಾಹಿತಿ ಹಂಚಿಕೊಂಡಿದ್ದೀರಿ...
ನಿಮ್ಮ ಈ ಲೇಖನ ಬಹಳ ಚೆನ್ನಾಗಿದೆ. ನಾನೂ ಆಲ್ಕಜಾರ್ ನೋಡಿದ್ದೇನೆ. ಅವರ ದೇಶದ ಜನರಂತೆ ನಮ್ಮ ಜನರೂ ತೃತೀಯ ಲಿಂಗಿಗಳ ಬಗ್ಗೆ ಪ್ರೀತಿ ಗೌರವ ತೋರಿಸಬೇಕು
ಆತ್ಮಗೌರವಕ್ಕೆ ಪೆಟ್ಟು ಬೀಳದಂತೆ ಜೋಪಾನ ಮಾಡುವುದು ಮತ್ತು ವೃತ್ತಿ ಪರತೆಯನ್ನು ರೂಪಿಸಿ ಪೋಷಿಸುವುದು ಸುಲಭದ ಕೆಲಸವಲ್ಲ. ಅದನ್ನು ಇವರು ಸಾಧಿಸಿದ್ದಾರೆ. ನಮ್ಮಲ್ಲಿ ಇನ್ನೂ ರಸ್ತೆಯ ಮೇಲೆ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಉಳಿಸಿದ್ದೇವೆ.
ಕಾಮೆಂಟ್ ಪೋಸ್ಟ್ ಮಾಡಿ