Monday, November 08, 2021

ಅಬ್ದುಲ್‌ ರಜಾಕ್‌ ಗುರ್ನಾ ಕತೆ - ನಡು ಮಧ್ಯಾಹ್ನದ ಚಂದ್ರ

 ನವೆಂಬರ್‌ 2021ರ ʻಸಂವಾದʼ ಪತ್ರಿಕೆಯಲ್ಲಿ ಪ್ರಕಟವಾಗಿರುವ 2021ರ ಸಾಹಿತ್ಯ ಕ್ಷೇತ್ರದ ನೋಬೆಲ ಪ್ರಶಸ್ತಿ ಪಡೆದಿರುವ ಅಬ್ದುಲ್‌ ರಜಾಕ್‌ ಗುರ್ನಾರವರ ನನ್ನ ಅನುವಾದಿತ ಕತೆ

ನಡು ಮಧ್ಯಾಹ್ನದ ಚಂದ್ರ 

ನಾನು ಮೊದಲಿಗೆ ನಕ್ಷೆಯ ಬಗ್ಗೆ ಕೇಳಿದ್ದು ನನ್ನ ಒಬ್ಬ ಮಾಸ್ತರರಿಂದ. ಅವರು ನಮಗೆ ರೀತಿಯ ಮಾಹಿತಿ ಕೊಡಬೇಕೆಂದೇನಿರಲಿಲ್ಲ, ಬಹುಶಃ ನನಗನ್ನಿಸುತ್ತಿದೆ ಅವರಿಗೆ ದಿನ ತೀರಾ ಬೇಸರದ ಭಾವದಲ್ಲಿದ್ದು ಅನಿರೀಕ್ಷಿತವಾಗಿ ವಿಷಯಾಂತರವಾಗಿರಬಹುದು. ಅವರು ಪಟ್ಟಣದಲ್ಲಿ ಪ್ರಾಥಮಿಕ ಶಾಲಾ ಮಾಸ್ತರರಾಗಿದ್ದರೂ ಅವರು ನಮ್ಮ ನಿಯತ ಮಾಸ್ತರರೇನಾಗಿರಲಿಲ್ಲ ಹಾಗೂ ಹೆಚ್ಚು ಓದಿಕೊಂಡವರೆಂಬ ಖ್ಯಾತಿಯನ್ನೂ ಹೊಂದಿದ್ದರು. ಅವರ ಹೆಸರು ಮಾಲಿಮ್ಹಸನ್ಅಬ್ದಲ್ಲಾ. ಅವರು ಇತ್ತೀಚೆಗಷ್ಟೇ ನಮ್ಮ ಪಕ್ಕದ ಮನೆಗೆ ಬಾಡಿಗೆಗೆ ಬಂದಿದ್ದರು - ಅಂಕಲ್ಅಬ್ದುಲ್ರೆಹಮಾನ್ಮತ್ತು ಬಿ ಫಾತಿಮಾರವರ ಮನೆಗೆ. ಅವರನ್ನು ನಾವು ಗೌರವದಿಂದ ಅಂಕಲ್ಮತ್ತು ಆಂಟಿ ಎಂದು ಕರೆಯುತ್ತಿದ್ದೆವು. ಅವರಿಗೆ ಮಕ್ಕಳಿರಲಿಲ್ಲ ಹಾಗೂ ಎರಡಂತಸ್ತಿನ ಮನೆ ಇತ್ತು, ಹಾಗಾಗಿ ಅವರಿಗೆ ನೆಲ ಅಂತಸ್ತಿನ ಮನೆಯ ಅವಶ್ಯಕತೆಯಿರಲಿಲ್ಲ. ಅಂಕಲ್ ಅಬ್ದುಲ್ರೆಹಮಾನ್ರವರೂ ಸಹ ಮಾಸ್ತರರಾಗಿದ್ದರೂ ಅದೂ ದೊಡ್ಡ ದರ್ಜೆಯ ಮಾಸ್ತರು. ಅವರು ಮಾಧ್ಯಮಿಕ ಶಾಲೆಯಲ್ಲಿ ಬೋಧಿಸುತ್ತಿದ್ದರು ಹಾಗೂ ಅವರ ಎಲ್ಲ ಬೋಧನೆಯು ಇಂಗ್ಲಿಶ್ ನಲ್ಲೇ ಇರುತ್ತಿತ್ತು - ಅವರ ವ್ಯಾಸಂಗ ಕಂಪಾಲಾದಲ್ಲಿನ ಮಕೆರೇರೆ ವಿಶ್ವವಿದ್ಯಾನಿಲಯದಲ್ಲಾಗಿತ್ತು. ಸಮಯದಲ್ಲಿ ಮಾಧ್ಯಮಿಕ ಶಾಲೆಯ ಎಲ್ಲಾ ಅಧ್ಯಾಪಕರೂ ಯೂರೋಪಿಯನ್ನರಾಗಿದ್ದು ಅಂಕಲ್ಅಬ್ದುಲ್ರೆಹಮಾನ್ರವರಿಗೆ ಮಹಾನ್ಅಧ್ಯಾಪಕರ ನಡುವೆ ಪಾಠ ಮಾಡುವುದು ಒಂದು ರೀತಿಯ ವರ್ಚಸ್ಸು ಹೆಚ್ಚಿಸಿತ್ತು. ಅವರು ಮತ್ತು ಮಾಲಿಮ್ಹಸನ್ ಬಹುಶಃ ಮೊದಲಿನಿಂದಲೂ ಪರಸ್ಪರ ಪರಿಚಯವಿದ್ದರು ಎನ್ನಿಸುತ್ತದೆ, ಬಹುಶಃ ಅವರು ಜೊತೆಯಲ್ಲೇ ಚಿಕ್ಕವರಿದ್ದಾಗ ವ್ಯಾಸಂಗ ಮಾಡಿದ್ದರೂ ಇರಬಹುದು.

ನಾನು ಮಾಲಿಮ್ಹಸನ್ರವರ ಬಳಿ ಟ್ಯೂಶನ್ಗೆ ಹೋಗಬೇಕೆನ್ನುವುದು ನನ್ನ ಅಮ್ಮನ ವಿಚಾರವಾಗಿತ್ತು. ಹೆಚ್ಚಿನ ಟ್ಯೂಶನ್ ಅವಶ್ಯಕತೆಯೇನೂ ಇರಲಿಲ್ಲ. ಕೆಲವೊಮ್ಮೆ ಮಕ್ಕಳು ಅವರ ಅಮ್ಮ ಅಪ್ಪನ ಜೊತೆ ನೆಂಟರನ್ನು ನೋಡಲು ಹೋಗಿಯೋ ಅಥವಾ ಖಾಯಿಲೆ ಬಿದ್ದವರ ರೀತಿಯೋ ನಾವು ಯಾವುದೇ ತರಗತಿಗಳನ್ನು ತಪ್ಪಿಸಿಕೊಂಡಿರಲಿಲ್ಲ ಅಥವಾ ಕಲಿಕೆಯಲ್ಲಿ ಹಿಂದುಳಿದಿರಲಿಲ್ಲ,  ಕಾಲದಲ್ಲಿ ಮಕ್ಕಳು ಖಾಯಿಲೆ ಬಿದ್ದರೆ ಅದು ಕೆಲ ದಿನಗಳು ಮಾತ್ರವಾಗಿರಲಿಲ್ಲ, ತಿಂಗಳಾನುಗಟ್ಟಲೆಯಾಗಿರುತ್ತಿತ್ತು ಹಾಗೂ ಅಷ್ಟೂ ಕಾಲ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು, ಕೆಲವರು ಗೌರವ, ಪ್ರತಿಷ್ಠೆಯ ವಿಷಯವೆಂದು ಕಲಿಕೆಯಿಂದಲೇ ದೂರವಿರುತ್ತಿದ್ದರು. ನಮ್ಮ ತಂದೆ ತಾಯಿಯವರಿಗೆ ನಮ್ಮ ಮುಂದಿನ ಉದ್ಯೋಗದ ಬದುಕಿನ ಬಗ್ಗೆ ಹಾಗೂ ಅದಕ್ಕೆ ಬೇಕಾದ ನಿರಂತರ ಕಲಿಕೆಯ ಬಗ್ಗೆ ಮಹತ್ತರವಾದ ಬಯಕೆಗಳೇನೂ ಇರಲಿಲ್ಲ - ಶಾಲೆಯಲ್ಲಿನ ಭಾರತೀಯ ವಿದ್ಯಾರ್ಥಿಗಳ ಹಾಗೆ, ಏಕೆಂದರೆ ಅವರ ತಂದೆ ತಾಯಿಯರು ತಮ್ಮ ಮಕ್ಕಳು ವೈದ್ಯರೋ ಅಥವಾ ವಕೀಲರೋ ಅಥವಾ ಗಣಿತಶಾಸ್ತ್ರದ ಮೇಧಾವಿಗಳಾಗಬೇಕೆಂದು ಬಾಲ್ಯದಿಂದಲೇ ಟ್ಯೂಶನ್ಗೆ ಕಳುಹಿಸುವ ಪರಿಪಾಠ ಇಟ್ಟುಕೊಂಡಿರುತ್ತಾರೆ.

ಅಂತಹ ಭವ್ಯ ಬದುಕಿನ ಬಗ್ಗೆ ಅವರು ಊಹಿಸಿಕೊಂಡಿರುವುದೂ ಇಲ್ಲ, ಆದರೂ ನಮ್ಮ ಶಾಲಾ ಕಲಿಕೆಯ ಬಗ್ಗೆ ಅವರಿಗೆ ಆತಂಕ ಪಡುವಂಥದ್ದೇನೂ ಇರಲಿಲ್ಲ ಎಂದು ನನಗನ್ನಿಸುತ್ತದೆ. ನನ್ನ ತಮ್ಮ ಹಾಜಿ ಶಾಲೆಯಲ್ಲಿ ಒಂದು ರೀತಿಯಲ್ಲಿ ಯಶಸ್ವಿಯಾಗಿದ್ದ ಅಥವಾ ಕನಿಷ್ಠ ಅಧ್ಯಾಪಕರು ಅವನನ್ನು ಇಷ್ಟಪಡುತ್ತಿದ್ದರು, ಹೊಗಳುತ್ತಿದ್ದರು ಹಾಗೂ ಅವನಿಗೆ ಸಾಕಷ್ಟು ಗೆಳೆಯರಿದ್ದರು. ಅವನು ನನಗಿಂತ ಒಂದು ವರ್ಷ ತರಗತಿಯಲ್ಲಿ ಹಿಂದಿದ್ದರೂ ಅಧ್ಯಾಪಕರು ಅಣ್ಣನಾದ ನನ್ನನ್ನು ಅನುಸರಿಸು ಎಂದು ಅವನಿಗೆ ಹೇಳುವ ಬದಲು ಎಲ್ಲರೂ ಅವನನ್ನು ಅನುಸರಿಸಿ ಬುದ್ಧಿ ಕಲಿತುಕೊ ಎಂದು ನನಗೆ ಹೇಳತೊಡಗಿದ್ದರು. ನಾನು ಆತ್ಮಸಾಕ್ಷಿಗೆ ವಿರುದ್ಧ ಹೋಗುವನಲ್ಲವಾದುದರಿಂದ ನನಗೆ ಎಲ್ಲವನ್ನೂ ವಿವರಿಸಿ ಹೇಳಬೇಕಾಗುತ್ತಿತ್ತು ಹಾಗೂ ಪ್ರತಿ ಹೆಜ್ಜೆ ಇಡುವ ಮೊದಲು ಅನಿಶ್ಚಿತತೆಯ ಭಾವದಿಂದ ಹಿಂದೇಟು ಹಾಕುತ್ತಿದ್ದೆ. ಕೆಲವೊಮ್ಮೆ ಜನ ನಮ್ಮಿಬ್ಬರಲ್ಲಿ ದೊಡ್ಡವರು ಯಾರು ಎಂದು ಸಹ ಕೇಳುತ್ತಿದ್ದರು.

ನಮ್ಮ ತಂಗಿ ರೇಂಡಾ, ಆಗಷ್ಟೇ ಶಾಲೆಗೆ ಹೋಗಲು ಪ್ರಾರಂಭಿಸಿದ್ದಳು, ಆದರೆ ನಾವು ಬಿ ಫಾತ್ಮಾರವರ ಮನೆಗೆ ಟ್ಯೂಶನ್ಗೆ ಹೋಗುತ್ತೇವೆ ಎಂದು ತಿಳಿದ ತಕ್ಷಣ ಅವಳನ್ನು ಸೇರಿಸುವಂತೆ ಹಠ ಮಾಡಿದಳು. ಬಿ ಫಾತ್ಮಾ ಅವಳ ಮೆಚ್ಚಿನ ಆಂಟಿಯಾಗಿದ್ದು ಅವಳು ಸಣ್ಣ ಮಗುವಾಗಿದ್ದಾಗಿನಿಂದಲೂ ಮುದ್ದು ಮಾಡಿ ಹಾಳು ಮಾಡಿದ್ದರು.

ಮಧ್ಯಾಹ್ಷದ ಟ್ಯೂಶನ್ಬಗ್ಗೆ ನಮ್ಮ ತಂದೆ ಏನು ಆಲೋಚಿಸಿದ್ದರೆಂದು ನನಗೆ ತಿಳಿದಿಲ್ಲ. ನಾನು ಪಾಠ ಕೇಳುವಾಗ ಸದಾ ಕಣ್ಣು ತೆರೆದಿರಬೇಕು, ಗಮನ ಹರಿಸಬೇಕು ಹಾಗೂ ಎಚ್ಚರದಿಂದಿರಬೇಕು ಎಂದು ಪದೇಪದೆ ಹೇಳುತ್ತಿದ್ದರು. ನಾನು ಶಾಲೆಯಲ್ಲಿಯೂ ಅದೇ ಪುನರಾವರ್ತನೆಯ ಪಠನವನ್ನು ಕೇಳಬೇಕಾಗಿತ್ತು. ನೀನು ಜಗತ್ತಿಗೆ ಕಣ್ಣು ತೆರೆದುಕೊಂಡಿರಬೇಕು ಎಂದು ಹೇಳುತ್ತಿದ್ದರು.  ಆದರೆ ಮಾಲಿಮ್ಹಸನ್ ಮಾಸ್ತರು ಅದನ್ನು ನನಗೆ ಹೇಳಿಕೊಡುತ್ತಾರೆಂಬುದನ್ನು ಅವರು ನಿರೀಕ್ಷಿಸಿರಲಿಕ್ಕಿಲ್ಲ. ಆದರೆ, ನನ್ನನ್ನು ಮಾಲಿಮ್ಹಸನ್ಮಾಸ್ತರ ಬಳಿ ಏಕೆ ಟ್ಯೂಶನ್ನಿಗೆ ಕಳುಹಿಸಿದರೆಂಬುದರ ಕುರಿತು ನಾನು ಹೆಚ್ಚು ಚಿಂತಿಸಲಿಲ್ಲ. ನಮ್ಮ ಶಿಕ್ಷಣಕ್ಕೆ ನಮ್ಮ ತಾಯಿ ತೋರುತ್ತಿರುವ ತಾಯಿ ಮಮತೆ ಇರಬಹುದು ಎಂದು ನಾನು ಊಹಿಸಿದೆ. ಆದರೆ, ನಮ್ಮ ತಂದೆ ಆಕೆಯ ಉತ್ಸುಕತೆಯನ್ನು ಯಾವಾಗಲೂ ಅನುಮೋದಿಸುತ್ತಿರಲಿಲ್ಲ ಹಾಗೂ ಕೆಲವೊಮ್ಮೆ ನಾವು ಶಾಲೆಯಿಂದ ಪಡೆಯುತ್ತಿದ್ದ ಜ್ಞಾನದ ನಿರುಪಯುಕ್ತತೆಯ ಬಗ್ಗೆ ದೂರುತ್ತಿದ್ದರು.  ಇಂಗ್ಲಿಷ್ ನರ್ಸರಿ ಪದ್ಯಗಳನ್ನು ಬಾಯಿಪಾಠ ಮಾಡುವುದರಿಂದಾಗಲೀ ಅಥವಾ ಆಸೆಬುರುಕರ ಸಾಹಸಗಾಥೆಗಳನ್ನು ಕೇಳುವುದರಿಂದಾಗಲೀ ಏನು ಪ್ರಯೋಜನವಿದೆ ಎನ್ನುತ್ತಿದ್ದರು. ಯಾವುದು ಉಪಯುಕ್ತ, ಯಾವುದು ನಿರುಪಯುಕ್ತ ಎನ್ನುವುದರ ಕುರಿತು ಅವರದೇ ವಿಚಾರಗಳನ್ನು ಹೊಂದಿದ್ದರೂ ನಮ್ಮ ತಾಯಿಗೆ ಶಾಲೆಯೆಂದರೆ ಜ್ಞಾನದ ಆಗರವೆಂದು ಪರಿಗಣಿಸಿದ್ದರು. ಇಂಗ್ಲಿಷ್ ಮತ್ತು ಗಣಿತ ಉಪಯುಕ್ತವಾಗಿದ್ದವು, ಏಕೆಂದರೆ ಅವುಗಳಲ್ಲಿ ಪಾಸಾದರೆ ನಾವು ಮಾಧ್ಯಮಿಕ ಶಾಲೆಗೆ ಹೋಗಬಹುದಿತ್ತು.  ಅದು ಏನೇ ಆದರೂ, ದೇಶದಲ್ಲಿನ ಇತರರಿಗಿಂತ ಹೆಚ್ಚು ಪುಸ್ತಕಗಳನ್ನು ಓದಿರುವ ಹಾಗೂ ಬಿಡುವಿನ ಸಮಯ ಹೊಂದಿರುವ ಮಾಸ್ತರರೊಬ್ಬರು ಮನೆಯ ಪಕ್ಕದಲ್ಲೇ ಇದ್ದರು.

ಮಾಲಿಮ್ಹಸನ್ನನಗೆ ಮಾಸ್ತರರಾಗುವ ಮೊದಲೇ ಅವರು ಯಾರೆಂಬುದು ನನಗೆ ತಿಳಿದಿತ್ತು.  ಅವರು ನನ್ನೊಂದಿಗೆ ಎಂದೂ ಮಾತನಾಡಿರಲಿಲ್ಲ, ಆದರೆ ಯಾರಾದರೂ ಅಪರಿಚಿತರು ಅವರು ಯಾರೆಂದು ಕೇಳಿದ್ದಲ್ಲಿ ನಾನು ಯಾವುದೇ ಸಂಕೋಚ ಇಲ್ಲದೆ ಅವರ ಹೆಸರನ್ನು ಹೇಳಬಲ್ಲವನಾಗಿದ್ದೆ. ಅವರು ಕೆಲವೊಮ್ಮೆ ಸಂಗೀತ ಕಚೇರಿಯಲ್ಲಿ ಉದ್ವಾದ್ಯ ನುಡಿಸುತ್ತಿದ್ದರು ಎನ್ನುವುದು ಸಹ ನನಗೆ ತಿಳಿದಿತ್ತು. ಒಂದು ದಿನ ನಮ್ಮ ತಂದೆ ಈದ್ಸಂಗೀತ ಗೋಷ್ಠಿಗೆ ಹೋಗಲು ಟಿಕೆಟ್ಟುಗಳನ್ನು ತಂದಿದ್ದರು. ಗೋಷ್ಠಿಗೆ ಅವರು ಬರಲಿಲ್ಲ ಏಕೆಂದರೆ ಸಂಗೀತ ಅವರಿಗೆ ಯಾವಾಗಲೂ ತಲೆನೋವು ತರಿಸುತ್ತಿತ್ತು ಹಾಗೂ ತಾರಬ್ಹಾಡುಗಳಲ್ಲಿನ ಪ್ರೇಮ ವೇದನೆ ಅವರಿಗೆ ಮುಜುಗರ ತರುತ್ತಿತ್ತು. ರಾತ್ರಿಯ ಸಂಗೀತಗೋಷ್ಠಿಯಲ್ಲಿ ಮಾಲಿಮ್ಹಸನ್ಇದ್ದರು ಹಾಗೂ ಅವರು ಕಪ್ಪನೆ ಸೂಟ್ಮತ್ತು ಬೋ ಟೈ ಧರಿಸಿದ್ದರು, ಸಾಮಾನ್ಯವಾಗಿ ಅಂತಹ ಧಿರಿಸನ್ನು ಬೇರೆ ಯಾವ ಸಮಯಗಳಲ್ಲೂ ಯಾರೂ ಧರಿಸುವುದಿಲ್ಲ. ಅದು ಈಜಿಪ್ಟಿನ ಸಂಗೀತಗೋಷ್ಠಿಯ ಮೇಳದವರ ಅನುಕರಣೆಯಾಗಿದ್ದು ಅವರು ತಮ್ಮ ಅಧುನಿಕತೆಯನ್ನು ವ್ಯಕ್ತಪಡಿಸಲು ರೀತಿ ಧರಿಸುತ್ತಿದ್ದರು ಹಾಗೂ ನಮ್ಮ ತಾರಬ್ಸಂಗೀತ ಹಾಗೂ ಸಂಗೀತಕಾರರ ವಸ್ತ್ರಗಳ ಮೇಲೂ ಮಹತ್ತರ ಪರಿಣಾಮ ಬೀರಿತ್ತು.

ಮಾಲಿಮ್ಹಸನ್ ನಡತೆಯಲ್ಲಿ ಎಂಥದೋ ಶಿಸ್ತಿನ ಭಾವ ಕಾಣುತ್ತಿತ್ತು. ಯಾವಾಗಲೂ ಒಂಟಿಯಾಗಿರುವಂತೆ ಮತ್ತು ಅಪನಂಬಿಕೆ ಹೊಂದಿರುವಂತೆ ಇರುತ್ತಿದ್ದರು, ತುಟಿಯಂಚಿನಲ್ಲಿ ಮಾತನಾಡುತ್ತಿದ್ದರು ಹಾಗೂ ಎಂದಿಗೂ ತಮ್ಮ ಮಾತಿನಲ್ಲಿ ಇತರರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ. ನಡೆದಾಡುವಾಗ ತಲೆಬಗ್ಗಿಸಿರುತ್ತಿದ್ದರು ಹಾಗೂ ಯಾರನ್ನಾದರೂ ಹಾರೈಸಿ ಮಾತನಾಡಿದರೆ ಸಂಕೋಚ ತುಂಬಿರುತ್ತಿತ್ತು ಹಾಗೂ ಕೆಲವೊಮ್ಮೆ ಕಿರಿಕಿರಿ ಎನ್ನಿಸುತ್ತಿತ್ತು. ನಮ್ಮ ನೆರೆಹೊರೆಯ ಇತರ ಗಂಡಸರಲ್ಲಿ ರೀತಿಯ ನಡವಳಿಕೆ ಇರಲಿಲ್ಲ, ಅವರೆಲ್ಲಾ ಜೋರಾಗಿ ಹಾರೈಸಿ ಮಾತನಾಡುತ್ತಿದ್ದರು, ಕೈ ಕುಲುಕಲು ರಸ್ತೆಯ ಬದಿಗೆ ಅಥವಾ ಸೈಕಲ್ಇಳಿದು ಬರುತ್ತಿದ್ದರು ಹಾಗೂ ರಸ್ತೆಗಳಲ್ಲಿ ಜೋರು ದನಿಯಲ್ಲಿ ಮಾತನಾಡುತ್ತಿದ್ದರು.  ಅವರೆಲ್ಲಾ ತಡ ಮಧ್ಯಾಹ್ನ ಅಥವಾ ಸಂಜೆ ಹೋಟೆಲುಗಳಲ್ಲಿ ಕೂತು ಮಾತನಾಡುತ್ತಾ, ವಾದ ಮಾಡುತ್ತಾ, ಗಾಳಿಮಾತು ಪಿಸುಗುಟ್ಟುತ್ತಾ ಜಗತ್ತಿನ ಎಲ್ಲ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದರು. ತಂಪಾಗಿರುವ ದಿನಗಳಲ್ಲಿ ಗಂಡಸರು ಮನೆಯಲ್ಲಿರುವಂತೆ ರಸ್ತೆಗಳಲ್ಲಿಯೂ ತುಂಬಿರುತ್ತಿದ್ದರು. ಕಾರಣದಿಂದಾಗಿ ಕೆಲವು ರಸ್ತೆಗಳನ್ನು ತಪ್ಪಿಸಿಕೊಂಡು ಹೋಗುವುದು ಅನಿವಾರ್ಯವಾಗುತ್ತಿತ್ತು. ಇತರ ಗಂಡಸರಂತೆ ಮಾಲಿಮ್ಹಸನ್ಎಂದೂ ಜೋರಾಗಿ ಅಥವಾ ಅನವಶ್ಯಕವಾದುದನ್ನು ಮಾತನಾಡುತ್ತಿರಲಿಲ್ಲ. ನನ್ನ ತಂದೆಯೂ ಅಷ್ಟೆ, ಏಕೆಂದರೆ ಅಂತಹ ಕರ್ಕಶದನಿಯ ಮಾತುಗಳು ಘನತೆಯುತವಲ್ಲ ಎಂದು ಭಾವಿಸಿದ್ದರು ಹಾಗೂ ಯಾರೊಂದಿಗೂ ಅಥವಾ ಯಾವುದೇ ವಿಷಯದ ಕುರಿತೂ ಜೋರುದನಿಯಲ್ಲಿ ಮಾತನಾಡಿದವರಲ್ಲ. ಆದರೆ ಅವರು ಹೋಟೆಲುಗಳಲ್ಲಿ ಗಂಟೆಗಟ್ಟಲೆ ಕುಳಿತು ರಾಜಕೀಯದ ಬಗ್ಗೆ ಮಾತನಾಡುತ್ತಿದ್ದರು, ಬಹುಶಃ ಮಾಲಿಮ್ಹಸನ್ಹಾದಿಯಲ್ಲಿ ಹೋಗುವಾಗ ಅಲ್ಲಿ ಕೆಲನಿಮಿಷ ಕೂತು ಕಾಫಿ ಕುಡಿದು ಹೊರಟುಹೋಗುತ್ತಿದ್ದರು.

ಎಲ್ಲವೂ ನನಗೆ ಈಗ, ಅವರ ಬಗ್ಗೆ ಆಲೋಚಿಸುವಾಗ ಮತ್ತು ಅವರನ್ನು ವರ್ಣಿಸಲು ಪ್ರಯತ್ನಿಸುವಾಗ ವಿವರಗಳು ನೆನಪಾಗುತ್ತಿವೆ. ಅವರು ನಮ್ಮ ಪಕ್ಕದ ಮನೆಗೆ ಬಾಡಿಗೆಗೆ ಬಂದಾಗ ನಾವು ಗಮನಿಸಿರಲೇ ಇಲ್ಲ. ಗಂಡಸರು ಎಷ್ಟೋ ಸಾರಿ ಕೆಳಮಹಡಿಯಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆದು ಅವರೇ ವಾಸಿಸುತ್ತಿದ್ದರು. ಬಹುಶಃ ಅವರು ಪಟ್ಟಣದಲ್ಲಿ ಕೆಲಸಮಾಡುತ್ತಿದ್ದು ಅವರ ಕುಟುಂಬಗಳು ದೂರದ ಹಳ್ಳಿಗಳಲ್ಲಿ ಇರುತ್ತಿದ್ದವು.  ಅಥವಾ ಅವರ ಕುಟುಂಬದ ಮನೆಗಳಲ್ಲಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮಂದಿರು, ಅವರ ಮಕ್ಕಳು ಹೆಚ್ಚಿನ ಸಂಖ್ಯೆಗಳಲ್ಲಿದ್ದು ಅವರೆಲ್ಲಾ ಕಿರುಚಾಡುತ್ತಾ, ಬೈದಾಡುತ್ತಾ ಇದ್ದು ಸ್ಥಳಾವಕಾಶದ ಕೊರತೆಯಿದ್ದಿರಬಹುದು. ಅಥವಾ ಅವರದೇ ವಿವರಿಸಲಾಗದ ಸಂಕೀರ್ಣ ಕಾರಣಗಳಿಗಾಗಿ ಸ್ವಚ್ಛಂದದ ಉಸಿರಾಟಕ್ಕಾಗಿ ಅಥವಾ ತಮ್ಮದೇ ಜೀವನಶೈಲಿಯಲ್ಲಿ ಬದುಕಲು ರೀತಿ ಒಂಟಿಯಾಗಿ ಬದುಕುತ್ತಿದ್ದರು ಎನ್ನಿಸುತ್ತದೆ.

ಮನೆಯ ಖರ್ಚಿಗೆ ನಮ್ಮ ತಂದೆ ತಾಯಿ ಪರಸ್ಪರ ಮಾತನಾಡಿ ತೀರ್ಮಾನಿಸಿಕೊಂಡಿದ್ದ ಹಣವನ್ನು ನಮ್ಮ ತಂದೆ ನೀಡಬೇಕಾಗಿತ್ತೆಂದು ನನಗನ್ನಿಸಿತ್ತು. ವಿಷಯದಲ್ಲಿ ಯಾವಾಗಲೂ ಅವರಿಬ್ಬರ ನಡುವೆ ವಾದವಿವಾದಗಳು ನಡೆಯುವುದು ಸಾಮಾನ್ಯವಾಗಿತ್ತು. ನನ್ನ ತಾಯಿ ತನ್ನ ಸಡಿಲ ಕೈನಿಂದಾಗಿ ಪ್ರಖ್ಯಾತರಾಗಿದ್ದರು.  ಇದನ್ನು ಅರಿತಿದ್ದ ನೆರೆಹೊರೆಯವರು ಮತ್ತು ಸಂಬಂಧಿಕರು ನಮ್ಮ ತಾಯಿಯ ಬಳಿ ಬಂದು ಕಣ್ಣೀರು ಹಾಕುತ್ತಾ ತಮ್ಮ ದುರಾದೃಷ್ಟದ ಕತೆ ಹೇಳಿಕೊಂಡರೆ, ನನ್ನ ತಾಯಿಯೂ ಅವರ ಜೊತೆ ಕಣ್ಣೀರು ಹಾಕಿ ತನ್ನಿಂದ ಏನು ಸಾಧ್ಯವೋ ಅವನ್ನು - ತನ್ನ ಅತ್ಯುತ್ತಮ ಕಂಗಾ (ಜಾಂಜಿಬಾರ್ ಮಹಿಳೆಯರು ಧಿರಿಸು), ತನ್ನ ಒಡವೆ ಅಥವಾ ನಮ್ಮ ಪಾಲಿನ ಊಟವನ್ನೋ ಕೊಟ್ಟುಬಿಡುತ್ತಿದ್ದರು. ಆಕೆಯ ನಡತೆಗೆ ಪ್ರತಿಕ್ರಿಯೆಯಾಗಿ ನಮ್ಮ ತಂದೆ ಹತಾಶ ಸಿಟ್ಟು ಅಥವಾ ಅಪನಂಬಿಕೆಯ ನಗುವನ್ನು ವ್ಯಕ್ತಪಡಿಸುತ್ತಿದ್ದರು, ಆದರೆ ನನ್ನ ತಾಯಿಗೆ ತನ್ನ ನಡತೆಯನ್ನು ಸರಿಪಡಿಸಿಕೊಳ್ಳಲಾಗುತ್ತಿರಲಿಲ್ಲ. ನನಗೆ ತಕ್ಷಣ ಹೊಳೆಯಲಿಲ್ಲ, ಆದರೆ ನಂತರ ನನಗನ್ನಿಸತೊಡಗಿತು ನಮ್ಮ ಹೆಚ್ಚಿನ ಟ್ಯೂಶನ್ಮಾಲಿಮ್ಹಸನ್ಲಾಭಕ್ಕಾಗಿಯೋ ಅಥವಾ ಮಕ್ಕಳಾದ ನಮ್ಮ ಲಾಭಕ್ಕಾಗಿಯೋ? ಅದೇನೇ ಆದರೂ ನಾವು ಒಂದು ಮಧ್ಯಾಹ್ನ ಟ್ಯೂಶನ್ಪ್ರಾರಂಭಿಸಿದೆವು.

ಮಾಲಿಮ್ಹಸನ್ನಮಗೆ ಪಾಠ ಹೇಳಿಕೊಡುತ್ತಿದ್ದ ಕೋಣೆ ಮನೆಯಲ್ಲಿ ಮುಂಭಾಗದಲ್ಲಿಯೇ ಇತ್ತು. ಅದಕ್ಕೆ ಎರಡು ದೊಡ್ಡ ಕಿಟಕಿಗಳಿದ್ದು ನೆಲದಿಂದ ಚಾವಣಿಯವರೆಗೆ ಇದ್ದವು. ಒಂದು ಕಿಟಕಿ ಮುಂಭಾಗದಲ್ಲಿದ್ದರೆ ಮತ್ತೊಂದು ಬದಿಯಲ್ಲಿತ್ತು ಹಾಗೂ ಕಿಟಕಿಗಳನ್ನು ತೆರೆದಿದ್ದರಿಂದ ಮಧ್ಯಾಹ್ನದ ಬೆಳಕು ಕೋಣೆಯೊಳಗೆಲ್ಲಾ ಚೆಲ್ಲಿತ್ತು. ಅಲ್ಲಿದ್ದ ಪೀಠೋಪಕರಣ ಎಂದರೆ ನಾಲ್ಕು ಗಡಸು ಕುರ್ಚಿಗಳು ಹಾಗೂ ಕಿಟಕಿಯ ಪಕ್ಕದಲ್ಲಿದ್ದ ಒಂದು ಸಣ್ಣ ಮೇಜು. ನಾವು ಅಲ್ಲಿಗೆ ಹೋದಾಗ ಮಾಲಿಮ್ಹಸನ್ಮೇಜಿನ ಮುಂದೆ ಕೂತಿದ್ದರು.  ಅದೊಂದು ವಾಸದ ಮನೆಗಿಂತ ಒಂದು ಸರ್ಕಾರಿ ಕಚೇರಿ ಅನ್ನಿಸುತ್ತಿತ್ತು, ಕನಿಷ್ಠ ಪೀಠೋಪಕರಣ ಹಾಗೂ ಜಮಖಾನೆಯಿಲ್ಲದ ಬೋಳು ಕಾಂಕ್ರೀಟ್ನೆಲ. ಅವರ ಉದ್ಅಲ್ಲೇ ಸ್ಟ್ಯಾಂಡ್ಒಂದರ ಮೇಲೆ ಗೋಡೆಗೆ ಒರಗಿಸಿಟ್ಟಿದ್ದರು.

ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಹೋದಾಗ ಹೊಸ ಅಧ್ಯಾಪಕರನ್ನು ಭೇಟಿ ಮಾಡುವ ತಲ್ಲಣ, ನಡುವಕದ ಅನುಭವ ನನಗೆ ಇಷ್ಟವಾಗುತ್ತಿತ್ತು. ಆದರೆ ಮಾಲಿಮ್ಹಸನ್ರವರ ಕೆಳಬಗ್ಗಿಸಿದ ದೃಷ್ಟಿ ಮತ್ತು ಕತ್ತರಿಸಿದ ಮೀಸೆ ಅವರು ಏಕಕಾಲದಲ್ಲಿ ದುಮ್ಮಾನದಲ್ಲಿರುವಂತೆ ಮತ್ತು ಹೆದರಿಸುವಂತೆ ಕಾಣುತ್ತಿತ್ತು. ನಾನು ಬಾಗಿಲ ಹೊಸ್ತಿಲ ಬಳಿಯೇ ನನ್ನ ಚಪ್ಪಲಿಗಳನ್ನು ಒಗೆದು ನನ್ನ ಮೊದಲ ತರಗತಿಗೆ ಒಂದು ರೀತಿಯ ಬೇಸರದ ಭಾವನೆಯಿಂದ ಪ್ರವೇಶಿಸಿದೆ. ನಮ್ಮ ಶಾಲಾ ನೋಟ್ಬುಕ್ಗಳನ್ನು ತರುವಂತೆ ನಮಗೆ ಮೊದಲೇ ಹೇಳಿದ್ದರು ಹಾಗೂ ನಮ್ಮನ್ನು ಕೋಣೆಯ ಎರಡು ಮೂಲೆಗಳಲ್ಲಿ ಒಬ್ಬೊಬ್ಬರನ್ನು ಕೂಡ್ರಿಸಿ ನಮ್ಮ ನೋಟ್ಬುಕ್ಗಳನ್ನು ಕೆಲ ಕ್ಷಣ ಪರಿಶೀಲಿಸಿದರು. ನಂತರ ನಮಗೆ ಒಂದಷ್ಟು ಉತ್ತರಿಸಲು ಪ್ರಶ್ನೆಗಳನ್ನು ಕೊಟ್ಟು ಅವುಗಳನ್ನು ಉತ್ತರಿಸಲು ನಾವು ಹೆಣಗಾಡುವುದನ್ನು ನೋಡುತ್ತಾ ಕೂತರು. ಅವರು ಮಾತನಾಡಿದಾಗ ಅವರ ಧ್ವನಿಯಲ್ಲಿ ಸಂಕೋಚ, ಅಳುಕು ಇತ್ತು ಹಾಗೂ ಅವರು ತಮ್ಮ ಧ್ವನಿಯನ್ನೇ ಬಳಸಿ ಎಷ್ಟೋ ವರ್ಷಗಳಾಗಿವೆಯೇನೋ ಅನ್ನಿಸುತ್ತಿತ್ತು. ನಾವು ಅವರೊಟ್ಟಿಗೆ ಮಾತನಾಡಿದ್ದೇ ಕಡಿಮೆ, ಕಣ್ಣಿಗೆ ಕಣ್ಣೂ ಕೊಟ್ಟು ನೋಡಲಿಲ್ಲ. ಇದೇ ರೀತಿಯ ಬಿಗಿ ವಾತಾವರಣದಲ್ಲಿ ಮೂರು ವಾರ ಕಳೆದವು - ನಾವು ವಾರಕ್ಕೆರಡು ಬಾರಿ ಅವರ ಬಳಿ ಟ್ಯೂಶನ್ಗೆ ಹೋಗುತ್ತಿದ್ದೆವು. ನಾಲ್ಕನೇ ವಾರ ನಾವು ಹೋದಾಗ ಕಿಟಕಿಯ ಕೆಳಭಾಗದ ಬಾಗಿಲನ್ನು ಮಧ್ಯಾಹ್ನದ ಬಿಸಿಲು ತಡೆಯಲು ಅರ್ಧ ಮುಚ್ಚಲಾಗಿತ್ತು. ಅಲ್ಲೇ ಒಂದು ಸಣ್ಣ ಉಣ್ಣೆಯ ಕಂಬಳಿ ಸಹ ಇತ್ತು. ನಾವು ಹೆಚ್ಚು ತರಲೆ ಮಾಡುವ ಹುಡುಗರಲ್ಲ ಎಂದು ಅವರಿಗೆ ಸ್ಪಷ್ಟವಾದ ಮೇಲೋ ಏನೋ ನಮ್ಮ ಅಧ್ಯಾಪಕರು ಬಿಗಿ ವಾತಾವರಣವನ್ನು ಸ್ವಲ್ಪ ತಿಳಿಗೊಳಿಸಿದ್ದರು.

ನನ್ನ ತಂಗಿ ರಾಂಡಾ ಅಷ್ಟೊತ್ತಿಗಾಗಲೇ ಟ್ಯೂಶನ್ನಿಗೆ ಬರುವುದನ್ನು ನಿಲ್ಲಿಸಿದ್ದಳು ಹಾಗೂ ತನ್ನದೇ ಮುಗ್ಧತೆಯ ಕಾರಣ ಹೇಳಿ ಕಣ್ಣೀರು ಹಾಕಿದ್ದು ನೋಡಿ ನಮ್ಮ ಅಮ್ಮನಿಗೆ ದುಃಖ ತಡೆಯಲಾಗಿರಲಿಲ್ಲ. ರಾಂಡಾಳ ರೀತಿಯ ದುಃಖ ಪ್ರದರ್ಶನ ನಮ್ಮ ತಂದೆಯ ಮುಂದೆ ಮಾಡುತ್ತಿರಲಿಲ್ಲ ಏಕೆಂದರೆ ಆಕೆ ಅವರನ್ನು ಮುದ್ದಿಸಿ ಮರಳು ಮಾಡುತ್ತಿದ್ದಳು ಆದರೆ ಅಮ್ಮ ಆಕೆಯ ಕಣ್ಣೀರು ಮತ್ತು ಸಿಟ್ಟುಗಳನ್ನು ತಡೆಯುವವಳಲ್ಲ ಎಂಬುದು ಅವಳಿಗೆ ತಿಳಿದಿತ್ತು. ರೀತಿಯ ದುಃಖ ಪ್ರದರ್ಶನವನ್ನು ರಾಂಡಾ ದೊಡ್ಡವಳಾದಾಗ ತನ್ನ ಮುಂದಿನ ಬದುಕಿನಲ್ಲಿ ಹೇಗೆ ಮಾಡುತ್ತಾಳೆಂದು ನಾನು ಆಗಾಗ ಯೋಚಿಸುತ್ತಿದ್ದೆ ಅಥವಾ ಅದೂ ಸಹ ತನ್ನ ಸ್ವಾರಸ್ಯವನ್ನು ಕಳೆದುಕೊಳ್ಳಬಹುದೇನೋ. ಒಂದು ದಿನ ಮಧ್ಯಾಹ್ನ ಅವಳದೇ ಕಾರಣಗಳನ್ನು ನೀಡಿದುದರಿಂದ ಅವಳಿಗೆ ಹೆಚ್ಚಿನ ಟ್ಯೂಶನ್ಗೆ ಹಾಜರಾಗುವುದರಿಂದ ವಿನಾಯಿತಿ ಸಿಕ್ಕಿತು. ಟ್ಯೂಶನ್ಗೆ ಹಾಜರಾಗುವುದರಲ್ಲಿ ಆಕೆಗೇನೂ ಆಸಕ್ತಿಯಿರಲಿಲ್ಲ, ಆದರೂ ಅವಳನ್ನು ಬಿಟ್ಟು ಹೋಗುತ್ತಾರೆಂಬ ಭಾವನೆ ಅವಳಿಗೆ ಬರಬಾರದಲ್ಲ!

ದಿನ ಮಧ್ಯಾಹ್ನದ ತರಗತಿಯಲ್ಲಿ ಮಾಲಿಮ್ಹಸನ್ನಮಗೆ ಸ್ಪೆಲಿಂಗ್ಟೆಸ್ಟ್ನೀಡಿದರು. ನನಗೆ ಸ್ಪೆಲಿಂಗ್ಟೆಸ್ಟ್ಗಳೆಂದರೆ ಇಷ್ಟ, ನಾನು ಸ್ಪೆಲಿಂಗ್ನಲ್ಲಿ ಉತ್ತಮನೆಂದು ನನಗೆ ಅದು ಇಷ್ಟವೆಂದಲ್ಲ, ಆದರೆ ಟೆಸ್ಟ್ಬಹಳ ಸಮಯ ತೆಗೆದುಕೊಳ್ಳುತ್ತಿತ್ತು ಹಾಗೂ ನೋಟ್ಬುಕ್ಗಳನ್ನು ಅದಲು ಬದಲು ಮಾಡಿಕೊಳ್ಳುವುದು ಮತ್ತು ಮತ್ತೊಬ್ಬರ ಸ್ಪೆಲಿಂಗ್ಚೆಕ್ಮಾಡಿ ಗುರುತುಗಳನ್ನು ಹಾಕುವುದು ಮಜಾ ಕೊಡುತ್ತಿತ್ತು. ನನ್ನ ತಮ್ಮ ಹಾಜಿ ಸ್ಪೆಲ್ಲಿಂಗ್ಟೆಸ್ಟ್ಗಳಲ್ಲಿ ಉತ್ತಮನಾಗಿದ್ದ ಆದರೆ ದಿನ ಮಾಲಿಮ್ಹಸನ್ಕೊಟ್ಟ ಒಂದು ಪದದಿಂದಾಗಿ ಅವನು ನನ್ನಂತೆಯೇ ಸೋತ. ಪದದ ಹೆಸರು ಕಾನ್ಸ್ಟ್ಯಾಂಟಿನೋಪಲ್. ನಮ್ಮ ದಡ್ಡತನಕ್ಕೆ ಮುಗುಳ್ನಕ್ಕ ಮಾಸ್ತರು ಅದರ ಮತ್ತೊಂದು ಹೆಸರು ಇಸ್ಟಾಂಬುಲ್ಎಂದರು. ಮೊದಲಿಗೆ ನಗರದ ಹೆಸರು ಕಾನ್ಸ್ಟ್ಯಾಂಟಿನೋಪಲ್ಆಗಿತ್ತು ನಂತರ ಇಸ್ಟಾಂಬುಲ್ಎಂದು ಬದಲಾಯಿತು. ಅವರು ಅದನ್ನು ನಮ್ಮಿಂದ ಹಲವಾರು ಬಾರಿ ಸರಿಯಾಗಿ ಬರೆಯಲು ಹೇಳಿ ಅದನ್ನು ಜೋರಾಗಿ ಉಚ್ಛರಿಸಲೂ ಸಹ ಹೇಳಿದರು. ಒಬ್ಬ ಮಹಾನ್ರೋಮನ್ದೊರೆಯ ಹೆಸರನ್ನು ನಗರಕ್ಕೆ ಇಡಲಾಗಿದೆ ಎಂದರು ಮಾಸ್ತರು. ಅದರ ಅರ್ಥ ಕಾನ್ಸ್ಟ್ಯಾಂಟಿನ್ ನಗರ.  ನಂತರ ಅವರು ನಮಗೆ ನಗರದ ಕತೆ ಹೇಳತೊಡಗಿದರು: 1453ರಲ್ಲಿ ನಗರ ದಾಳಿಕೋರರಿಗೆ ಬಲಿಯಾಯಿತು, ಹೇಗೆ ಅದನ್ನು ಕಾಪಾಡಿಕೊಳ್ಳಲು ಅವರು ಎಷ್ಟು ಸೆಣಸಾಡಬೇಕಾಯಿತು ಮತ್ತು ಒಟ್ಟೋಮನ್ನರು ಬೋಸ್ಫೊರಸ್ಪ್ರವೇಶಿಸದಂತೆ ತಡೆ ಕಟ್ಟಲಾಯಿತು ಹಾಗೂ ದಾಳಿ ಮಾಡಿದ ಸುಲ್ತಾನ್ಮೆಹಮ್ಮದ್ತನ್ನ ಯುದ್ಧ ಹಡಗುಗಳನ್ನು ದಿಮ್ಮಿಗಳ ಮೇಲೆ ನೆಲದ ಮೇಲೆ ಕಪ್ಪು ಸಮುದ್ರಕ್ಕೆ ಸಾಗಿಸಿ ನಗರವನ್ನು ಹಿಂದಿನಿಂದ ದಾಳಿ ಮಾಡಿದ ಎಂದು. ನಗರ ಸೋತು ದಾಳಿಕೋರರ ವಶವಾಗಿದ್ದು ಹೇಗೆ ಗೆಲುವು ಮತ್ತು ದುರಂತ ಎರಡೂ ಆಗಿದೆಯೆಂದು ನಮ್ಮ ಮಾಸ್ತರು ತಿಳಿಸಿದರು. ನಂತರ ನಾವು ತಪ್ಪದೆ ಹಾಜರಾದ ಪ್ರತಿಯೊಂದು ತರಗತಿಯಲ್ಲಿಯೂ ಮಾಲಿಮ್ಹಸನ್ಬೋಧಿಸುವ ಇಂಗ್ಲಿಷ್ ಮತ್ತು ಗಣಿತದಿಂದ ಬೇಸರಗೊಂಡು ತಾವು ಕಲಿತಿರುವ ಮತ್ತಾವುದಾದರೂ ವಿಷಯದ ಬಗ್ಗೆ ಹೇಳುವರೆಂದು ನಾವು ನಿರೀಕ್ಷಿಸತೊಡಗಿದೆವು.

ಆದರೆ ಕ್ರಮೇಣ ನನ್ನ ತಮ್ಮ ಹಾಜಿ ಟ್ಯೂಶನ್ಗೆ ತಪ್ಪಿಸಿಕೊಳ್ಳಲು ಪ್ರಾರಂಭಿಸಿದ ಹಾಗೂ ನಾವು ಅದನ್ನು ನಮ್ಮ ಅಮ್ಮನಿಗೂ ತಿಳಿಸಲಿಲ್ಲ. ಮಾಸ್ತರು ರೀತಿಯ ಕತೆಗಳನ್ನು ಹೆಚ್ಚಿಗೇನೂ ಹೇಳುತ್ತಿರಲಿಲ್ಲ. ನನ್ನ ತಮ್ಮ ಯಾಕೆ ಟ್ಯೂಶನ್ನಿಗೆ ಬರುತ್ತಿಲ್ಲ ಎಂದು ಮಾಲಿಮ್ಹಸನ್ಕೇಳಿದಾಗ ನಾನು ಯಾವುದೋ ಸುಳ್ಳೊಂದನ್ನು ಹೇಳುತ್ತಿದ್ದೆ. ನಾನು ಮತ್ತು ಮಾಸ್ತರು ಇಬ್ಬರೇ ಇರುವುದು ಅವರಿಗೆ ಒಂದು ರೀತಿಯ ಸಮಾಧಾನದಂತೆಯೂ ಇತ್ತು. ಅವರು ಸಿಡುಕುವುದು ಕಡಿಮೆಯಾಗಿತ್ತು ಮತ್ತು ನನಗೆ ಏನೋ ಬರೆಯಲು ಕೊಟ್ಟು ಅವರು ಮೇಜಿನ ಬಳಿ ಓದುತ್ತಾ ಕೂರುತ್ತಿದ್ದರು. ಕೆಲವೊಮ್ಮೆ ಅವರು ಅವರ ಉದ್ವಾದ್ಯವನ್ನು ನುಡಿಸುತ್ತಿದ್ದರು, ಆದರೆ ನಾನೇನಾದರೂ ಅದರಲ್ಲಿ ಆಸಕ್ತಿ ತೋರಿದರೆ ತಕ್ಷಣ ನಿಲ್ಲಿಸುತ್ತಿದ್ದರು, ಆದುದರಿಂದ ನಾನು ತಲೆಬಗ್ಗಿಸಿ ಅದನ್ನು ಗಮನಿಸದಿರುವಂತೆ ಬರೆಯುವುದನ್ನು ಮಾಡುತ್ತಿದ್ದೆ. ನನಗೆ ಕೊಡುವ ಬೇಸರದ ಓದು ಬರೆಹದ ಕೆಲಸದ ನಡುವೆ ಅವರ ಸಂಗೀತ ನುಡಿಸುವುದು ಕೇಳಲು ಸಂತೋಷವಾಗುತ್ತಿತ್ತು. ಅವರ ಪ್ರಖ್ಯಾತ ಪುಸ್ತಕಗಳನ್ನು ಅವರು ತಮ್ಮ ಮತ್ತೊಂದು ಕೋಣೆಯಲ್ಲಿ ಇರಿಸಿದ್ದರು, ಆದರೆ ನಮ್ಮ ತರಗತಿಗಳ ಸಮಯದಲ್ಲಿ ತಮ್ಮ ಮೇಜಿನ ಮೇಲೆ ಒಂದು ಪುಸ್ತಕವನ್ನು ಇರಿಸಿಕೊಂಡಿದ್ದು ಸಮಯ ಸಿಕ್ಕಾಗ ಓದುತ್ತಿದ್ದರು. ಈಗೀಗ ಹೆಚ್ಚು ಮುಗುಳ್ನಗುತ್ತಿದ್ದರು, ಆದರೆ ಅವು ಎಚ್ಚರಿಕೆಯ, ಹಿಂಜರಿಕೆಯ ಮುಗುಳ್ನಗುವಾಗಿತ್ತು ಹಾಗೂ ಅವು ಅವರ ಮುಖವನ್ನೇ ರೂಪಾಂತರಗೊಳಿಸಿಬಿಡುತ್ತಿದ್ದವು. ಅವರು ಆಗಾಗ ನನ್ನ ಹೆಸರಿಡಿದು ಕರೆದು ನನ್ನ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಯಾವ ಕ್ರೀಡೆಗಳನ್ನು ಆಡುತ್ತೇನೆ? ಅವರು ಹೇಳಿದಂತೆ ಅವರು ಹಿಂದೊಮ್ಮೆ ಅದ್ಭುತ ಈಜುಗಾರರಾಗಿದ್ದರು, ಆದರೆ ಅದು ಅವರ ಬಾಲ್ಯದ ದಿನಗಳಲ್ಲಿ. ನನಗೆ ಶಾಲೆಗೆ ಹೋಗುವುದು ಬಹಳ ಇಷ್ಟವೆಂದಾಗ ಅವರ ಮುಖ ಅರಳಿತು.

ನನ್ನ ಮತ್ತು ಮಾಲಿಮ್ಹಸನ್ರವರ ಸಾಮೀಪ್ಯ ಹೆಚ್ಚಾದಂತೆ ಅವರು ನನ್ನನ್ನು ಗದರುವುದು ಕಡಿಮೆಯಾಗಿತ್ತು ಹಾಗೂ ನಾನು ಅವರ ಬಾಯಿ ಬಿಡಿಸಿ ಕತೆಗಳನ್ನು ಹೇಳಿಸಿಕೊಳ್ಳುವುದು ಹೇಗೆಂಬುದನ್ನು ಕ್ರಮೇಣ ಕಲಿತೆ. ಅವರ ಕತೆಗಳಲ್ಲಿ ಆಗಾಗ ಸಮುದ್ರದ ವಿಚಾರ ಬರುತ್ತಿತ್ತು. ಅಂತಹ ಒಂದು ದಿನಗಳಲ್ಲಿಯೇ ಅವರು ನನಗೆ ನಕ್ಷೆಯ ಬಗ್ಗೆ ಹೇಳಿದ್ದು. ನಾನು ಮೊದಲ ಬಾರಿಗೆ ಅವರ ಕೋಣೆಗೆ ಬಂದಾಗ ಗೋಡೆಯ ಮೇಲೆ ಕಂದು ಮತ್ತು ಚಿನ್ನದ ಬಣ್ಣದ ಚಿತ್ರವೊಂದನ್ನು ಕಟ್ಟು ಹಾಕಿ ತೂಗುಹಾಕಿರುವುದನ್ನು ಗಮನಿಸಿದ್ದೆ. ಸೆಖೆಯ ಹಾಗೂ ಬಣಬಣಗುಟ್ಟುವ ಕೋಣೆಯಲ್ಲಿ ಇದ್ದದ್ದು ಚಿತ್ರ ಹಾಗೂ ಮತ್ತೊಂದು ಅವರ ಕಾಲೇಜಿನ ಪದವಿ ಪಡೆದ ವಿದ್ಯಾರ್ಥಿಗಳಿದಿರಬಹುದಾದ ಗ್ರೂಪ್ಫೋಟೊ. ಚಿತ್ರದಲ್ಲಿನ ಉಬ್ಬುತಗ್ಗುಗಳು ಹಾಗೂ ಸಣ್ಣ ಬಾವುಟಗಳ ಅರ್ಥವೇನೆಂದು ನನಗೆ ಬಹಳ ದಿನಗಳವರೆಗೆ ತಿಳಿಯಲಿಲ್ಲ. ನಮ್ಮ ಜಗತ್ತು ಚಿತ್ರಗಳಿಂದಲೇ ತುಂಬಿದೆ, ಬಹುಪಾಲು ಅವುಗಳನ್ನು ನಾವು ಗ್ರಹಿಸಬಹುದು, ಅರ್ಥೈಸಿಕೊಳ್ಳಬಹುದು, ನನಗೆ ಖಾತರಿಯಿಲ್ಲದಿದ್ದರೂ ಅವುಗಳಲ್ಲಿ ಬಹುಪಾಲು ಅವು ಯಾರದಾದರೂ ದೇವರಿಗೆ ಸಂಬಂಧಿಸಿದ್ದೇ ಆಗಿರುತ್ತವೆಯೆಂದು ಊಹಿಸಿದ್ದೆ. ದರ್ಜಿಯ ಅಂಗಡಿಯಲ್ಲಿ ಆನೆಯ ತಲೆಯಿರುವ ದಪ್ಪ ಮನುಷ್ಯನ ಚಿತ್ರವೊಂದನ್ನು ಕಂಡಿದ್ದೆ. ಕಟ್ಟು ಹಾಕಿರುವ ಉರ್ದು ಪಠ್ಯದ ಚಿತ್ರಗಳನ್ನು ಮತ್ತು ನಕ್ಷತ್ರ ಹಾಗೂ ಚಂದ್ರನ ವಿವಿಧ ಆಕಾರಗಳ ಚಿತ್ರಗಳನ್ನು ಕ್ಷೌರಿಕನ ಅಂಗಡಿಯಲ್ಲಿ ಕಂಡಿದ್ದೆ. ಧಾರ್ಮಿಕ ಪುಸ್ತಕದ ಅಂಗಡಿಯಲ್ಲಿ ರೆಕ್ಕೆಗಳ ಕುದುರೆಯ ಮತ್ತು ಬಾಗಿದ ಅಡ್ಡಡ್ಡ ಇರಿಸಿರುವ ಕತ್ತಿಗಳ ಚಿತ್ರಗಳನ್ನು ಕಂಡಿದ್ದೆ. ಎಂಟು ಕೈಗಳಿರುವ ಮಹಿಳೆಯ, ದೊಡ್ಡ ದಾಡಿ ಬಿಟ್ಟಿರುವ ಗಂಡಸೊಬ್ಬನ, ದೈತ್ಯಾಕಾರದ ಕಟ್ಟಡಗಳ ಹಾಗೂ ವಿವಿಧ ಭಾಷೆಗಳ ಅಕ್ಷರ ಮತ್ತು ಸಂಖ್ಯೆಗಳ ಕ್ಯಾಲೆಂಡರುಗಳನ್ನು ಕಂಡಿದ್ದೆ. ಹಾಗಿರುವಾಗ ಕಂದು ಮತ್ತು ಚಿನ್ನದ ಬಣ್ಣದ ಉಬ್ಬುತಗ್ಗುಗಳಿರುವ ಸುಂದರ ಚಿತ್ರವನ್ನು ಕಂಡು ನನಗೇನೂ ಗಾಭರಿಯಾಗಲಿಲ್ಲ. ಮಾಲಿಮ್ಹಸನ್ನನಗೆ ಅದರ ಬಗ್ಗೆಯೂ ಎಂದಾದರೊಂದು ದಿನ ಹೇಳಬಹುದೆಂದು ಭಾವಿಸಿದ್ದೆ. ಒಂದು ದಿನ ಬೇಸಿಗೆಯ ಅಕ್ಟೋಬರ್ ಮಧ್ಯಾಹ್ನ ನನಗೆ ಕೊಟ್ಟಿದ್ದ ಒಂದು ಪ್ಯಾರಾ ಬರೆಯಲು ನಾನು ತಿಣುಕುತ್ತಿದ್ದಂತೆ ನಾನು ಮಾಸ್ತರು ಚಿತ್ರದ ಬಗ್ಗೆ ಹೇಳಲಿ ಎನ್ನುವಂತೆ ಅದರ ಬಗ್ಗೆ ಆಸಕ್ತಿ ತೋರತೊಡಗಿದೆ.. ಮೊದಲಿಗೆ ಚಿತ್ರವನ್ನು ತನ್ಮಯನಾಗಿ ನೋಡುವಂತೆ ನಟಿಸಿದೆ, ತಲೆಯನ್ನು ಒಮ್ಮೆ ಎಡಭಾಗಕ್ಕೆ ಹಾಗೂ ಮತ್ತೊಮ್ಮೆ ಬಲಭಾಗಕ್ಕೆ ಬಾಗಿಸಿ ಅದರ ಅರ್ಥ ಏನಿರಬಹುದೆಂದು ಕಂಡುಕೊಳ್ಳಲು ಪ್ರಯತ್ನಿಸಿದೆ. ಅವರು ನನ್ನನ್ನು ಗಮನಿಸುತ್ತಿದ್ದಾರೆಂದು ನನಗೆ ತಿಳಿದಿತ್ತು, ಅವರಿಗೂ ತಡೆಯಲಾಗದೆ ಅದರ ಬಗ್ಗೆ ಹೇಳಿಯೇ ಬಿಡುತ್ತಾರೆಂಬ ಭರವಸೆಯೂ ನನ್ನಲ್ಲಿತ್ತು.

ಅದೇನೆಂದು ನಿನಗೆ ತಿಳಿದಿದೆಯೇ?’ ಕೊನೆಗೂ ಕೇಳಿದರು ಅವರು.

ನಾನು ಒಬ್ಬನೇ ಬಹಳಷ್ಟು ದಿನಗಳಿಂದ ಟ್ಯೂಶನ್ಗೆ ಹಾಜರಾಗುತ್ತಿದ್ದು ನನಗೆ ಅವರ ಮನೆಯಲ್ಲಿ ಸ್ವಾತಂತ್ರ್ಯವೂ ತಕ್ಕಮಟ್ಟಿಗೆ ಇತ್ತು. ನಾನು ಎದ್ದು ಚಿತ್ರವಿರುವ ಗೋಡೆಯ ಬಳಿ ಹೋದೆ. ಮತ್ತೊಮ್ಮೆ ಹತ್ತಿರದಿಂದ ನೋಡಿದೆ, ನಂತರ ಇದ್ದಕ್ಕಿದ್ದಂತೆ ಅದು ಭೂಮಿಯ ತಲಕೆಳಗಾಗಿರುವ ಒರಟು ನಕ್ಷೆಯ ಹಾಗೆ ಕಾಣಿಸಿತು. ಆಫ್ರಿಕಾದ ಆಕಾರ ನನಗೆ ಸೂಚನೆಯನ್ನು ಕೊಟ್ಟಿದ್ದು. ಅದೊಂದು ನಕ್ಷೆ, ನಾನು ಹೇಳಿದೆ. ಹಾಗಾದರೆ ಅದು ಏಕೆ ತಲಕೆಳಗಾಗಿದೆ?

ನನ್ನ ಕುತೂಹಲ ಕಂಡು ಅವರು ಮುಗುಳ್ನಕ್ಕರು. ಕಾಲದಲ್ಲಿ ಅವರು ನಕ್ಷೆಗಳನ್ನು ಹಾಗೆಯೇ ರಚಿಸುತ್ತಿದ್ದರು, ಹೇಳಿದರು ಮಾಸ್ತರು. ‘ಅದು ಏಕೆಂದು ನನಗೆ ತಿಳಿದಿಲ್ಲ.’ ನಕ್ಷೆ ತಯಾರಿಸಿದವನ ಹೆಸರು ಫ್ರಾ ಮೌರೊ, ಆತ ಒಬ್ಬ ಕ್ರೈಸ್ತ ಸಂನ್ಯಾಸಿ, ವೆನೀಸ್ ಪುಟ್ಟ ದ್ವೀಪವೊಂದರಲ್ಲಿ ವಾಸಿಸುತ್ತಿದ್ದ ಹಾಗೂ ಅಲ್ಲಿಂದ ಎಲ್ಲೂ ಓಡಾಡದೇ ಅಲ್ಲೇ ಕೂತು ನಕ್ಷೆ ತಯಾರಿಸಿದ್ದಾನೆ. ನಾನು ಅದುವರೆಗೂ ವೆನೀಸ್ ಹೆಸರು ಕೇಳಿರಲಿಲ್ಲ ಹಾಗೂ ದ್ವೀಪವೆಂದರೇನೆಂದೂ ಸಹ ತಿಳಿದಿರಲಿಲ್ಲ ಅಲ್ಲದೆ, ಕ್ರೈಸ್ತ ಸಂನ್ಯಾಸಿಯೆಂದರೂ ಸಹ ತಿಳಿದಿರಲಿಲ್ಲ. ನಾನು ಅದನ್ನು ಮಾಲಿಮ್ಹಸನ್ರವರಿಗೆ ಹೇಳಿದಾಗ ಅವರು ತಮ್ಮ ತಲೆಯನ್ನು ಕೊಂಚ ಹಿಂದಕ್ಕೆ ಬಾಗಿಸಿ ನನ್ನ ದಡ್ಡತನದ ಕುರಿತು ಮುಗುಳ್ನಕ್ಕರು. ನಂತರ ಅವರು ನನಗೆ ವೆನೀಸ್ಬಗ್ಗೆ ಹಾಗೂ ಫ್ರಾ ಮೌರೊ ಜೀವಿಸಿದ್ದ ಮುರಾನೊ ದ್ವೀಪದ ಬಗ್ಗೆ ಹೇಳಿದರು. ಸ್ಥಳಗಳು ಅವರಿಗೆ ಬಹಳ ಚೆನ್ನಾಗಿ ತಿಳಿದಿರುವಂತೆ ವಿವರಿಸಿದರು. ಫ್ರಾ ಪ್ರಯಾಣಿಕರು ಹೇಳಿದ್ದುದನ್ನು ಕೇಳುತ್ತಿದ್ದರು, ವಿವರಗಳ ಕುರಿತು ಸಿಕ್ಕ ಇತರ ಮಾಹಿತಿಯನ್ನು ಕಲೆಹಾಕಿದರು ಆನಂತರ ಅದುವರೆಗೆ ತಯಾರಾಗಿರುವ ಇತರ ಎಲ್ಲ ನಕ್ಷೆಗಳಿಗಿಂತ ನಿಖರವಾದ ನಕ್ಷೆಯೊಂದನ್ನು ಕೂತಲ್ಲೇ ಸಿದ್ಧಪಡಿಸಿದರು. ಮಾಲಿಮ್ಹಸನ್ರವರಿಗೆ ಜಗತ್ತಿನ ನಕ್ಷೆ ತಯಾರಿಸಲು ಬರದಿದ್ದರೂ ಅವರು ಕೊಂಚ ಫ್ರಾ ಮೌರೊ ತರಹವೇ ಇದ್ದಾರೆಂದು ಆಗ ನನಗನ್ನಿಸಿತು. ಫ್ರಾ ತರಹವೇ ಇವರೂ ಸಹ ತಮ್ಮದೇ ಕಲ್ಪನಾ ಜಗತ್ತಿನಲ್ಲಿ ವಾಸಿಸುವರೂ ಹಾಗೂ ಮಾನಸ ಲೋಕದಲ್ಲೇ ಪ್ರಯಾಣ ಮಾಡುವವರು. ನನಗಂತೂ ಖಾತ್ರಿಯಾಗಿತ್ತು ಮಾಲಿಮ್ಹಸನ್ವೆನೀಸ್ನೋಡೇ ಇಲ್ಲವೆಂದು. ಅಕಸ್ಮಾತ್ಅವರು ಅಲ್ಲಿಗೆ ಭೇಟಿ ನೀಡಿದ್ದಿದ್ದರೆ ನಮಗೆಲ್ಲಾ ಅದು ತಿಳಿದಿರುತ್ತಿತ್ತು. ವೆನೀಸ್ ಮಾತಿರಲಿ ನನಗನ್ನಿಸುವಂತೆ ಅವರು ಪಟ್ಟಣ ಉಂಗುಜಾದಿಂದ ಹೊರಗೆ ಸಹ ಹೋಗಿಲ್ಲ. ನಮ್ಮಲ್ಲಿ ಬಹಳಷ್ಟು ಜನ ಬರುತ್ತಿರುತ್ತಾರೆ ಹಾಗೂ ಹೋಗುತ್ತಿರುತ್ತಾರೆ, ಅವರ ಹಾವ ಭಾವ, ಆತ್ಮವಿಶ್ವಾಸ, ಅವರ ನಡತೆ ಹಾಗೂ ಮಾತುಗಳಿಂದ ಅವರು ಪ್ರವಾಸ ಮಾಡಿದವರೇ ಅಥವಾ ಇಲ್ಲವೇ ಎಂಬುದನ್ನು ಹೇಳಬಹುದಾಗಿತ್ತು. ಅದೇ ರೀತಿ ಅಂತಹ ಪ್ರವಾಸಗಳನ್ನು ಮಾಡಿಲ್ಲದವರನ್ನೂ ಸಹ ಗುರುತಿಸಬಹುದಿತ್ತು ಹಾಗೂ ಮಾಲಿಮ್ಹಸನ್ಸಾಗರದ ಬಗ್ಗೆ ಹಲವಾರು ಕತೆಗಳನ್ನು ಹೇಳಿದರೂ ಸಹ ಅವರು ಅಂಥವರಲ್ಲಿ ಒಬ್ಬರೆಂಬುದು ನನಗೆ ತಿಳಿದಿತ್ತು.

ಮುಂದಿನ ಸಾರಿ ಅವರು ನನಗೆ ನಕ್ಷೆಯ ಬಗ್ಗೆ ಹೇಳಿದಾಗ, ಅದರ ಮೇಲಿರುವ ಪುಟ್ಟಪುಟ್ಟ ಬರವಣಿಗೆಯ ಬಗ್ಗೆ ಹೇಳಿದರು ಹಾಗೂ ಅವು ದೂರದ ಸ್ಥಳಗಳ ಹಲವಾರು ಮಾಹಿತಿಯನ್ನು ಹೊಂದಿದ್ದವು. ಅದು ಮರುಮುದ್ರಣ ಹಾಗೂ ಸಣ್ಣ ಅಕ್ಷರಗಳಾದುದರಿಂದ ಅವುಗಳನ್ನು ಓದಲಾಗುತ್ತಿರಲಿಲ್ಲ, ಅಷ್ಟಲ್ಲದೆ ಅದು ಲ್ಯಾಟಿನ್ ಭಾಷೆಯಲ್ಲಿದ್ದು ಆತನಿಗೂ ಓದಲು ಬರುತ್ತಿರಲಿಲ್ಲ. ತಕ್ಷಣ ನಾನು ಅಲ್ಲಿಗೆ ಟ್ಯೂಶನ್ಗೆ ಬಂದವನೆಂದು ನೆನಪಾಗಿ ನನ್ನ ಬರವಣಿಗೆಯನ್ನು ಮುಗಿಸಲು ನೆನಪಿಸಿ ಓಡಿಸಿದರು.

ಆದರೂ ಆತನಿಗೆ ನಕ್ಷೆಯ ಬಗ್ಗೆ ನನಗೆ ಹೇಳಬೇಕೆನ್ನಿಸುತ್ತಿತ್ತು. ಮೂರನೇ ಬಾರಿ ಅದರ ಕುರಿತು ಆತ ಮಾತನಾಡಿದಾಗ ನಕ್ಷೆಯ ಮೇಲಿನ ಒಂದು ಬರವಣಿಗೆಯ ಕುರಿತು ನನಗೆ ಹೇಳಿದರು. ಬರವಣಿಗೆ ಒಂದು ಹಡಗು ಬಿರುಗಾಳಿಗೆ ಸಿಲುಕಿ ಅರಬ್ಬರು ಅಂಧಕಾರದ ಸಾಗರವೆಂದು ಕರೆಯುತ್ತಿದ್ದ ಅಟ್ಲಾಂಟಿಕ್ಸಾಗರಕ್ಕೆ ಸೆಳೆದುಕೊಂಡು ಹೋದ ಕುರಿತಾಗಿತ್ತು. ದಿನ ಬೆಳಿಗ್ಗೆ ಹಡಗು ಮುಕಲ್ಲಾದಿಂದ ಕಪ್ಪು ಕರಾವಳಿಗೆ ಹೊರಟಾಗ ಅವರು ನಡುಹಗಲಿನಲ್ಲಿ ಪೇಲವ ಆಕಾಶದಲ್ಲಿ ಚಂದ್ರನನ್ನು ಕಂಡರು. ಹಡಗಿನಲ್ಲಿ ತಮ್ಮ ಗಂಡಂದಿರನ್ನು ಸೇರಲು ಹೊರಟ ಹೆಂಗಸರಿದ್ದರು ಹಾಗೂ ಹಸಿರು ನಾಡಿನ ಸಂಪತ್ತನ್ನು ಪಡೆಯಲು ಹೊರಟ ಗಂಡಸರೂ ಇದ್ದರು. ಹೆಂಗಸರಲ್ಲಿ ಒಬ್ಬಾಕೆ ನಡುಹಗಲಿನ ಚಂದ್ರನನ್ನು ಕಂಡು ಅದು ಅಪಶಕುನದ ಸೂಚನೆ, ಏನೋ ಆಪತ್ತಿದೆ ಎಂದಳು. ಎಲ್ಲರಿಗೂ ಶಕುನದ ಮಹಾನ್ಶಕ್ತಿ ತಿಳಿದಿರುವುದೇ, ಆಕೆ ತನ್ನ ಮಾತನ್ನು ನಂಬುವಂತೆ ಮತ್ತೊಮ್ಮೆ ಹೇಳಿದಳು. ಮಾಡಬೇಕಿರುವುದನ್ನು ಪೂರ್ಣಗೊಳಿಸದೇ ಹೊರಡಬೇಡಿ. ಆಕೆಯ ಮಾತನ್ನು ಕೇಳಿದವರು ಆಕೆಯನ್ನು ಬೈದು ಬಾಯಿಮುಚ್ಚಿಸಿದರು ಹಾಗೂ ಕೆಟ್ಟದ್ದನ್ನು ನುಡಿಯದೇ ತೆಪ್ಪಗಿರುವಂತೆ ಸೂಚಿಸಿದರು. ಆದರೆ ಅಷ್ಟೊತ್ತಿಗಾಗಲೇ ತಡವಾಗಿತ್ತು ಹಾಗೂ ಅಪಶಕುನವನ್ನು ಎಲ್ಲರೂ ಮರೆತರು. ಕೆಲದಿನಗಳು ಕಳೆದಂತೆ, ಗಾಳಿ ಜೋರಾಗಿ ಬೀಸಿ ಹಡಗನ್ನು ಸಾಗರ ಮಧ್ಯಕ್ಕೆ ಕೊಂಡೊಯ್ದಿತ್ತು ಹಾಗೂ ಅವರು ಹಿಂದಿರುಗುವ ಸಾಧ್ಯತೆಯೇ ಇರಲಿಲ್ಲ. ಗಾಳಿಯ ರಭಸದಿಂದ ಅವರು ಮತ್ತಷ್ಟು ದಕ್ಷಿಣಕ್ಕೆ ಚಲಿಸಿದರು ಹಾಗೂ ಗಾಳಿಯ ದಿಕ್ಕು ಬದಲಾಗಿ ಅವರು ಪಶ್ಚಿಮ ದಿಕ್ಕಿಗೆ ತಿರುಗಲು ಸಾಧ್ಯವಾಗಬಹುದೇನೋ ಎಂದು ಕಾಯುತ್ತಿದ್ದರು. ಕೊನೆಗೂ ಅವರು ತಿರುಗಿದಾಗ ಅವರು ಎಲ್ಲ ಭೂಮಿಯಿಂದ ದೂರ, ಆಫ್ರಿಕಾದ ತುದಿಯಿಂದಲೂ ದೂರ ಚಲಿಸಿರುವುದಾಗಿ  ತಿಳಿಯಿತು. ಆಗಿನ ಕಾಲದಲ್ಲಿ ಆಫ್ರಿಕಾಗೂ ಒಂದು ಕೊನೆಯ ತುದಿಯಿದೆಯೆಂದು ಯಾರಿಗೂ ತಿಳಿದಿರಲಿಲ್ಲ. ಅದೃಷ್ಟಹೀನರಾದ ಅವರು ನಲವತ್ತು ದಿನಗಳ ಕಾಲ ಕೇವಲ ಗಾಳಿ ಮತ್ತು ನೀರು ಮಾತ್ರ ನೋಡುವಂತಾಯಿತು. ನಹೋದಾನ ಅಂದಾಜಿನ ಪ್ರಕಾರ ಅವರು ಪಶ್ಚಿಮಕ್ಕೆ 2000 ಮೈಲುಗಳಷ್ಟು ದೂರ ಚಲಿಸಿದ್ದರು ಹಾಗೂ ಅವರ ಸರ್ವನಾಶ ಖಾತರಿಯೆನ್ನಿಸತೊಡಗಿತು. ಹವಾಮಾನ ಕೊಂಚ ತಿಳಿಯಾದಾಗ, ಅವರು ಹಡಗನ್ನು ಹಿಂತಿರುಗಿಸಿದರು ಹಾಗೂ ಎಪ್ಪತ್ತು ದಿನಗಳಲ್ಲಿ ತಮ್ಮ ನಾಡಿಗೆ ಹಿಂದಿರುಗಲು ಯತ್ನಿಸಿದರು. ಶೀತಲ ಸುಳಿಗಾಳಿ ಅವರ ಹಡಗನ್ನು ದಿಕ್ಕುಪಾಲಾಗಿ ಮಾಡುತ್ತಿತ್ತು ಹಾಗೂ ಕೊನೆಗೆ ಹಡಗು ಸಾಗರದ ಮಧ್ಯದಲ್ಲಿನ ದ್ವೀಪ ಸಮೂಹಕ್ಕೆ ಕೊಂಡೊಯ್ಯಿತು. ಅವರಿಗೆ ಎಲ್ಲೆಲ್ಲೂ ಭೂಮಿಯೇ ಕಾಣತೊಡಗಿತು. ಅಷ್ಟೊತ್ತಿಗೆ ಅವರ ಹಡಗಿನಲ್ಲಿ ಬದುಕುಳಿದಿದ್ದವರು ಕೇವಲ ಐದು ಜನ. ಇನ್ನುಳಿದವರೆಲ್ಲಾ ದೇವರ ಇಚ್ಛೆಯಂತೆ ಹಸಿವು, ಬಾಯಾಡಿಕೆ ಮತ್ತು ರೋಗಗಳಿಗೆ ಬಲಿಯಾಗಿದ್ದರು. ಬದುಕುಳಿದವರಲ್ಲಿ ನಡುಹಗಲಿನ ಚಂದ್ರನನ್ನು ಕಂಡು ಆಪತ್ತಿನ ಅಪಶಕುನ ನುಡಿದ ಹೆಂಗಸೂ ಇದ್ದಳು. ಆಕೆ ಪ್ರಯಾಣದಲ್ಲಿ ಹುಚ್ಚಿಯಾಗಿದ್ದಳು ಅಥವಾ ಹಡಗಿಗೆ ಆಪತ್ತು ತಂದದ್ದಕ್ಕಾಗಿ ಎಲ್ಲಿ ಆಕೆಯನ್ನು ಹಡಗಿನಿಂದ ನೀರಿಗೆ ಎಸೆಯುತ್ತಾರೋ ಎಂಬ ಹೆದರಿಕೆಯಂತೆ ಹುಚ್ಚಿಯಂತೆ ನಟಿಸುತ್ತಿದ್ದಳು. ಬದುಕುಳಿದ ಇತರ ನಾಲ್ವರು ಗಂಡಸರಾಗಿದ್ದು ಅವರು ಸಮುದ್ರ ಯಾನದ ಕಷ್ಟಗಳಲ್ಲಿ ಪಳಗಿದವರಾಗಿದ್ದರು. ಆಕೆ ತಾನು ಮುಕಲ್ಲಾದಲ್ಲಿ ಪಕ್ಕದ ಮನೆಯವರೊಂದಿಗೆ ಬಿಟ್ಟುಬಂದಿರುವ ತನ್ನ ಪುಟ್ಟ ಮಗನನ್ನು ನೆನೆಸಿಕೊಂಡು ಗೋಳಾಡತೊಡಗಿದಳು. ಅವರು ತಲುಪಿದ್ದ ದ್ವೀಪ ಸಮೂಹ ಗಜೀಜಾ ಇರಬಹುದು, ಐದು ಜನರಿಗೆ ಏನಾಯಿತೆನ್ನುವುದು ಯಾರಿಗೂ ತಿಳಿದಿಲ್ಲ ಆದರೆ ಅವರಲ್ಲಿ ಯಾರೋ ಒಬ್ಬರಿಂದ ಯಾತನದ ಪ್ರಯಾಣದ ಕತೆ ಜಗತ್ತಿನ ಇತರೆಡೆಗೂ ಹರಡಿರಬಹುದು.

ಮುಕಲ್ಲಾದಿಂದ ನಡುಹಗಲಿನ ಚಂದ್ರನ ಅಡಿಯಲ್ಲಿ ಹಡಗು ಹೊರಟ ದಿನ ಮತ್ತು ಹಡಗಿನಲ್ಲಿ ಹೆದರಿಕೊಂಡು ಹೊರಟಿದ್ದ ಜನರ ಮುಖ ನನಗೆ ಮರೆಯಲು ಸಾಧ್ಯವೇ ಆಗಿಲ್ಲ, ಮಾಲಿಮ್ಹಸನ್ಹೇಳಿದರು.

ಪುಟ್ಟ ಅಕ್ಷರಗಳಲ್ಲಿ ಬರೆದಿರುವುದರಲ್ಲಿ ಕತೆ ಎಲ್ಲಾ ಹೇಳಿದೆಯೆ?, ನಾನು ಕೇಳಿದೆ. ಮಾಲಿಮ್ಹಸನ್ಸಿಡುಕಿದರು. ಅಂತಹ ಪ್ರಯಾಣದಲ್ಲಿ ಯಾರೂ ಬದುಕುಳಿಯುವುದೇ ಕಷ್ಟ, ನನಗನ್ನಿಸಿದ್ದು ನಾನು ಹೇಳಿದೆ. ಬಿರುಗಾಳಿ, ಚಂಡಮಾರುತದಲ್ಲಿ ನೂರಾ ಐದು ದಿನಗಳು ಸಮುದ್ರದಲ್ಲಿ ಪ್ರಯಾಣ ಮಾಡುವುದು ಪುರಾಣದ ಕತೆಗಳಲ್ಲಿ ಮಾತ್ರ ಸಾಧ್ಯ; ಅಷ್ಟು ದಿನ ಅವೆಲ್ಲವನ್ನೂ ಸಹಿಸಿಕೊಳ್ಳಬಲ್ಲ ಹಡಗಾದರೂ ಎಲ್ಲಿದೆ? ಅದೊಂದು ಸಾಂಬಕ್ಹಡಗು, ಹೇಳಿದರು ಮಾಲಿಮ್. ಹಡಗಿನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು? ಅಷ್ಟು ದಿನ ಅವರು ಏನು ತಿನ್ನುತ್ತಿದ್ದರು? ಭಾಗಶಃ ಆವರಣ ಹೊಂದಿದ್ದ ಹಡಗಿನಲ್ಲಿ ಅಷ್ಟೊಂದು ದಿನ, ಅಷ್ಟೊಂದು ಜನ ಹೇಗೆ ಬದುಕುಳಿದಿರಲು ಸಾಧ್ಯ? ಯಾರೂ ಬದುಕುಳಿದಿರದಿದ್ದಲ್ಲಿ ಅಂಧಕಾರದ ಸಮುದ್ರಕ್ಕೆ ನಲ್ವತ್ತು ದಿನಗಳ ಪಯಣ ಹಾಗೂ ಹಿಂದಿರುಗುವ ಎಪ್ಪತ್ತು ದಿನಗಳ ಪಯಣದ ಬಗ್ಗೆ ಫ್ರಾ ಮೌರೋರಿಗೆ ತಿಳಿದಿದ್ದಾದರೂ ಹೇಗೆ? ಅಕಸ್ಮಾತ್ಅವರು ಹಿಂತಿರುಗಿರದಿದ್ದಲ್ಲಿ ಹಾಗೂ ಅದೇ ರೀತಿ ಅಂಧಕಾರದ ಸಮುದ್ರದೊಳಕ್ಕೆ ಪ್ರಯಾಣ ಮುಂದುವರಿಸಿದ್ದಲ್ಲಿ ಏನಾಗುತ್ತೆಂದು ಊಹಿಸಿಕೊಳ್ಳಿ.

ಮಾಲಿಮ್ಹಸನ್ಚಡಪಡಿಸಿದರು ಹಾಗೂ ಬಹುಶಃ ನನ್ನ ಹಲವಾರು ಪ್ರಶ್ನೆಗಳಿಂದಾಗಿ ತಾಳ್ಮೆ ಕಳೆದುಕೊಳ್ಳತೊಡಗಿದರು ಎನ್ನಿಸುತ್ತದೆ. ಬಹುಶಃ ಅವರ ಕತೆಗೆ ನಾನು ಬೇರೆಯದೇ ರೀತಿಯಲ್ಲಿ ಪ್ರತಿಕ್ರಯಿಸಬಹುದು ಎಂದು ಊಹಿಸಿರಬಹುದು - ನನ್ನ ಪ್ರಶ್ನೆಗಳಿಗೆ ಅವರು ಸಿಡಿಮಿಡಿಗೊಂಡಂತೆ ತೋರತೊಡಗಿತು. ಮುಖ ಸಿಂಡರಿಸಿ ಎತ್ತಲೋ ನೋಡತೊಡಗಿದರು. ನೀನು ಹೋಗುವ ಮೊದಲು ಕೊಟ್ಟಿರುವ ಪ್ರಬಂಧ ಬರೆದು ಮುಗಿಸು ಎಂದು ನನ್ನನ್ನು ಕೂಡುವಂತೆ ಕೈಸನ್ನೆ ಮಾಡಿದರು.

ಅವರ ಕೋಪ ಬಹಳ ಹೊತ್ತು ಉಳಿಯಲಿಲ್ಲ, ಮಧ್ಯಾಹ್ನದ ಹೊತ್ತಿಗೆ ಪುನಃ ಅವರು ನಕ್ಷೆಯ ಕುರಿತು ಮಾತನಾಡತೊಡಗಿದರು: ಹಿಂದೂ ಮಹಾಸಾಗರದ ಚೀನಿ ಮತ್ತು ಅರಬ್ನಕ್ಷೆಗಳು ಹಾಗೂ ಪಶ್ಚಿಮ ಏಷ್ಯಾದ ಕ್ರಿಶ್ಚಿಯನ್ನಕ್ಷೆಗಳು ಯಾವಾಗಲೂ ಜೆರೂಸಲೆಂ ಅನ್ನು ಜಗತ್ತಿನ ಕೇಂದ್ರ ಭಾಗವಾಗಿ ತೋರಿಸುತ್ತಿದ್ದವು. ಅದೆಲ್ಲಾ ಆತನಿಗೆ ಹೇಗೆ ತಿಳಿದಿತ್ತು ಎಂಬುದರ ಬಗ್ಗೆ ಕೇಳಬೇಕೆಂದುಕೊಂಡೆ, ಆದರೆ ಆತನಿಗೆ ಮತ್ತೆ ಸಿಡಿಮಿಡಿಗುಟ್ಟಬಹುದೆಂದು ಸುಮ್ಮನಾದೆ. ಬಹುಶಃ ಆತನ ಪ್ರಖ್ಯಾತ ಕಲಿಕೆಯ ಭಾಗವಾಗಿ ಅವೆಲ್ಲಾ ಆತನಿಗೆ ತಿಳಿದಿರಬಹುದು ಎಂದುಕೊಂಡೆ. ನಾನು ಟ್ಯೂಶನ್ಮುಗಿಸಿ ಹೊರ ಹೊರಟಂತೆ ಆತ ನನ್ನ ಕೈಗೆ ಚೀಟಿಯೊಂದನ್ನು ನೀಡಿದರು. ಅದನ್ನು ಸಣ್ಣ ಚೌಕವಾಗಿ ಮಡಿಚಿತ್ತು ಹಾಗೂ ಅದರ ಕೊನೆಗಳನ್ನು ಒಳಕ್ಕೆ ಮಡಚಿ ಯಾರೂ ತೆರೆಯದಂತೆ ಸೀಲ್ಮಾಡಿದಂತಿತ್ತು. ಇದನ್ನು ನಿಮ್ಮ ಆಂಟಿ ಮಸೂದಾರಿಗೆ ಕೊಡು, ಎಂದರು ಮೃದುವಾಗಿ. ಅವರ ತಲೆ ಬಗ್ಗಿಸಿತ್ತು, ಕಣ್ಣುಗಳು ಕೆಳನೋಡುತ್ತಿದ್ದವು. ಆದರೆ ಎಲ್ಲರ ಮುಂದೆ ಕೊಡಬೇಡ.

ಮಸೂದಾ ಆಂಟಿ ನನ್ನ ನಿಜವಾದ ಆಂಟಿ ಆಗಿರಲಿಲ್ಲ. ಆಕೆ ನನ್ನ ತಂದೆಯ ಸೋದರ ಸೊಸೆಯಾಗಿದ್ದಳು, ಹಾಗಾಗಿ ನನ್ನ ತಂದೆ ತಾಯಿಯರು ಆಕೆಯನ್ನು ನಮ್ಮ ಅಕ್ಕನೆಂದು ಹೇಳುತ್ತಿದ್ದರು. ಆಕೆಯ ಪತಿ ಆಕೆಗೆ ವಿಚ್ಛೇದನ ನೀಡಿದ್ದುದರಿಂದ ಕೆಲತಿಂಗಳ ಹಿಂದೆ ನಮ್ಮೊಂದಿಗೆ ವಾಸಿಸಲು ಬಂದಿದ್ದಳು. ಆಕೆಯ ತಂದೆ ತಾಯಿ ಸಹ ವಿಚ್ಛೇದನಗೊಂಡಿದ್ದರು. ಆಕೆಯ ತಂದೆ ಕೆಳಮಹಡಿಯಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಹಾಗೂ ಆಕೆಯ ತಾಯಿ ಮತ್ತೊಂದು ಮದುವೆಯಾಗಿ ಟಾಂಗಾ ಪಟ್ಟಣಕ್ಕೆ ಹೋರಟುಹೋಗಿದ್ದರು. ನನ್ನ ತಂದೆ ಆಕೆಯ ತಾಯಿಯ ಸಹೋದರನಾಗಿದ್ದು ತಾಯಿ ಮತ್ತು ಮಗಳು ನನಗೆ ಬಾಲ್ಯದಿಂದಲೂ ನೆನಪಿರುವಂತೆ ಬಹಳ ವರ್ಷಗಳಿಂದ ನಮ್ಮ ಮನೆಗೆ ಅತಿಥಿಗಳಾಗಿ ಭೇಟಿ ನೀಡುತ್ತಿದ್ದರು. ನಮ್ಮ ಮನೆಗೆ ಎಷ್ಟೋ ನೆಂಟರು ಬರುತ್ತಿದ್ದರು ಹಾಗೂ ಎಷ್ಟೋ ಸಾರಿ ಬಂದವರು ಎಷ್ಟು ದಿನಗಳಾದರೂ ಹೊರಡುವ ಸೂಚನೆಗಳನ್ನು ತೋರುತ್ತಿರಲಿಲ್ಲ. ಮಸೂದಾ ಬಂದಾಗಲೂ ಹಾಗೇ ಆಗಿತ್ತು. ರೀತಿ ಅತಿಥಿಗಳ ಬಂದಾಗ ಮನೆಯಲ್ಲಿ ಹೊಸ ಹೊಸ ದಿನಚರಿ ಪ್ರಾರಂಭವಾಗುತ್ತಿತ್ತು, ಹೊಸ ಮಾತುಕತೆ, ಅತಿಥಿಗಳಿಗೆ ಊಟ, ಉಪಚಾರ - ಕೆಲವು ದಿನಗಳವರೆಗೆ - ಆನಂತರ ಅವರು ಹಿಂತಿರುಗಿ ಹೊರಡುವ ದಿನಕ್ಕಾಗಿ ಕಾಯುವುದು - ಅವರು ಆಕ್ರಮಿಸಿರುವ ನಮ್ಮ ಹಾಸಿಗೆಗಾಗಿ ಚಡಪಡಿಸುವುದು ಹಾಗೂ ನಮ್ಮ ಎಂದಿನ ದಿನಚರಿಗಾಗಿ ಹಿಂತಿರುಗಲು ಕಾಯುವುದು. ಆದರೆ ನಮಗೆಲ್ಲಾ ಮಸೂದಾ ಇಷ್ಟವಾಗಿದ್ದಳು, ಏಕೆಂದರೆ ಆಕೆ ನಾವು ಸಣ್ಣವರಿದ್ದಾಗ ನಮ್ಮೊಂದಿಗೆ ಆಟವಾಡುತ್ತಿದ್ದಳು, ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಿದ್ದಳು ಹಾಗೂ ಜನರ ಹಿಂದೆ ಗುಸುಗುಸು ಮಾತನಾಡಿ ನಗುತ್ತಿದ್ದಳು. ಅವಳು ಅದೆಷ್ಟು ಸುಂದರವಾಗಿ ಕಾಣುತ್ತಿದ್ದಳೆಂದರೆ ಅವರ ಕಪ್ಪು ಚರ್ಮ ಹೊಳೆಯುತ್ತಿತ್ತು ಹಾಗೂ ಅವಳು ರಸ್ತೆಯಲ್ಲಿ ನಡೆಯುವಾಗ, ಗಂಡಸರು ಕೆಲವೊಮ್ಮೆ ಅವಳನ್ನು ತಿರುಗಿ ನೋಡುತ್ತಿದ್ದರು ಹಾಗೂ ಆಕೆ ತನ್ನ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿರುತ್ತಿರಲಿಲ್ಲ. ಆಕೆಗೆ ವಿಚ್ಛೇದನವಾದಾಗ ಆಕೆಗೆ ಆಗಷ್ಟೇ ಇಪ್ಪತ್ತು ವರ್ಷ ವಯಸ್ಸು ದಾಟಿದ್ದಿರಬೇಕು, ಆಕೆಗೆ ಮದುವೆಯಾದಾಗಿನಿಂದ ಏನೋ ಸಮಸ್ಯೆಯಿದೆಯೆಂಬುದು ನಮಗೆ ತಿಳಿದಿತ್ತು, ಏಕೆಂದರೆ ಆಕೆ ನಮ್ಮ ಮನೆಗೆ ಬಂದಾಗಲೆಲ್ಲಾ ತನ್ನ ಗಂಡನ ಕಾಟದ ಕತೆಗಳನ್ನು ಹೇಳಿ ನಮ್ಮ ಅಮ್ಮನ ಕಣ್ಣಲ್ಲೂ ನೀರು ತರಿಸುತ್ತಿದ್ದಳು. ಕೊನೆಕೊನೆಗೆ ಗಂಡ ಹೆಂಡತಿ ಒಟ್ಟಾಗಿ ಬಾಳುವುದು ಸಾಧ್ಯವೇ ಆಗದೆ ಏನಾದರೂ ತೀರ್ಮಾನವಾಗುವವರೆಗೂ ನಮ್ಮ ಮನೆಯಲ್ಲೇ ಇರುತ್ತೇನೆಂದು ಮಸೂದಾ ಗಂಡನನ್ನು ಬಿಟ್ಟು ನಮ್ಮ ಮನೆಗೆ ಬಂದುಬಿಟ್ಟಳು.

ಮಾಲಿಮ್ಹಸನ್ನನ್ನ ಕೈಗೆ ಕೊಟ್ಟಿರುವ ಚೀಟಿ ಏನೆಂಬುದು ನನಗೆ ತಿಳಿದಿತ್ತು. ಸಣ್ಣ ಹುಡುಗನೊಬ್ಬನಿಗೆ ಚೀಟಿಯೊಂದನ್ನು ಕೊಟ್ಟು ಅದನ್ನು ಮಹಿಳಾ ಸಂಬಂಧಿಕಳೊಬ್ಬಳಿಗೆ ರಹಸ್ಯವಾಗಿ ಕೊಡು ಎಂದು ಹೇಳಿದರೆ ಅದು ಪ್ರೇಮ ಪತ್ರವಾಗಿರದೆ ಮತ್ತೇನು ಆಗಿರಲು ಸಾಧ್ಯ? ನನ್ನಂಥ ದಡ್ಡ ಬಾಲಕನಿಗೇ ಅದು ತಿಳಿದಿತ್ತು. ಚೀಟಿಯನ್ನು ನನ್ನ ಅಂಗಿಯ ಕಿಸೆಯಲ್ಲಿ ಹಾಕಿಕೊಂಡು ಮಾಲಿಮ್ಹಸನ್ಕಡೆಗೆ ನೋಡದೆ ಅಲ್ಲಿಂದ ಮನೆಗೆ ಹೊರಟೆ. ಮನೆಯಲ್ಲಿ ನನ್ನ ಪುಸ್ತಕಗಳನ್ನು ಇಡಲು ಹೋದಾಗ ಅದೃಷ್ಟವಶಾತ್ ಹಾಜಿ ಅಲ್ಲಿರಲಿಲ್ಲ, ಇಲ್ಲದಿದ್ದಲ್ಲಿ ನಾನು ಅವನಿಗೆ ಖಂಡಿತಾ ಚೀಟಿಯ ವಿಷಯ ಹೇಳುತ್ತಿದ್ದೇ ಹಾಗೂ ಅವನು ಅದರ ಕುರಿತು ಅಮ್ಮನ ಬಳಿ ಹೇಳಲು ಓಡಿರುತ್ತಿದ್ದ. ಚೀಟಿಯ ಕುರಿತು ಏನು ಮಾಡಬೇಕೆಂದು ನಿರ್ಧರಿಸಲು ನನಗೆ ಸ್ವಲ್ಪ ಸಮಯ ಬೇಕಿತ್ತು. ನಾನೇನಾದರೂ ಅದನ್ನು ಮಸೂದಾಳಿಗೆ ನೀಡಿದರೆ, ಅವಳು ನನಗೆ ಹಿಂತಿರುಗಿ ಮಾಲಿಮ್ಹಸನ್ಗೆ ತಲುಪಿಸಲು ಮತ್ತೊಂದು ಚೀಟಿ ನೀಡಿದರೆ - ಪೋಸ್ಟ್ಮ್ಯಾನ್ಕೆಲಸ ನನಗೆ ಇಷ್ಟವಿರಲಿಲ್ಲ. ನಾನು ಕೆಲಸ ಮಾಡುತ್ತಿರುವುದು ನನ್ನ ತಂದೆಗೆ ತಿಳಿದರೆ ನನ್ನ ತಂದೆ ನನ್ನನ್ನು ತಿರಸ್ಕಾರದಿಂದ ನೋಡುತ್ತಿದ್ದರು ಹಾಗೂ ನನ್ನ ಅಮ್ಮ ನನಗೆ ಗಂಟೆಗಟ್ಟಲೆ ಕೂಡ್ರಿಸಿ ಬಯ್ಯುತ್ತಿದ್ದರೆಂಬುದು ನನಗೆ ತಿಳಿದಿತ್ತು. ಮಾಲಿಮ್ಹಸನ್ ರೀತಿ ಮಸೂದಾಳಿಗೆ ಚೀಟಿ ಬರೆಯಬಾರದಿತ್ತು ಹಾಗೂ ಅದನ್ನು ತಲುಪಿಸಲು ನನಗೆ ಕೊಡಬಾರದಿತ್ತು ಎಂದು ಅದೇಕೋ ನನಗನ್ನಿಸುತ್ತಿತ್ತು. ಚೀಟಿಯನ್ನು ನಾನು ನನ್ನ ಅಮ್ಮನಿಗೆ ಕೊಟ್ಟುಬಿಟ್ಟರೆ ನಾನು ಎಲ್ಲ ಜವಾಬ್ದಾರಿಯಿಂದ ಮುಕ್ತನಾಗಿಬಿಡುತ್ತೇನೆ ಎಂದನ್ನಿಸುತ್ತಿತ್ತು. ಆಮೇಲೆ ಅಮ್ಮ ಬೇಕಾದರೆ ಅದನ್ನು ಮಸೂದಾಳಿಗೆ ತಲುಪಿಸುವುದೋ ಅಥವಾ ನನ್ನ ತಂದೆಗೆ ಕೊಡುವುದೋ ಅಥವಾ ಅದನ್ನು ಹರಿದುಹಾಕುವುದೋ ಎಂಬುದನ್ನು ತೀರ್ಮಾನಿಸಲಿ. ಚೀಟಿಯನ್ನು ನಾನು ನನ್ನ ತಲೆದಿಂಬಿನ ಚೀಲದಲ್ಲಿ ಅಡಗಿಸಿಟ್ಟು ಹೋದೆ.

ಸುರಕ್ಷಿತವಾದುದೆಂದರೆ ನಾನು ಮುಗ್ಧನಂತೆ, ಅದರೊಳಗೆ ನಿಷೇಧಿತವಾಗಿರುವುದು ಏನೂ ನನಗೆ ತಿಳಿದಿಲ್ಲವೆಂಬಂತೆ ಚೀಟಿಯನ್ನು ಮಸೂದಾಳಿಗೆ ಕೊಟ್ಟುಬಿಡುವುದೆಂದು ಆಲೋಚಿಸಿದೆ. ಆದರೆ ಕೊನೆಯಲ್ಲಿ ಎಲ್ಲವೂ ತಲಕೆಳಗಾಯಿತು. ರಾತ್ರಿ ಊಟವಾದ ಮೇಲೆ, ನನ್ನ ತಾಯಿ ಮತ್ತು ಮಸೂದಾ ಮುಂದಿನ ಕೋಣೆಯಲ್ಲಿ ಮಾತನಾಡುತ್ತಾ ಕೂತಿದ್ದರು ಹಾಗೂ ನನ್ನ ತಂದೆ ಓದಲೋ ಅಥವಾ ರೇಡಿಯೋ ಕೇಳಲೋ ಅವರು ಮಲಗುವ ಕೋಣೆಗೆ ಹೋದರು. ಕೆಲಹೊತ್ತು ಮಸೂದಾ ಒಬ್ಬಳೇ ಕೂತಿರುವಂತೆ ಕಂಡಿತು ಹಾಗೂ ಇದೇ ನನಗೆ ದೊರೆತ ಸದವಕಾಶವೆಂದು ನಿರ್ಧರಿಸಿ, ನನ್ನ ಮಲಗುವ ಕೋಣೆಗೆ ಹೋಗಿ ತಲೆದಿಂಬಿನ ಚೀಲದಿಂದ ಚೀಟಿ ತೆಗೆದು ಮುಂದಿನ ಕೋಣೆಗೆ ಹೋದೆ. ನಾನು ಕೈ ಚಾಚಿ ಇನ್ನೇನು ಮಸೂದಾಳಿಗೆ ಚೀಟಿ ಕೊಡಬೇಕೆನ್ನುವಷ್ಟರಲ್ಲಿ ಹಿಂದಿನಿಂದ ನನ್ನ ಅಮ್ಮನ ಮಾತು ಕೇಳಿಸಿತು. ತಕ್ಷಣ ನಾನು ಕೈ ಹಿಂದಕ್ಕೆಳೆದುಕೊಂಡು ಕೈಯಲ್ಲಿರುವ ಚೀಟಿಯನ್ನು ನನ್ನ ಮುಷ್ಠಿಯಲ್ಲಿ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡಿದೆ.

ಏನದು? ನನ್ನ ಅಮ್ಮ ಕೇಳುತ್ತಾ, ನನ್ನ ಮುಷ್ಠಿಯ ಕಡೆಗೆ ಕೈಚಾಚಿದಳು. ನಾನು ತಕ್ಷಣ ಚೀಟಿಯನ್ನು ಮುಷ್ಠಿಯಲ್ಲಿ ಮುಚ್ಚಿಟ್ಟುಕೊಂಡೇ ನನಗೆ ಯಾವ ರೀತಿ ನೀಡಬೇಕೆಂದು ಸೂಚಿಸಲಾಗಿತ್ತೋ ಅದೇ ರೀತಿಯಲ್ಲಿ ಮಸೂದಾಳಿಗೆ ತಲುಪಿಸಿದೆ. ಮಸೂದಾ ಅದನ್ನು ನನ್ನ ಕೈಯಿಂದ ಕಿತ್ತುಕೊಂಡಳು ಹಾಗೂ ತಕ್ಷಣ ಅದನ್ನು ಅವಳ ಕಿಸೆಯಲ್ಲಿ ಹಾಕಿಕೊಂಡಳು. ಇಬ್ಬರಿಗೂ ಗಂಡಸೊಬ್ಬನು ಬರೆದಿರುವ ಪ್ರೇಮಪತ್ರವನ್ನು ನಾನು ನೀಡಿದ್ದೇನೆಂಬುದು ತಿಳಿದಿತ್ತು ಎಂದೆನ್ನಿಸುತ್ತದೆ ಹಾಗೂ ಅವರಿಬ್ಬರೂ ತಮ್ಮ ಮನಸ್ಸುಗಳಲ್ಲಿ ಏನೋ ಲೆಕ್ಕಾಚಾರ ಹಾಕುತ್ತಿದ್ದಾರೆಂಬುದೂ ನನಗೆ ತಿಳಿದಿತ್ತು. ಅದನ್ನು ನಿನಗೆ ಕೊಟ್ಟವರು ಯಾರು? ಅಮ್ಮ ಕೇಳಿದರು.

ಸ್ವಲ್ಪ ಹೊತ್ತಾದ ಮೇಲೆ ಮಸೂದಾಳ ಮುಖದಲ್ಲಿ ಮುಗುಳ್ನಗು ಕಾಣಿಸಿತು. ಆಕೆ ತನ್ನ ಕಿಸೆಯಿಂದ ಚೀಟಿಯನ್ನು ತೆಗೆದು ಅದನ್ನು ಬಿಚ್ಚಿದಳು. ಅದನ್ನು ಓದುತ್ತಿದ್ದಂತೆ ಅವಳ ಮುಗುಳ್ನಗು ಹೆಚ್ಚಾಯಿತು ಹಾಗೂ ಅದನ್ನು ಓದಿ ಮುಗಿಸಿದ ನಂತರ ಜೋರಾಗಿ ನಕ್ಕಳು. ಅದೊಂದು ರೀತಿಯ ಹೆಂಗಸರು ಮಾತ್ರ ಮಾಡಬಲ್ಲ ಅಣಕದ ನಗುವಾಗಿತ್ತು. ನಗುವನ್ನು ಹೇಗೆ ವಿವರಿಸುವುದೆಂದು ನನಗೆ ತಿಳಿದಿಲ್ಲ, ನಾನು ರಸ್ತೆಯಲ್ಲಿ ಹೋಗುತ್ತಿರುವಾಗ ಹುಡುಗಿಯರು ರೀತಿ ನಗುವುದನ್ನು ಕೇಳಿದ್ದೇನೆ ಹಾಗೂ ಅದನ್ನು ಕೇಳಿದಾಗಲೆಲ್ಲಾ ನಾನು ಜಗತ್ತಿನಲ್ಲೇ ಅತ್ಯಂತ ಮತಿಗೇಡಿಯೆಂದೆನ್ನಿಸುತ್ತಿತ್ತು. ಅದೇ ರೀತಿ ಮಾಲಿಮ್ಹಸನ್ಚೀಟಿಯ ಬಗ್ಗೆ ಮಸೂದಾ ನಕ್ಕಿದ್ದು.

ಅಷ್ಟೊತ್ತಿಗಾಗಲೇ ನನ್ನ ಅಮ್ಮ ನನ್ನ ಕಾಲರ್ಪಟ್ಟಿ ಬಿಗಿಯಾಗಿ ಹಿಡಿದಿದ್ದಳು ಹಾಗೂ ನನಗೆ ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಮಸೂದಾಳ ನಗುವಿನಿಂದ ಪತ್ರದಲ್ಲಿ ಏನಿತ್ತೆಂಬುದನ್ನು ನನ್ನ ಅಮ್ಮ ಊಹಿಸಿದ್ದಳು ಹಾಗೂ, ನಿನಗೆ ಅದನ್ನು ಕೊಟ್ಟಿದ್ದು ಯಾರು? ಎಂದು ಕೇಳಿದಳು. ನಾನೂ ಏನೂ ಉತ್ತರ ಹೇಳದಿದ್ದಾಗ, ತಲೆಯ ಹಿಂದೆ ಚಳ್ಳನೆ ಒಂದು ಏಟು ಬಿತ್ತು ಹಾಗೂ ನನಗರಿಯದೆ ನನ್ನ ಬಾಯಿಯಿಂದ ಮಾಲಿಮ್ಹಸನ್ಹೆಸರು ಹೊರಬಂತು. ಅಮ್ಮ ಕೆಳಗೆ ಕೂತಳು, ನನ್ನ ಕಾಲರ್ಪಟ್ಟಿ ಇನ್ನೂ ಆಕೆಯ ಕೈಯಲ್ಲೇ ಇತ್ತು. ಅವನಿಗೆ ಏನು ಬೇಕಂತೆ? ಅಮ್ಮ ಮಸೂದಾಳನ್ನು ಕೇಳಿದಳು.

ಮಸೂದಾ ಸುಮ್ಮನೆ ಭುಜ ಕುಣಿಸಿದಳು, ಮುಗುಳ್ನಗುತ್ತಾ. ಏನೋ ಗೋಜಲು ಗೋಜಲು ಗೀಚಿದ್ದಾನೆ. ಅದನ್ನು ಊಹಿಸಲೂ ಸಾಧ್ಯವೆ? ಅಂತಹ ಕ್ಷುದ್ರ ವ್ಯಕ್ತಿಯ ಜೊತೆ ಎಂಥಹುದೇ ವ್ಯವಹಾರ ಹೇಗೆ ಸಾಧ್ಯ? ಆತ ಮತ್ತು ಆತನ ಪುಸ್ತಕಗಳಷ್ಟೇ ಆತನ ಪ್ರಪಂಚ. ಅವನಿಗೆಷ್ಟು ಧೈರ್ಯ? ಆತನ ತಲೆ ಕೆಟ್ಟಿದೆ.

ಹಾಗೆ ಹೇಳಿದವಳೇ ಚೀಟಿಯನ್ನು ಹರಿದು ಚೂರು ಚೂರು ಮಾಡಿ ಕೆಳಗೆ ಹಾಕಿದಳು. ಆಕೆಯ ಮುಖದಲ್ಲಿದ್ದ ತಿರಸ್ಕಾರ ನೋಟವನ್ನು ನೋಡಿ ಮಾಲಿಮ್ಹಸನ್ರವರಿಗೆ ನನ್ನಿಂದಾಗಿಯೇ ಬೈಗಳು ದೊರೆತವೇನೋ ಎಂದು ನನಗೇ ನನ್ನ ಬಗ್ಗೆ ಅಸಹ್ಯವಾಗತೊಡಗಿತು. ನನ್ನ ಕಾಲರ್ಪಟ್ಟಿಯ ಮೇಲಿನ ನನ್ನ ಅಮ್ಮನ ಬಿಗಿತ ಮತ್ತಷ್ಟು ಹೆಚ್ಚಾಯಿತು ಹಾಗೂ ಆಕೆಯಲ್ಲಿ ಹೆಚ್ಚಾಗುತ್ತಿದ್ದ ಸಿಟ್ಟಿನ ಅರಿವಾಗತೊಡಗಿತು. ನನ್ನ ಅಮ್ಮನಿಗೆ ಪೂರ್ತಿ ಕತೆ ಕೇಳಬೇಕಿತ್ತು ಹಾಗೂ ಎಲ್ಲ ವಿವರಗಳು ಕೇಳಬೇಕೆಂದಳು. ಮಾಲಿಮ್ಹಸನ್ನನ್ನೊಂದಿಗೆ ಏನಾದರೂ ಹೇಳಬಾರದ್ದನ್ನು ಹೇಳಿದ್ದಾನೆಯೇ, ನನ್ನನ್ನೇನಾದರೂ ಮುಟ್ಟಿದ್ದಾನೆಯೇ, ನನಗೆ ಏನೇನು ಹೇಳಿಕೊಟ್ಟಿದ್ದಾನೆ, ದಿನ ಮಧ್ಯಾಹ್ನ ಏನೆಲ್ಲಾ ನಡೆಯಿತು, ನನಗೆ ಚೀಟಿ ಕೊಡುವಾಗ ಏನೇನು ಹೇಳಿದ ಎಲ್ಲವನ್ನೂ ತಿಳಿದುಕೊಳ್ಳಬೇಕೆಂದಳು. ಒಂದೊಂದು ಪ್ರಶ್ನೆಗೂ ನನಗೆ ಒಂದೊಂದು ಏಟು ನನ್ನ ಅಮ್ಮನಿಂದ ಬೀಳುತ್ತ&