ಬಡವ ನಸ್ರುದ್ದೀನ್
ಆರಾಮವಾಗಿ ಕೂತಿದ್ದ ನಸ್ರುದ್ದೀನನ
ಬಳಿ ಆತನ
ಪತ್ನಿ ಫಾತಿಮಾ
ಬಂದು ಹೇಳಿದಳು,
`ನೀನಿಷ್ಟು ಬಡವನೆಂದು ಮೊದಲೇ
ತಿಳಿದಿದ್ದರೆ ನಾನು ನಿನ್ನನ್ನು ಮದುವೆಯೇ ಆಗುತ್ತಿರಲಿಲ್ಲ.’
`ಏಕೆ? ಮದುವೆಗೆ ಮೊದಲು
ನಾನು ನಿನಗೆ
ಸಾಕಷ್ಟು ಸಾರಿ
ಹೇಳಿದ್ದೆನೆಲ್ಲಾ, ನನಗೆ ನಿನ್ನನ್ನು ಬಿಟ್ಟರೆ ಮತ್ತೇನೂ
ಇಲ್ಲ. ನೀನೇ
ನನ್ನ ಇಡೀ
ಜಗತ್ತು ಎಂದು’ ಹೇಳಿದ ನಸ್ರುದ್ದೀನ್.
ಮಾತು ಮತ್ತು ನಿದ್ರೆ
ಧಾರ್ಮಿಕ ಉಪದೇಶಕ್ಕೆ ಆ
ಊರಿನ ಮೌಲ್ವಿ
ಎಲ್ಲರನ್ನೂ ಕರೆದಿದ್ದ.
ನಸ್ರುದ್ದೀನ್ ಮತ್ತು ಆತನ ಪತ್ನಿ ಫಾತಿಮಾ
ಅವರೂ ಸಹ
ಹೊರಟರು. ಮೌಲ್ವಿಯ
ಬೋರು ಹೊಡೆಸುವ
ಧಾರ್ಮಿಕ ಮಾತುಗಳನ್ನು
ಕೇಳುತ್ತಾ ಹಾಗೆಯೇ
ನಸ್ರುದ್ದೀನ್ ನಿದ್ದೆ ಹೋದ. ಅದನ್ನು ನೋಡಿದ
ಮೌಲ್ವಿ ಫಾತಿಮಾಳಿಗೆ
ಸಿಟ್ಟಿನಿಂದ,
`ನಿನ್ನ ಗಂಡ ನಿದ್ದೆ
ಹೋಗುತ್ತಿದ್ದಾನೆ! ಅವನನ್ನು ಎಬ್ಬಿಸು!’ ಎಂದ.
ತಲೆ ತಿರುಗಬೇಕು
ಮುಲ್ಲಾ ನಸ್ರುದ್ದೀನ್ ಸುಗಂಧ
ದ್ರವ್ಯಗಳ ಅಂಗಡಿ
ಇಟ್ಟಿದ್ದ. ಒಂದು
ದಿನ ಒಬ್ಬ
ಯುವಕ ಬಂದು,
`ನನಗೆ ಘಮಗಮಿಸುವ ಸೆಂಟು
ಬೇಕು. ನಾನು
ಅದನ್ನು ಹಚ್ಚಿಕೊಂಡಿದ್ದರೆ
ಹುಡುಗಿಯರು ತಲೆ
ತಿರುಗಿ ಬೀಳುವಂತಿರಬೇಕು’ ಎಂದ.
`ತಗೊಳ್ಳಿ, ಇದನ್ನು ಬಳಸಿ’ ಎಂದು ಮುಲ್ಲಾ ಒಂದು
ಬಾಟಲಿ ಕೊಟ್ಟ.
`ಇದರ ಹೆಸರೇನು?’ ಕೇಳಿದ
ಆ ಯುವಕ.
`ಕ್ಲೋರೋಫಾರಂ’ ಹೇಳಿದ ಮುಲ್ಲಾ.
ಸೇಡು
ಮುಲ್ಲಾ ನಸ್ರುದ್ದೀನನ ಗೆಳೆಯ
ಅಬ್ದುಲ್ಲಾ ಮದುವೆಯಾಗಲು
ಒಬ್ಬ ಹುಡುಗಿಯನ್ನು
ಮನೆಯವರೆಲ್ಲಾ ಸೇರಿ ಒಪ್ಪಿಸಿದ್ದರು. ಆ ದಿನ ನಸ್ರುದ್ದೀನ್ ಮನೆಗೆ
ಬಂದಾಗ ಅವನ
ಪತ್ನಿ ಫಾತಿಮಾ,
`ಅಬ್ದುಲ್ಲಾ ಕೊನೆಗೂ ಮದುವೆಗೆ
ಒಪ್ಪಿದ್ದಾನಂತೆ? ಆದರೆ ಆ ಹುಡುಗಿ ಜಗಳಗಂಠಿ,
ಹಠಮಾರಿ, ಸೋಮಾರಿ
ಹಾಗೂ ದುಂದು
ವೆಚ್ಚ ಮಾಡುವವಳು.
ಆ ಹುಡುಗಿಯನ್ನು
ಮದುವೆಯಾಗಬೇಡವೆಂದು ಅಬ್ದುಲ್ಲಾನಿಗೆ ಎಚ್ಚರಿಕೆ ನೀಡಿ’ ಎಂದಳು.
`ನಾನ್ಯಾಕೆ ಎಚ್ಚರಿಕೆ ನೀಡಲಿ?
ನಾನು ಮದುವೆಯಾಗುವಾಗ
ಅವನು ನನಗೆ
ಅಂಥ ಯಾವುದೇ
ಎಚ್ಚರಿಕೆ ನೀಡಿಲ್ಲವಲ್ಲ!
ಅವನೂ ಅನುಭವಿಸಲಿ’ ಎಂದ ನಸ್ರುದ್ದೀನ್.
ಮುಲ್ಲಾ ನಸ್ರುದ್ದೀನ್ ಗಾಢವಾದ
ನಿದ್ರೆಯಲ್ಲಿದ್ದ. ಅವನ ಪತ್ನಿ ಫಾತಿಮಾ ಒಂದೊತ್ತಿನಲ್ಲಿ
ಅವನ ಭುಜ
ಜೋರಾಗಿ ಅಲುಗಾಡಿಸಿ
ಎಬ್ಬಿಸಿ,
`ಎದ್ದೇಳು, ಮನೆ ಅಲುಗಾಡುತ್ತಿದೆ.
ಭೂಕಂಪವಾಗುತ್ತಿರಬಹುದು! ಮಲಗಿರುವ ಈ
ಕೋಣೆಯ ಛಾವಣಿ
ಕುಸಿಯಬಹುದು!’ ಎಂದಳು ಗಾಭರಿಯಿಂದ.
`ಹೇ, ಸುಮ್ಮನೆ ಮಲಗಿಕೋ.
ಕುಸಿದರೆ ಕುಸಿಯಲಿ.
ಇದೇನು ನಮ್ಮ
ಸ್ವಂತ ಮನೆಯಲ್ಲವಲ್ಲ’ ಹೇಳಿದ ಮುಲ್ಲಾ.
ಪುನಃ ಹೋಗಬೇಕೆ?
ನಸ್ರುದ್ದೀನ್ ಚಿಕ್ಕವನಾಗಿದ್ದಾಗ ಅವನನ್ನು
ಶಾಲೆಗೆ ಸೇರಿಸಿದರು.
ಶಾಲೆಯಿಂದ ಹಿಂದಿರುಗಿದಾಗ
ಅವನ ತಾಯಿ
ಕೇಳಿದರು,
`ಶಾಲೆಯಲ್ಲಿ ಮೊದಲ ದಿನ
ಹೇಗಿತ್ತು ಮಗಾ?’
`ಮೊದಲ ದಿನ? ಅಂದರೆ
ನಾನಲ್ಲಿಗೆ ಪುನಃ
ಹೋಗಬೇಕೆ?’ ಕೇಳಿದ
ಬಾಲಕ ನಸ್ರುದ್ದೀನ್.
ಭೂತಕಾಲ
ಶಾಲೆಯಲ್ಲಿ ಮಕ್ಕಳಿಗೆ ಅಧ್ಯಾಪಕಿ
ಭೂತಕಾಲ, ವರ್ತಮಾನ
ಕಾಲ, ಭವಿಷ್ಯತ್
ಕಾಲಗಳ ಬಗ್ಗೆ
ಹೇಳಿಕೊಡುತ್ತಿದ್ದರು. ಹೇಳಿಕೊಟ್ಟು ಕೊನೆಯಲ್ಲಿ
ಒಂದು ಉದಾಹರಣೆಯ
ಪ್ರಶ್ನೆ ಕೇಳಿದರು,
`ನಾನು ಸುಂದರವಾಗಿದ್ದೇನೆ. ಇದು ಯಾವ ಕಾಲ?’
`ತಮಾಷೆ ಮಾಡಬೇಡಿ ಟೀಚರ್,
ಅದು ಭೂತಕಾಲವೇ
ಆಗಿರಬೇಕು!’ ಹೇಳಿದ ನಸ್ರುದ್ದೀನ್.
ಮುಠ್ಠಾಳ
ಒಂದು ದಿನ ನಸ್ರುದ್ದೀನನ
ಮಗ ತನ್ನ
ಅಪ್ಪನನ್ನು ಕೇಳಿದ.
`ಅಪ್ಪಾ, ಮುಠ್ಠಾಳ ಅಂದರೆ
ಯಾರು?’
`ಮುಠ್ಠಾಳನೆಂದರೆ ತನ್ನ ಅಸಂಬದ್ಧ
ವಿಚಾರಗಳನ್ನು ವಿಚಿತ್ರವಾಗಿ ಇತರರಿಗೆ ಅರ್ಥವಾಗದಂತೆ ಸುತ್ತಿ
ಬಳಸಿ ತನ್ನ
ಮಾತು ಕೇಳದಿರುವ
ಮತ್ತೊಬ್ಬ ವ್ಯಕ್ತಿಗೆ
ತನ್ನದೇ ಶೈಲಿಯಲ್ಲಿ
ಹೇಳಿ ಅರ್ಥ
ಮಾಡಿಸುವ ವಿಫಲ
ಯತ್ನ ನಡೆಸುವ
ವ್ಯಕ್ತಿ. ನನ್ನ
ಮಾತು ಅರ್ಥವಾಯಿತೆ?’
ಹೇಳಿದ ನಸ್ರುದ್ದೀನ್.
`ಇಲ್ಲ’ ಹೇಳಿದ ಮಗ.
ಅದ್ಭುತ ಮಗ
ದೂರದೂರಿನಿಂದ ಬಹಳ ವರ್ಷಗಳ
ನಂತರ ನಸ್ರುದ್ದೀನನ
ಗೆಳೆಯನೊಬ್ಬ ಬಂದಾಗ ಇಬ್ಬರೂ ಭೇಟಿಯಾದರು. ಅದೂ
ಇದೂ ಮಾತನಾಡುತ್ತಾ,
ಆ ಗೆಳೆಯ
ತನ್ನ ಮಗನ
ಬಗ್ಗೆ ಹೇಳುತ್ತಾ,
`ನನ್ನ ಮಗ ತೀರಾ
ಹಾಳಾಗಿದ್ದಾನೆ. ಅವನ ಮುಂದಿನ ಭವಿಷ್ಯದ ಬಗ್ಗೆ
ಚಿಂತಿತನಾಗಿದ್ದೇನೆ’ ಎಂದ.
`ಹೌದೆ? ಆದರೆ ನನ್ನ
ಮಗ ಅತ್ಯಂತ
ನೀತಿವಂತ, ಶೀಲವಂತ’ ಎಂದ ನಸ್ರುದ್ದೀನ್.
`ಅವನು ಸಿಗರೇಟು ಸೇದುತ್ತಾನೆಯೆ?’
ಕೇಳಿದ ಗೆಳೆಯ
`ಇಲ್ಲ’ ಹೇಳಿದ ನಸ್ರುದ್ದೀನ್.
`ಮದ್ಯಪಾನ ಮಾಡುತ್ತಾನೆಯೆ?’
`ಇಲ್ಲ’
`ಮನೆಗೆ ತಡವಾಗಿ ಬರುತ್ತಾನೆಯೆ?’
`ಇಲ್ಲ’
`ಹಾಗಾದರೆ ನಿನ್ನ ಮಗ
ನಿಜವಾಗಿಯೂ ಅದ್ಭುತನಾದವನು
ಅವನ ವಯಸ್ಸೆಷ್ಟು?’
`ಮುಂದಿನ ತಿಂಗಳಿಗೆ ಐದು
ತಿಂಗಳಾಗುತ್ತದೆ’ ಹೇಳಿದ ನಸ್ರುದ್ದೀನ್.
ಪ್ರೀತಿಯ ಪ್ರಾಣಿ
ಮುಲ್ಲಾ ನಸ್ರುದ್ದೀನ್ ಮೃಗಾಲಯವೊಂದರಲ್ಲಿ
ಕೆಲಸ ಮಾಡುತ್ತಿದ್ದ.
ಯಾರೋ ಭೇಟಿ
ನೀಡಿದಾಗ ಅವನು
ಜೋರಾಗಿ ಅಳುತ್ತಿದ್ದುದನ್ನು
ಕಂಡು,
`ಯಾಕಪ್ಪಾ ಅಳುತ್ತಿದ್ದೀಯಾ’ ಎಂದು ಕೇಳಿದರು.
`ಆನೆ ಸತ್ತು ಹೋಗಿದೆ’ ಹೇಳಿದ ನಸ್ರುದ್ದೀನ್.
`ಅಯ್ಯೋ ಪಾಪ! ಅದು
ನೀವು ಸಾಕಿದ
ಪ್ರೀತಿಯ ಪ್ರಾಣಿಯಾಗಿರಬಹುದಲ್ವೆ?’
`ಅದಕ್ಕಲ್ಲಾ, ಅದರ ಸಮಾಧಿ
ನಾನೇ ತೋಡಬೇಕು’ ಹೇಳಿದ ತನ್ನ ಅಳು
ಮುಂದುವರಿಸಿದ ನಸ್ರುದ್ದೀನ್.
ತಮಾಷೆ
ನಸ್ರುದ್ದೀನ್ ತನ್ನ ಅತ್ಯಂತ
ದೊಗಳೆ ಪೈಜಾಮ
ಧರಿಸಿ ಹೋಗುತ್ತಿದ್ದ.
ಅದನ್ನು ನೋಡಿದ
ಅಬ್ದುಲ್ಲಾ.
`ಏನು ನಸ್ರುದ್ದೀನ್ ನಿನ್ನ
ಧಿರಿಸು!? ತಮಾಷೆಯಾಗಿದೆ!’
ಎಂದ.
`ಹೌದು ತಮಾಷೆಯಾಗಿದೆ. ಆದರೆ
ಆ ಪೈಜಾಮ
ಧರಿಸಿಲ್ಲದಿದ್ದಲ್ಲಿ ನಾನು ಇನ್ನೂ
ತಮಾಷೆಯಾಗಿ ಕಾಣುತ್ತಿದ್ದೆ’ ಹೇಳಿದ ನಸ್ರುದ್ದೀನ್.
ಬಹುಮಾನ
ನ್ಯಾಯಾಧೀಶ ನಸ್ರುದ್ದೀನನನ್ನು ಆ
ಊರಿನ ಕ್ರೀಡೆಗಳ
ಉದ್ಘಾಟನೆಗೆ ಆಹ್ವಾನಿಸಿದರು. ಉದ್ಘಾಟನೆಯ ನಂತರ ಓಟದ
ಪಂದ್ಯ ಆರಂಭಿಸಲು
ಸಿದ್ಧವಾದರು.
`ಏನದು?’ ಕೇಳಿದ ನಸ್ರುದ್ದೀನ್.
`ಅದು ಓಟದ ಪಂದ್ಯ.
ಗೆದ್ದವರಿಗೆ ಬಹುಮಾನ ಕೊಡುತ್ತಾರೆ’ ಹೇಳಿದರು ಆಯೋಜಕರು.
`ಯಾರು ಗೆಲ್ಲುತ್ತಾರೆ?’ ಕೇಳಿದ
ನಸ್ರುದ್ದೀನ್.
`ಓಟದಲ್ಲಿ ಯಾರು ಮೊದಲು
ಬರುತ್ತಾರೋ ಅವರು’
`ಅದು ಸರಿ. ಗೆಲ್ಲುವವನೊಬ್ಬನನ್ನು
ಬಿಟ್ಟು ಉಳಿದವರೆಲ್ಲಾ
ಏಕೆ ಓಡುತ್ತಿದ್ದಾರೆ?’
ಕೇಳಿದ ನ್ಯಾಯಾಧೀಶ
ನಸ್ರುದ್ದೀನ್.
ಮೊದಲ ಗಂಡಸು
ಕೊನೆಗೂ ಒಂದು ಹೆಣ್ಣನ್ನು
ಪ್ರೇಮಿಸುವಲ್ಲಿ ನಸ್ರುದ್ದೀನ್ ಯಶಸ್ವಿಯಾದ. ಒಂದು ದಿನ
ಅವಳೊಂದಿಗೆ ಕುಳಿತಿದ್ದಾಗ
ತನ್ನ ಮನದಲ್ಲಿ
ಬಹಳ ದಿನಗಳಿಂದ
ಇದ್ದ ಸಂಶಯವೊಂದನ್ನು
ಪರಿಹರಿಸಿಕೊಳ್ಳಲು,
`ನಿಜ ಹೇಳು, ನೀನು
ಪ್ರೇಮಿಸುತ್ತಿರುವ ಮೊದಲ ಗಂಡಸು ನಾನೇ ಅಲ್ಲವೆ?’
ಎಂದು ಕೇಳಿದ.
`ಹೌದು, ಆದರೆ ಎಲ್ಲ
ಗಂಡಸರೂ ಇದೇ
ಪ್ರಶ್ನೆ ಏಕೆ
ಕೇಳುತ್ತಾರೆ?’ ಕೇಳಿದಳು ನಸ್ರುದ್ದೀನನ ಪ್ರಿಯತಮೆ.
ಊರಿಗೆ ಹೊಸಬ
ನಸ್ರುದ್ದೀನ್ ಆ ಊರಿಗೆ
ಹೊಸದಾಗಿ ಬಂದಿದ್ದ.
ಸಂಜೆ ಗಡಂಗಿಗೆ
ಹೋಗಿ ಕೂತವನು
ಹೊರಬರುವಷ್ಟರಲ್ಲಿ ತಡವಾಗಿತ್ತು. ಕತ್ತಲಾಗಿ ಹುಣ್ಣಿಮೆಯ ಚಂದ್ರ
ಹೊಳೆಯುತ್ತಿದ್ದ. ಅವನಿಗೆ ಅದು ಹಗಲೋ ರಾತ್ರಿಯೋ
ತಿಳಿಯಲಿಲ್ಲ. ಅಷ್ಟರಲ್ಲಿ ಮತ್ತೊಬ್ಬಾತ ಗಡಂಗಿನಿಂದ ಹೊರಬಂದ.
ಅವನನ್ನೇ ಕೇಳಿಬಿಡೋಣವೆಂದು,
`ಅಲ್ಲಿ ಆಕಾಶದಲ್ಲಿರುವುದು ಸೂರ್ಯನೋ,
ಚಂದಿರನೋ?’ ಕೇಳಿದ.
ತಲೆ ಮೇಲೆತ್ತಿ ನೋಡಿದ
ಆ ವ್ಯಕ್ತಿ,
ಒಂದು ನಿಮಿಷ
ನಸ್ರುದ್ದೀನ್ ತನ್ನ ಬಡತನದಿಂದ
ಬೇಸತ್ತಿದ್ದ. ರೋಸಿ ಹೋದ ಅವನು ಒಂದು
ದಿನ ದೇವರ
ಪ್ರಾರ್ಥನೆ ಮಾಡಿದ.
ದೇವರು ಪ್ರತ್ಯಕ್ಷವಾದ.
`ಹೋ ದೇವರೆ! ಹತ್ತು
ಲಕ್ಷ ವರ್ಷಗಳೆಂದರೆ
ನಿನಗೆಷ್ಟು ಸಮಯ?’
ಕೇಳಿದ ನಸ್ರುದ್ದೀನ್.
`ಒಂದು ನಿಮಿಷ’ ಹೇಳಿದ ದೇವರು.
`ಹತ್ತು ಲಕ್ಷ ರೂಪಾಯಿಗಳೆಂದರೆ
ನಿನಗೆಷ್ಟು ಹಣ?
`ಒಂದು ರೂಪಾಯಿ.’
`ಹಾಗಾದರೆ ನನಗೊಂದು ರೂಪಾಯಿ
ಕೊಡು ದೇವರೇ!’
`ಆಯಿತು, ಒಂದು ನಿಮಿಷ
ಕಾಯಿ’ ಎಂದು ಹೇಳಿದ
ದೇವರು ಮಾಯವಾದ.
ನನಗೆ ಕಾಣಿಸುತ್ತಿಲ್ಲ
ನಸ್ರುದ್ದೀನ್ ಮತ್ತು ಅವನ
ಗೆಳೆಯ ಅಬ್ದುಲ್ಲಾ
ಒಂದು ದಿನ
ರಾತ್ರಿ ಕಂಠಮಟ್ಟ
ಕುಡಿದು ಮನೆಗೆ
ಹಿಂದಿರುಗುತ್ತಿದ್ದಾಗ ರಸ್ತೆಯಲ್ಲಿ ಬಾಯಿ
ತೆರೆದುಕೊಂಡಿದ್ದ ಮ್ಯಾನ್ ಹೋಲ್ನಲ್ಲಿ ಬಿದ್ದುಬಿಟ್ಟರು.
ಚೇತರಿಸಿಕೊಂಡ ಅಬ್ದುಲ್ಲಾ ಹೇಳಿದ,
`ಮುಲ್ಲಾ ಇದೇಕೆ ಇಷ್ಟು
ಕತ್ತಲಾಗಿದೆ?’ ಇಲ್ಲಿ.
`ನನಗೇನು ಗೊತ್ತು? ನನಗೆ
ಏನೂ ಕಾಣುತ್ತಿಲ್ಲವಲ್ಲ!’
ಹೇಳಿದ ನಸ್ರುದ್ದೀನ್.
j.balakrishna@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ