ಗುರುವಾರ, ಏಪ್ರಿಲ್ 18, 2024

ಪುಸ್ತಕ ದಾಸೋಹದ ಹಲವು ರೂಪ

ಈ ವಾರದ "ಸುಧಾ"ದಲ್ಲಿ (25/04/2024) ಪ್ರಕಟವಾಗಿರುವ ನನ್ನ ಚಿತ್ರ ಲೇಖನ:



 ಪುಸ್ತಕ ದಾಸೋಹದ ಹಲವು ರೂಪ

       ಕೆಲ ತಿಂಗಳುಗಳ ಹಿಂದೆ ಊಟಿಯ ಗ್ರಂಥಾಲಯವೊAದರಲ್ಲಿ ಅಮೂಲ್ಯ ಗ್ರಂಥವೊAದು ಕಳ್ಳತನವಾಗಿದ್ದು ಕಳ್ಳ ಬೆಂಗಳೂರಿನವನೆAದು ಹಾಗೂ ಅವನನ್ನು ಹುಡುಕಿ ಬಂಧಿಸಿರುವುದಾಗಿ ಸುದ್ದಿ ದಿನಪತ್ರಿಕೆಗಳಲ್ಲಿ ಓದಿದಾಗ ಅಚ್ಚರಿಯಾಯಿತು. ಪುಸ್ತಕ ಕಳ್ಳತನ ಮಾಡುವವನು ಸಾಮಾನ್ಯವಾಗಿ ಓದಿನಲ್ಲಿ, ಕೃತಿಯಲ್ಲಿ ಆಸಕ್ತಿ ಇರುವವನು. ನಾವೆಲ್ಲಾ ರೀತಿ ಒಂದಲ್ಲ ಒಂದು ಪುಸ್ತಕವನ್ನು ಕಳೆದುಕೊಂಡಿದ್ದೇವೆ. ಆದರೆ ಪುಸ್ತಕ ಕಳ್ಳ ಅದನ್ನು ಓದಲು, ಸಂಗ್ರಹಿಸಲು ಕದ್ದವನಲ್ಲ. ಅದು ಅಮೂಲ್ಯವಾದುದೆಂದೂ ಹಾಗೂ ಅದನ್ನು ಮಾರಾಟ ಮಾಡಿದರೆ ಹೆಚ್ಚು ಹಣ ಸಿಗುತ್ತದೆಂದು ಕದ್ದವನು. ಕಳ್ಳ ಕದ್ದನಂತರ ಅದನ್ನು ಆನ್ಲೈನ್ನಲ್ಲಿ ಮಾರಾಟಕ್ಕಿಟ್ಟಿದ್ದನಂತೆ. ಅದನ್ನು ಗಮನಿಸಿದ ಊಟಿಯ ಗ್ರಂಥಪಾಲಕನಿಗೆ ಅದು ತನ್ನ ಗ್ರಂಥಾಲಯದಿAದಲೇ ಕದ್ದ ಪುಸ್ತಕವೆಂಬುದು ತಿಳಿದು ಪೋಲೀಸಿಗೆ ತಿಳಿಸಿ ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಅವನಿಗೆ ಯಾವ ಶಿಕ್ಷೆ ಕೊಟ್ಟರೋ ಗೊತ್ತಿಲ್ಲ.

01: ಅಮೆರಿಕದ ಒಹಾಯ್ ನಗರದ ಬಾರ್ಟ್ಸ್ ಬುಕ್ಸ್ನ ಫುಟ್ಪಾತ್ನಲ್ಲಿನ ಪುಸ್ತಕದ ಕಪಾಟುಗಳು ಹಾಗೂ ಅಂಗಡಿಯ ಮುಂದಿನ ಬೋರ್ಡ್.

       ಆದರೆ ಅದಕ್ಕೆ ತದ್ವಿರುದ್ಧವಾದುದನ್ನು ಕೆಲತಿಂಗಳುಗಳ ಹಿಂದೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಒಹಾಯ್ ನಗರದಲ್ಲಿ ಕಂಡೆ. ಅಲ್ಲಿನ ಬಾರ್ಟ್ಸ್ ಬುಕ್ಸ್ ಎನ್ನುವ ಪುಸ್ತಕದಂಗಡಿಗೆ ಹೋಗಿದ್ದೆವು. ಅಂಗಡಿಯ ವಿಶೇಷತೆಯೆಂದರೆ ಪುಸ್ತಕದಂಗಡಿಯ ಒಳಗಡೆ ಪುಸ್ತಕಗಳಿರುವಂತೆ ಸಾಲು ಸಾಲು ಪುಸ್ತಕದ ತೆರೆದ ಕಪಾಟುಗಳನ್ನು ರಸ್ತೆಯಲ್ಲಿ ಫುಟ್ಪಾತಿನಲ್ಲಿ ಅಂಗಡಿಯ ಸುತ್ತಲೂ ಇರಿಸಿದ್ದಾರೆ. ರಸ್ತೆಯಲ್ಲಿ ಓಡಾಡುವವರು ಹೊರಗೆ ಇರಿಸಿರುವ ಸಾವಿರಾರು ಪುಸ್ತಕಗಳ ಮೇಲೆ ಕಣ್ಣಾಡಿಸಿ ತಮ್ಮ ಆಸಕ್ತಿಯ ಪುಸ್ತಕವಿದ್ದಲ್ಲಿ ಅಂಗಡಿಯೊಳಕ್ಕೆ ಹೋಗಿ ಹಣ ಪಾವತಿಸಿ ಕೊಂಡೊಯ್ಯಬಹುದು. ಅಂಗಡಿ ಮುಚ್ಚಿದ್ದಾಗ, ರಾತ್ರಿಯ ಹೊತ್ತು, ರಜೆ ದಿನಗಳಲ್ಲಿ ರಸ್ತೆಯಲ್ಲಿನ ಕಪಾಟುಗಳು ತೆರೆದೇ ಇರುತ್ತವೆ, ಯಾರೂ ಕಾವಲಿರುವುದಿಲ್ಲ. ಅಂಗಡಿಯ ಮುಂದೆ ಇರುವ ಬೋರ್ಡಿನಲ್ಲಿ `ವಾರದ ಏಳೂ ದಿನಗಳು ಬೆಳಿಗ್ಗೆ 10ರಿಂದ ಸಂಜೆ 6ವರೆಗೆ ಅಂಗಡಿ ತೆರೆದಿರುತ್ತದೆ ಹಾಗೂ ಅಂಗಡಿ ಮುಚ್ಚಿದ್ದಾಗ ಪುಸ್ತಕ ತೆಗೆದುಕೊಂಡವರು ಅದರ ಮೇಲೆ ನಮೂದಿಸಿರುವ ಹಣವನ್ನು ಬಾಗಿಲಿನ ಕಿಂಡಿಯಲ್ಲಿ ಹಾಕಿ ಹೋಗಿ' ಎಂದು ಬರೆದಿದ್ದಾರೆ. ನಾನು ಹೋದಾಗ ರಸ್ತೆಯಲ್ಲಿನ ಪುಸ್ತಕಗಳಲ್ಲಿ ನನ್ನ ಆಸಕ್ತಿಯ ನೂರಾರು ಹಲವಾರಿದ್ದವು. ಅವುಗಳಲ್ಲಿ ಸ್ಟೀಫನ್ ಜೆ ಗೌಲ್ಡ್ ಪುಸ್ತಕ ಹಾಗೂ ಇನ್ನು ಕೆಲವನ್ನು ಕೊಂಡು (ಅಂಗಡಿ ತೆರೆದಿತ್ತು) ಹಣ ಪಾವತಿಸಿ ತಂದೆ. ಆಗ ಒಂದರೆಕ್ಷಣ ಯೋಚಿಸಿದೆ ರೀತಿಯ ಪುಸ್ತಕ ಮಾರಾಟ ನನ್ನ ದೇಶದಲ್ಲಿ ಸಾಧ್ಯವೆ

       ಎಷ್ಟೋ ಜನ ಓದುಗರು ನಮ್ಮಿಂದ ಪುಸ್ತಕ ಎರವಲು ಪಡೆದು ಅವುಗಳನ್ನು ಹಿಂದಿರುಗಿಸುವುದಿಲ್ಲ ಎಂಬುದು ಎಲ್ಲ ಪುಸ್ತಕ ಪ್ರೇಮಿಗಳ ಅನುಭವಕ್ಕೆ ಬಂದಿರುತ್ತದೆ. ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ನಾನು ನನ್ನ ಒಂದು ದಿನದ ಸಂಬಳದ ಮೊತ್ತವನ್ನು ಪುಸ್ತಕಗಳಿಗಾಗಿ ಮೀಸಲಿರಿಸಿದ್ದೆ. ಯಾರಾದರೂ ಓದಲು ನನ್ನಿಂದ ಪುಸ್ತಕಗಳನ್ನು ಎರವಲು ಪಡೆದಾಗ ಅವರು ಓದಿದ ನಂತರ ಹಿಂದಿರುಗಿಸಲಿ ಎಂದು `Books are one of my absolute essentials. Please return after reading. Do not fold page corners' ಎಂಬ ಸೀಲ್ ಮಾಡಿಸಿ ನನ್ನ ಪುಸ್ತಕಗಳ ಮೇಲೆ ಠಸ್ಸೆ ಹಾಕಿರುತ್ತಿದ್ದೆ. ಕೆಲ ವರ್ಷಗಳ ನಂತರ ಸೂಚನೆ ತೀರಾ ಒರಟಾಯಿತೆನ್ನಿಸಿ ನಿಲ್ಲಿಸಿದೆ. ಈಗ ಓದಿರುವ, ಹಾಗೂ ಆಕರಕ್ಕೆ ಅವಶ್ಯಕವಿಲ್ಲವೆನ್ನಿಸುವ ಪುಸ್ತಕಗಳನ್ನು ನಾನೇ ಆಸಕ್ತರಿಗೆ ಹಂಚಿಬಿಡುತ್ತೇನೆ, ನನ್ನಲ್ಲಿರುವ ಸಂಗ್ರಹ ಕಡಿಮೆ ಮಾಡಿಕೊಳ್ಳುತ್ತಿದ್ದೇನೆ.

02: ಬಾಸ್ಟನ್ ನಗರದ ಪುಸ್ತಕ ವಿನಿಮಯವಿತರಣೆಯ ಕಪಾಟು.

       ಪುಸ್ತಕ ದಾಸೋಹದ ಮತ್ತೊಂದು ರೂಪ ಮೊಟ್ಟಮೊದಲಿಗೆ ಕಂಡಿದ್ದು ಅಮೆರಿಕದ ಬಾಸ್ಟನ್ನಲ್ಲಿ. ಅಲ್ಲಿನ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನನ್ನ ಮಗಳು ಪೋಸ್ಟ್ ಡಾಕ್ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಭೇಟಿ ನೀಡಿದ್ದಾಗ ರಸ್ತೆಯ ಬದಿಯಲ್ಲಿದ್ದ ಗಾಜಿನ ಬಾಗಿಲಿನ ಕಪಾಟುಗಳಂತೆ ಆವರಣಗಳನ್ನು ಹೊಂದಿದ್ದ ರಚನೆಗಳನ್ನು ಕಂಡು ಅವೇನೆಂದು ಕುತೂಹಲದಿಂದ ವಿಚಾರಿಸಿದಾಗ ಅವು ಪುಸ್ತಕ ವಿನಿಮಯ ಅಥವಾ ವಿಲೇವಾರಿ ಕಿಯೋಸ್ಕ್ ಗಳೆಂದಳು ಮಗಳು. ಯಾರಾದರೂ ತಮ್ಮಲ್ಲಿನ ಪುಸ್ತಕಗಳನ್ನು ಓದಿದನಂತರ ಅವು ತಮಗೆ ಬೇಡವೆನ್ನಿಸಿದಲ್ಲಿ ಅವುಗಳನ್ನು ತಂದು ಅವುಗಳಲ್ಲಿಡುತ್ತಾರೆ. ಯಾರಾದರೂ ಆಸಕ್ತರು ಅಂಥ ಕಿಯೋಸ್ಕ್ ಗಳಲ್ಲಿ ಕಂಡಾಗ ತಮ್ಮ ಆಸಕ್ತಿಯ ಪುಸ್ತಕ ಅಲ್ಲಿದ್ದಲ್ಲಿ ಅವುಗಳನ್ನು ಕೊಂಡೊಯ್ಯಬಹುದು, ಅವರೂ ಸಹ ಅವರಲ್ಲಿನ ಬೇಡವಾದ, ಓದಿದ ಪುಸ್ತಕಗಳನ್ನು ತಂದು ಅಲ್ಲಿಡಬಹುದು. ನಾನು ನೋಡಿದಾಗ ಅಂಥ ಒಂದು ಕಿಯೋಸ್ಕ್ ನಲ್ಲಿ ಹಲವಾರು ಪುಸ್ತಕ, ಪತ್ರಿಕೆಗಳಿದ್ದವು.


       ಮತ್ತೊಮ್ಮೆ ಜರ್ಮನಿಯ ಯೂಲಿಶ್ ನಗರಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಒಂದು ದೊಡ್ಡ ಮರದ ಕೆಳಗೆ ಹಳೆಯ ಟೆಲಿಫೋನ್ ಬೂತಿಗೆ ಬಹು ಬಣ್ಣಗಳನ್ನು ಬಳಿದಿದ್ದರು. ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಒಳಗೆ ಕಪಾಟೊಂದರಲ್ಲಿ ಪುಸ್ತಕಗಳನ್ನು ಜೋಡಿಸಿರುವುದು ಕಾಣಿಸಿತು. ಬಾಗಿಲು ತೆಗೆದು ನೋಡಿದೆ. ಬಹಳಷ್ಟು ಪುಸ್ತಕಗಳಿದ್ದವು. ಅದರ ಗಾಜಿನ ಬಾಗಿಲ ಮೇಲೆ ಜರ್ಮನ್ ಭಾಷೆಯಲ್ಲಿ ಏನೋ ಬರೆದಿತ್ತು. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಮಹಿಳೆ ಸೈಕಲ್ನಲ್ಲಿ ಬಂದು ಪುಸ್ತಕಗಳನ್ನು ತೆಗೆದುಕೊಂಡು ನೋಡಲಾರಂಭಿಸಿದಳು. ಆಕೆಗೆ ಇಂಗ್ಲಿಷ್ ಬರುತ್ತದೆಯೇ ಎಂದು ಕೇಳಿ, ಪುಸ್ತಕಗಳು ಇಲ್ಲಿ ಏಕಿವೆ ಎಂದು ಕೇಳಿದೆ. ಆಕೆ ನಗುತ್ತ, ಇದು ಸಾರ್ವಜನಿಕ ಉಚಿತ ಗ್ರಂಥಾಲಯ. ನಿಮಗೆ ಬೇಕಾದ ಪುಸ್ತಕ ಓದಲು ಕೊಂಡೊಯ್ಯಬಹುದು, ಸಾಧ್ಯವಾದರೆ ವಾಪಸ್ಸು ತಂದಿಡಬೇಕು. ನಿಮ್ಮಲ್ಲಿಯೂ ಪುಸ್ತಕಗಳಿದ್ದಲ್ಲಿ ಇಲ್ಲಿ ಇತರರು ಕೊಂಡೊಯ್ದು ಓದಲೆಂದು ಇಡಬಹುದು ಎಂದಳು. ಜರ್ಮನ್ ಭಾಷೆಯಲ್ಲಿದ್ದ ಸೂಚನೆಯನ್ನು ಫೋಟೊ ತೆಗೆದುಕೊಂಡು ಬಂದು ಗೂಗಲ್ ಬಳಸಿ ಅನುವಾದ ಮಾಡಿದೆ. ಅದರಲ್ಲಿ ಮುಂದಿನAತೆ ಬರೆದಿತ್ತು (ಕನ್ನಡ ಅನುವಾದ ನನ್ನದು):

03: ಜರ್ಮನಿಯ ಯೂಲಿಶ್ ನಗರದಲ್ಲಿನ `ತೆರೆದ ಪುಸ್ತಕ ಕಪಾಟು'

ತೆರೆದ ಪುಸ್ತಕ ಕಪಾಟು

* ನಿಮಗೆ ಬೇಕಾದ ಪುಸ್ತಕ ಆಯ್ಕೆ ಮಾಡಿಕೊಳ್ಳಬಹುದು

* ನೀವದನ್ನು ತೆಗೆದುಕೊಂಡು ಹೋಗಿ ಓದಿದ ನಂತರ ಕಪಾಟಿನಲ್ಲಿಯೇ ವಾಪಸ್ ತಂದಿಡಿ.

* ನಿಮಗೆ ಪುಸ್ತಕ ಬೇಕಾಗಿದ್ದಲ್ಲಿ ಅದನ್ನು ನೀವೇ ಇಟ್ಟುಕೊಳ್ಳಬಹುದು ಮತ್ತು ಮತ್ತೊಂದು ಪುಸ್ತಕವನ್ನು ಇಲ್ಲಿ ತಂದಿಡಬಹುದು.

* ನಿಮಗೆ ಪುಸ್ತಕ ಬೇಕೇ ಬೇಕೆನ್ನಿಸಿದಲ್ಲಿ ಖಂಡಿತಾ ಅದನ್ನು ನೀವೇ ಇಟ್ಟುಕೊಳ್ಳಬಹುದು, ಆದರೆ ಪುಸ್ತಕ ನಿಜವಾಗಿಯೂ ಅಷ್ಟು ಒಳ್ಳೆಯದಾದಲ್ಲಿ, ಅದನ್ನು ಇತರರೂ ಓದಬೇಕಲ್ಲವೆ?

* ನಿಮ್ಮ ಮನೆಯಲ್ಲಿ ಬಹಳಷ್ಟು ಪುಸ್ತಕಗಳು ಇದ್ದಲ್ಲಿ ಹಾಗೂ ಅವುಗಳನ್ನು ನೀವು ಇಲ್ಲಿ ಇತರರಿಗೂ ತಂದು ಇರಿಸಬೇಕು ಅನ್ನಿಸಿದಲ್ಲಿ, ದಯವಿಟ್ಟು ಇಲ್ಲಿ ಕಪಾಟಿನಲ್ಲಿ ಹಿಡಿಸುವಷ್ಟು ಪುಸ್ತಕಗಳನ್ನು ಮಾತ್ರ ತನ್ನಿ.

* ಕಪಾಟು ಈಗಾಗಲೇ ಭರ್ತಿಯಾಗಿದ್ದಲ್ಲಿ ಹೆಚ್ಚಿನ ಪುಸ್ತಕಗಳನ್ನು ಇಲ್ಲಿಡಬೇಡಿ!

* ನೆಲದ ಮೇಲಂತೂ ಇಡಲೇಬೇಡಿ.

* ಇಲ್ಲಿ ಏನಾದರೂ ಮುರಿದುಹೋಗಿದ್ದರೆ, ಕಪಾಟು ತುಂಬಿದ್ದಲ್ಲಿ ಅಥವಾ ಖಾಲಿಯಿದ್ದಲ್ಲಿ ನೀವು ಅದನ್ನು ಶುಚಿಗೊಳಿಸಲು ಅಥವಾ ಇತರ ಸಹಾಯ ಮಾಡಲು ಬಯಸಿದಲ್ಲಿ ನೀವು ನಮಗೆ ಕರೆಮಾಡಬಹುದು.

       ಕೊನೆಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಹಾಗೂ ದೂರವಾಣಿ ಸಂಖ್ಯೆ ನೀಡಲಾಗಿತ್ತು. ಮತ್ತೊಂದು ಚೀಟಿಯಲ್ಲಿ ರೀತಿಯ `ತೆರೆದ ಪುಸ್ತಕ ಕಪಾಟು'ಗಳು ನಗರದಲ್ಲಿ ಎಲ್ಲೆಲ್ಲಿ ಇವೆ ಎಂಬುದರ ವಿಳಾಸ ನೀಡಲಾಗಿತ್ತು.

       ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಂಟ ಬಾರ್ಬರಾ ನಗರದಲ್ಲಿ ಒಂದೂವರೆ ತಿಂಗಳ ಸಮಯ ಕಳೆದೆ. ಅಲ್ಲಿ ಒಂದು ದಿನ ಸಂಜೆ ವಾಕ್ ಹೋಗುತ್ತಿದ್ದಾಗ ಮನೆಯೊಂದರ ಮುಂದೆ ಒಂದು ಕಪಾಟು ಇಟ್ಟಿದ್ದರು ಹಾಗೂ ಅದರಲ್ಲಿ ಪುಸ್ತಕಗಳು ಹಾಗೂ ಇನ್ನಿತರ ವಸ್ತುಗಳಿದ್ದವು. ಎಂದಿನAತೆ ಕುತೂಹಲದಿಂದ ಹತ್ತಿರಹೋಗಿ ನೋಡಿದೆ. ಅದರ ಮೇಲೆ ಒಂದು ಚೀಟಿ ಅಂಟಿಸಿದ್ದರು: `If you like it, take it' ಎಂದು ಅದರಲ್ಲಿ ಬರೆದಿತ್ತು. ಮನೆಯವರಿಗೆ ಬೇಡವಾದ ಪುಸ್ತಕಗಳನ್ನು ಹಾಗೂ ಇತರ ವಸ್ತುಗಳನ್ನು ಬೇಕಾದವರು ತೆಗೆದುಕೊಂಡು ಹೋಗಲಿ ಎಂದು ಮನೆಯ ಮುಂದೆ ರಸ್ತೆಯ ಬದಿಯಲ್ಲಿ ಇರಿಸಿದ್ದರು.

      

04: ಸ್ಯಾಂಟ ಬಾರ್ಬರ ನಗರದಲ್ಲಿನ ಮನೆಯ ಮುಂದೆ ಇರಿಸಿರುವ ಕಪಾಟು- `If you like it, take it'

ಅದೇ ನಗರದ ಮತ್ತೊಂದು ರಸ್ತೆಯಲ್ಲಿ ರಸ್ತೆಯ ಬದಿ ಒಂದುಮರದ ಕಂಬದ ಮೇಲೆ ಜೇನುಪೆಟ್ಟಿಗೆಯಂತ ಪೆಟ್ಟಿಗೆ ಕಾಣಿಸಿತು. ಅದರೊಳಗೂ ಪುಸ್ತಕಗಳಿದ್ದವು. ಅದರ ಮೇಲೆ `ಲಿಟ್ಲ್ ಫ್ರೀ ಲೈಬ್ರರಿ' ಎಂದು ಬರೆದಿತ್ತು. ಇದೂ ಸಹ ಅದೇ ರೀತಿಯ ಪುಸ್ತಕ ದಾಸೋಹದ ವಿಧಾನವೇ ಎಂದುಕೊAಡು ಲಿಟ್ಲ್ ಫ್ರೀ ಲೈಬ್ರರಿಯ ಹಿನ್ನೆಲೆ ತಿಳಿದುಕೊಳ್ಳೋಣವೆಂದು ಅದರ ವೆಬ್ ತಾಣ ಹುಡುಕಿದೆ. ವೆಬ್ತಾಣದಲ್ಲಿ ಅವರ ಪರಿಚಯವನ್ನು ಜಗತ್ತಿನ ಬಹು ಎಲ್ಲ ಭಾಷೆಗಳಲ್ಲಿಯೂ ಓದಲು ಸಾಧ್ಯವಿದ್ದು ಅದು ಕನ್ನಡದಲ್ಲಿ ನೀಡಿದ ಮಾಹಿತಿ ಮುಂದಿನAತಿದೆ:

05: ಸ್ಯಾಂಟ ಬಾರ್ಬರ ನಗರದಲ್ಲಿನ `ಲಿಟ್ಲ್ ಫ್ರೀ ಲೈಬ್ರರಿ' ಪುಸ್ತಕಗಳ ಪೆಟ್ಟಿಗೆ.

"ನಮ್ಮ ಮಿಷನ್ ಮತ್ತು ವಿಷನ್

ಲಿಟಲ್ ಫ್ರೀ ಲೈಬ್ರರಿ ಎಂಬುದು ಮಿನ್ನೇಸೋಟದ ಸೇಂಟ್ ಪಾಲ್ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ. ಸಮುದಾಯವನ್ನು ನಿರ್ಮಿಸಲು, ಓದುಗರನ್ನು ಪ್ರೇರೇಪಿಸಲು ಮತ್ತು ಸ್ವಯಂಸೇವಕ-ನೇತೃತ್ವದ ಲಿಟಲ್ ಫ್ರೀ ಲೈಬ್ರರಿ ಪುಸ್ತಕ-ವಿನಿಮಯ ಪೆಟ್ಟಿಗೆಗಳ ಜಾಗತಿಕ ನೆಟ್ವರ್ಕ್ ಮೂಲಕ ಎಲ್ಲರಿಗೂ ಪುಸ್ತಕ ಪ್ರವೇಶವನ್ನು ವಿಸ್ತರಿಸಲು ವೇಗವರ್ಧಕವಾಗುವುದು ನಮ್ಮ ಉದ್ದೇಶವಾಗಿದೆ. ನಮ್ಮ ದೃಷ್ಟಿ ಪ್ರತಿ ಸಮುದಾಯದಲ್ಲಿ ಸ್ವಲ್ಪ ಉಚಿತ ಗ್ರಂಥಾಲಯ ಮತ್ತು ಪ್ರತಿ ಓದುಗರಿಗೆ ಪುಸ್ತಕ. ಓದಲು ವೈಯಕ್ತಿಕವಾಗಿ ಸಂಬAಧಿತ ಪುಸ್ತಕವನ್ನು ಅನ್ವೇಷಿಸುವ ಅವಕಾಶವು ಸಮಯ, ಸ್ಥಳ ಅಥವಾ ಸವಲತ್ತುಗಳಿಂದ ಸೀಮಿತವಾಗಿಲ್ಲದಿದ್ದಾಗ ಎಲ್ಲಾ ಜನರು ಸಬಲರಾಗುತ್ತಾರೆ ಎಂದು ನಾವು ನಂಬುತ್ತೇವೆ."

       ಹೌದು ಇದಂತೂ ನಿಜ, ಸವಲತ್ತು ಮತ್ತು ಸೌಲಭ್ಯವಿಲ್ಲದ ಜನರನ್ನು ಪುಸ್ತಕಗಳು ತಲುಪಿದಾಗ ಖಂಡಿತಾ ಅವರು ಸಬಲರಾಗುತ್ತಾರೆ. ಇಂದು ಡಿಜಿಟಲ್ ಯುಗದಲ್ಲಿ ಕಿಂಡಲ್, ಐಪ್ಯಾಡ್, ಟ್ಯಾಬ್ಲೆಟ್ಗಳ -ಪುಸ್ತಕಗಳ (ಎಲೆಕ್ಟಾçನಿಕ್ ಪುಸ್ತಕಗಳು) ಜಗತ್ತಿನಲ್ಲಿ ಪುಸ್ತಕ ವಿತರಣೆ ಹೊಸದೇ ರೂಪ ಪಡೆದಿದೆ. ಇಂದು -ಪುಸ್ತಕಗಳನ್ನು ಆನ್ಲೈನ್ನಲ್ಲಿ ಖರೀದಿಸುವ, ಎರವಲು ನೀಡುವುದು ಸಾಮಾನ್ಯವಾಗಿದೆ. ಜಗತ್ತಿನಲ್ಲಿ ಯಾವ ಮೂಲೆಯಲ್ಲಿದ್ದರೂ ಇಂಟರ್ನೆಟ್ ಇದ್ದಲ್ಲಿ -ಪುಸ್ತಕಗಳನ್ನು ಪಡೆಯುವುದು ಬಹಳ ಸುಲಭ. ಆದರೆ ಲಿಟ್ಲ್ ಫ್ರೀ ಲೈಬ್ರರಿಯವರು ಹೇಳಿರುವಂತೆ ಮುದ್ರಿತ ಪುಸ್ತಕಗಳಿಗೆ ಉಚಿತ ಗ್ರಂಥಾಲಯ, ಪುಸ್ತಕಗಳನ್ನು ಅನ್ವೇಷಿಸುವ ಅವಕಾಶ, ಸಮಯ, ಸ್ಥಳ ಹಾಗೂ ಸವಲತ್ತುಗಳಿಂದ ವಂಚಿತರಾಗಿರುವವರೇ ಇಂದು ಜಗತ್ತಿನಲ್ಲಿ ಹೆಚ್ಚಿರುವುದರಿಂದ ಮುದ್ರಿತ ಪುಸ್ತಕಗಳ ರೀತಿಯೇ -ಪುಸ್ತಕಗಳು ಸಹ ದೊರೆಯುವುದು ಸುಲಭವಲ್ಲ.

       ಮುದ್ರಿತ ಪುಸ್ತಕಗಳು ಇಂದಲ್ಲ ನಾಳೆ ಇಲ್ಲವಾಗುತ್ತವೆ ( ಕುರಿತು ನಾನೇ `ಪುಸ್ತಕಗಳಿಗೆ ಅಳಿವುಂಟು' ಎಂಬ ಲೇಖನವನ್ನು ಬರೆದಿದ್ದೇನೆ - `ಸುಧಾ', 24/10/2013) ಏಕೆಂದರೆ ಕಾಗದದ ಪುಸ್ತಕ ಮುದ್ರಣ ಮತ್ತು ಮಾರಾಟ ಆರ್ಥಿಕವಾಗಿ ಮತ್ತು ಪರಿಸರದ ದೃಷ್ಟಿಯಿಂದ ಲಾಭದಾಯಕವಾಗಿರುವುದಿಲ್ಲ. ಅಷ್ಟಲ್ಲದೆ ಅಕ್ಷರ ಮುಂದೆ ಮತ್ತಾವ ರೂಪದಲ್ಲಿ ಬರುತ್ತದೋ ಯಾರಿಗೆ ಗೊತ್ತು? ಒಂದAತೂ ನಿಜ, ಏನೇ ಆದರೂ ಪುಸ್ತಕಕ್ಕೆ ಅಳಿವಿದ್ದರೂ ಅಕ್ಷರಕ್ಕೆ ಅಳಿವಿರುವುದಿಲ್ಲ. ಆದರೆ ಜನರು ಸಬಲರಾಗಬೇಕಾದಲ್ಲಿ ಅವು ಸುಲಭವಾಗಿ ಎಲ್ಲರಿಗೂ ತಲುಪಬೇಕಾಗಿರುವುದು ಅಷ್ಟೇ ಮುಖ್ಯ.

06: ಲಾಸ್ ಏಂಜೆಲೀಸ್ ನಗರದ ಲಾಸ್ಟ್ ಬುಕ್ ಸ್ಟೋರ್ನಲ್ಲಿ ಲೇಖಕರು.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಪುಸ್ತಕ ಪ್ರೇಮಿಗಳಿಗೆ ಮಾತ್ರ ಗೊತ್ತಾಗುವಂತಹ ಮತ್ತು ಪುಸ್ತಕಗಳ ಬಗೆಗಿನ ಅವರ ಭಾವನೆಗಳನ್ನು ತೆರೆದಿಡುವಂತಹ ಉತ್ತಮ ಲೇಖನ. ಬಹಳಷ್ಟು ಮನೆಗಳಲ್ಲಿ ಪುಸ್ತಕಗಳನ್ನು ಇಷ್ಟಪಡುವಂತಹವರು ಒಬ್ಬರು ಇಬ್ಬರು ಇದ್ದರೆ ಆ ಪುಸ್ತಕ ಸಂಗ್ರಹ ಬೇರೆಯವರಿಗೆ ಒಂದು ಕಿರಿಕಿರಿ ಇದ್ದಂತೆ. ಇಡೀ ಮನೆಯವರೆಲ್ಲ ಪುಸ್ತಕ ಪ್ರೇಮಿಗಳಾಗಿ ಇರುವುದು ಬಹಳ ಅಪರೂಪ. ಪುಸ್ತಕಗಳ ಮೌಲ್ಯವನ್ನು ಸರಿಯಾಗಿ ಅರಿತವನಿಗೆ ಗಾಂಧೀಜಿಯವರು ಹೇಳಿದಂತೆ ಯಾರು ಇರದ ಕಡೆ ಅತ್ಯುತ್ತಮ ಸ್ನೇಹಿತ. ಅದು ಕೂಡ ಸದಾ ಕಾಲದ ಸ್ನೇಹಿತನಾಗಿ ಇರಬಲ್ಲ. ಅದಕ್ಕೆ ಹೇಳುವುದು ಪುಸ್ತಕ ಪ್ರಪಂಚವೇ ಬೇರೆ. ಪುಸ್ತಕಗಳೇ ಒಂದು ದೊಡ್ಡ ಪ್ರಪಂಚವು ಕೂಡ.

ಅನಾಮಧೇಯ ಹೇಳಿದರು...

ಎಂತಾ ಚಂದದ ವಿಚಾರವಿದು. ನನ್ನಿಗಳು ನಿಮಗೆ. ನಾವೂ ಇಂತಹ ಕೆಲವು ಪ್ರಯೋಗಗಳ ಬಗ್ಗೆ ಯೋಚಿಸಬಹುದು ಅನಿಸಿದೆ.

ಚಲಪತಿ