`ಸಂವಾದ' ಪತ್ರಿಕೆಯ ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ
ನಸ್ರುದ್ದೀನ್ ಕತೆಗಳ 18ನೇ ಕಂತು.
ಒಟ್ಟು
ಒಂಭತ್ತು ತಿಂಗಳು
ನಸ್ರುದ್ದೀನ್
ಮದುವೆಯಾದ ಮೂರು ತಿಂಗಳಿಗೇ ಆತನ
ಹೆಂಡತಿ ಮಗುವೊಂದಕ್ಕೆ ಜನ್ಮ ನೀಡಿದಳು. ಅವನಿಗೆ
ಅಚ್ಚರಿಯಾಯಿತು.
‘ನೋಡು,
ಈ ವಿಷಯದಲ್ಲಿ ನಾನೊಬ್ಬ
ತಜ್ಞನಲ್ಲ,’ ಹೇಳಿದ ನಸ್ರುದ್ದೀನ್ ತನ್ನ
ಪತ್ನಿಗೆ, ‘ನನ್ನ ಮಾತನ್ನು ತಪ್ಪಾಗಿಯೂ
ತಿಳಿಯಬೇಡ. ಸಾಮಾನ್ಯವಾಗಿ ಮಗು ಹೆರಲು ಒಂಭತ್ತು
ತಿಂಗಳು ಬೇಕಲ್ಲವೆ?’
‘ನೀವು
ಗಂಡಸರೆಲ್ಲಾ ಒಂದೇ ರೀತಿ’, ಹೇಳಿದಳು ಅವನ ಪತ್ನಿ,
‘ಹೆಂಗಸರ ವಿಷಯ ನಿಮಗೆ ಏನೂ
ತಿಳಿದಿರುವುದಿಲ್ಲ. ಈಗ ಹೇಳು, ನೀನು
ನನ್ನನ್ನು ಮದುವೆಯಾಗಿ ಎಷ್ಟು ತಿಂಗಳಾದವು?’
‘ಮೂರು
ತಿಂಗಳು,’ ಹೇಳಿದ ನಸ್ರುದ್ದೀನ್.
‘ನಾನು
ನಿನ್ನನ್ನು ಮದುವೆಯಾಗಿ ಎಷ್ಟು ತಿಂಗಳಾದವು?’
‘ಮೂರು
ತಿಂಗಳು,’ ಹೇಳಿದ ನಸ್ರುದ್ದೀನ್.
‘ನಾನು
ಬಸುರಾಗಿ ಎಷ್ಟು ತಿಂಗಳಾಯಿತು?’
‘ಮೂರು
ತಿಂಗಳು,’ ಹೇಳಿದ ನಸ್ರುದ್ದೀನ್.
‘ಎಲ್ಲವೂ
ಸೇರಿ ಒಟ್ಟು ಒಂಭತ್ತು ತಿಂಗಳಾಯಿತಲ್ಲವೆ?’
ಕೇಳಿದಳು ನಸ್ರುದ್ದೀನನ ಪತ್ನಿ.
ಬೇಟೆ
ಒಂದು
ದಿನ ನಸ್ರುದ್ದೀನ್ ತನ್ನ ಹೊಲದಲ್ಲಿ ಉಳುತ್ತಿದ್ದ.
ಒಬ್ಬ ಬೇಟೆಗಾರ ತನ್ನ ಕುದುರೆಯ
ಮೇಲೆ ಅತ್ತ ವೇಗವಾಗಿ ಬಂದ.
‘ಯಾವುದಾದರೂ ಕಾಡು
ಹಂದಿ ಓಡಿಹೋಗಿದ್ದು ನೋಡಿದೆಯಾ?’ ಎಂದು ಬೇಟೆಗಾರ ನಸ್ರುದ್ದೀನ್ನನ್ನು ಕೇಳಿದ.
‘ಹೌದು’ ಎಂದ ನಸ್ರುದ್ದೀನ್.
‘ಯಾವ ದಿಕ್ಕಿನಲ್ಲಿ
ಹೋಯಿತು?’ ಎಂದ ಬೇಟೆಗಾರ.
ಹಂದಿ
ಹೋಗಿದ್ದ ದಿಕ್ಕಿಗೆ ಬೆರಳು ಮಾಡಿ ತೋರಿಸಿದ
ನಸ್ರುದ್ದೀನ್.
ಧನ್ಯವಾದಗಳನ್ನೂ
ಹೇಳದೆ ಆ ಬೇಟೆಗಾರ ಆ
ದಿಕ್ಕಿಗೆ ಹೋಗಿ ಬರಿಗೈಲಿ ಹಿಂದಿರುಗಿದ.
ಅದು
ಎಲ್ಲಿಯೂ ಕಾಣಲಿಲ್ಲ. ಅದು ಹೋಗಿದ್ದನ್ನು ನೀನು
ನಿಜವಾಗಿಯೂ ನೋಡಿದೆ ತಾನೆ?’ ಆತ
ಮುಲ್ಲಾನನ್ನು ಮತ್ತೊಮ್ಮೆ ಕೇಳಿದ.
ಹೌದು,
ನಾನು ಕಣ್ಣಾರೆ ಕಂಡಿದ್ದೇನೆ. ಎರಡು
ವರ್ಷಗಳ ಹಿಂದೆ ಇದೇ ದಿಕ್ಕಿನಲ್ಲಿ
ಓಡಿತ್ತು’
ಎಂದ ನಸ್ರುದ್ದೀನ್ ತನ್ನ ಉಳುಮೆಯ ಕಾಯಕ
ಮುಂದುವರಿಸುತ್ತ.
ಅತ್ಯದ್ಭುತ
ಕತ್ತೆ
ಮುಲ್ಲಾ
ನಸ್ರುದ್ದೀನ್ ಒಂದು ದಿನ ಸಂತೆಗೆ
ಹೋಗಿ ಅಲ್ಲಿ ಕತ್ತೆಯೊಂದನ್ನು ೩೦
ದಿನಾರ್ಗಳಿಗೆ ಕೊಂಡುಕೊಂಡ. ಆನಂತರ
ಸಂತೆಯ ಮಧ್ಯ ಭಾಗಕ್ಕೆ ಹೋಗಿ
ಅಲ್ಲಿ ಅದನ್ನು ಹರಾಜಿಗೆ ಇಟ್ಟ.
ಜನರಿಗೆಲ್ಲಾ ಕೇಳಿಸುವಂತೆ,
`ಈ
ಕತ್ತೆ ನೋಡಿ! ಅತ್ಯದ್ಬುತ ಕತ್ತೆ!
ಲಕ್ಷಕ್ಕೊಂದು ಇಂಥ ಕತ್ತೆ ಸಿಕ್ಕುವುದಿಲ್ಲ.
ಅತ್ಯಂತ ಶಕ್ತಿಶಾಲಿ ಕತ್ತೆ!’ ಎಂದು ಕೂಗತೊಡಗಿದ.
ಜನರೆಲ್ಲಾ ಕುತೂಹಲದಿಂದ ಬಂದು ನೋಡಿ ಅದು
ಮಹಾನ್ ಕತ್ತೆಯೇ ಇರಬೇಕು ಎಂದುಕೊಂಡರು.
ಯಾರೋ ೪೦ ದಿನಾರ್ಗಳಿಗೆ
ಹರಾಜು ಕೂಗಿದರೆ ಮತ್ತೊಬ್ಬ ೪೫
ದಿನಾರ್ ಎಂದ, ಮಗದೊಬ್ಬ ೫೦
ದಿನಾರ್ಗೆ ಹರಾಜು ಕೂಗಿದ.
ಕತ್ತೆಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ
ಇದನ್ನೆಲ್ಲಾ ನೋಡುತ್ತಿದ್ದ ಹಾಗೂ ತನ್ನ ಬಳಿ
ಇದ್ದ ಕತ್ತೆ ನಿಜವಾಗಿಯೂ ಅತ್ಯದ್ಭುತದ್ದೇ
ಇರಬೇಕು ಎಂದುಕೊಂಡ. ಅಂತಹ ಕತ್ತೆಯನ್ನು ಮಾರಾಟ
ಮಾಡಿದ್ದಕ್ಕಾಗಿ ಆತನಿಗೆ ಬೇಸರವಾಗಿ ತಾನೆಂತ
ದಡ್ಡ ಎಂದು ತನ್ನನ್ನು ತಾನೇ
ಶಪಿಸಿಕೊಂಡ. ಅಷ್ಟರಲ್ಲಿ ಯಾರೋ ೭೫ ದಿನಾರ್ಗೆ ಕತ್ತೆಯನ್ನು ಹರಾಜಿಗೆ
ಕೂಗಿದ್ದರು.
‘೭೫ ದಿನಾರ್
ಒಂದು ಸಾರಿ... ೭೫ ದಿನಾರ್
ಎರಡು ಸಾರಿ...’ ಎಂದು ಕೂಗುತ್ತಿದ್ದ ನಸ್ರುದ್ದೀನ್.
ಈ
ಅವಕಾಶ ಬಿಟ್ಟರೆ ಅಂತಹ ಅದ್ಭುತ
ಕತ್ತೆ ಪುನಃ ದೊರೆಯುವುದಿಲ್ಲ ಎಂದುಕೊಂಡ
ಕತ್ತೆಯನ್ನು ಮಾರಾಟ ಮಾಡಿದ ವ್ಯಕ್ತಿ
‘೮೦ ದಿನಾರ್’ ಎಂದು ಕೂಗಿ ತನ್ನ ಕತ್ತೆಯನ್ನು
ತಾನೇ ಕೊಂಡು ಮನೆಗೆ ಹೊರಟ.
ಹೆಂಡತಿ
ಕಂಡರೆ ಹೆದರಿಕೆಯೆ?
ಮುಲ್ಲಾ
ನಸ್ರುದ್ದೀನನ ಹೆಂಡತಿ ತವರು ಮನೆಗೆ
ಹೋಗಿದ್ದಳು. ಮುಲ್ಲಾ ಅಡಿಗೆ ಮಾಡಿಕೊಳ್ಳಲು
ಒಲೆಗೆ ಸೌದೆ ಇರಿಸಿ ಊದುಗೊಳವೆಯಿಂದ
ಊದುತ್ತಿದ್ದ. ಅದೆಷ್ಟು ಊದಿದರೂ ಬೆಂಕಿ
ಉರಿಯುತ್ತಲೇ ಇರಲಿಲ್ಲ. ಒಂದು ಸಾರಿ ಜೋರಾಗಿ
ಊದಿದ, ಒಲೆಯ ಬೂದಿಯೆಲ್ಲಾ ಮೇಲಕ್ಕೆದ್ದು
ಕಣ್ಣಿಗೆ ಹೊಡೆಯಿತು. ಅಲ್ಲೇ ಪಕ್ಕದಲ್ಲೇ ಇದ್ದ
ತನ್ನ ಹೆಂಡತಿಯ ಸೀರೆಯನ್ನು ಮುಖಕ್ಕೆ
ಸುತ್ತಿಕೊಂಡು ಮತ್ತೊಮ್ಮೆ ಊದಿದ. ಬೆಂಕಿ ಧಗ್ಗನೆ
ಉರಿಯಿತು.
`ಆಹಾ!
ನನಗೆ ಗೊತ್ತಾಯಿತು! ನನ್ನ ಹೆಂಡತಿಯನ್ನು ಕಂಡರೆ
ನಿನಗೂ ಹೆದರಿಕೆ ಇದೆ’ ಎಂದ ಒಲೆಯನ್ನು ಕುರಿತು.
ದೇವರ
ಕೃಪೆಯಿಲ್ಲದೆ
ನಸ್ರುದ್ದೀನನಿಗೆ
ಅವನ ಹೆಂಡತಿ ಒಂದು ಅಂಗಿಯ
ಬಟ್ಟೆಯನ್ನು ಅವನ ಹುಟ್ಟುಹಬ್ಬಕ್ಕೆ ಕೊಡುಗೆಯಾಗಿ
ನೀಡಿದಳು. ಅಂಗಿ ಹೊಲಿಸಿಕೊಳ್ಳಲು ದರ್ಜಿಯ
ಬಳಿ ಹೋದ. ಅಳತೆ ತೆಗೆದುಕೊಂಡ
ದರ್ಜಿ,
‘ದೇವರ ಕೃಪೆಯಿದ್ದರೆ,
ಒಂದು ವಾರದಲ್ಲಿ ಹೊಲಿದುಕೊಡುತ್ತೇನೆ’ ಎಂದ.
ನಸ್ರುದ್ದೀನನಿಗೆ
ಒಂದು ವಾರ ಕಳೆಯುವುದು ಅತ್ಯಂತ
ಕಷ್ಟದ ಕೆಲಸ ಎನ್ನಿಸಿತು. ಎಂಟನೇ
ದಿನ ಬೆಳಿಗ್ಗೆಯೇ ದರ್ಜಿಯ ಅಂಗಡಿ ಮುಂದೆ
ಹಾಜರಾದ. ಅವನ ಅಂಗಿ ಇನ್ನೂ
ಸಿದ್ಧವಾಗಿಲ್ಲವೆಂದು ತಿಳಿದು ಅವನಿಗೆ ತೀರಾ
ಬೇಸರವಾಯಿತು.
‘ದೇವರ ಕೃಪೆಯಿದ್ದರೆ,
ನಾಡಿದ್ದು ಹೊಲಿದು ಕೊಟ್ಟುಬಿಡುತ್ತೇನೆ’ ಎಂದ ದರ್ಜಿ.
ಎರಡು
ದಿನಗಳ ನಂತರ ದರ್ಜಿ ಅದೇ
ಕತೆ ಹೇಳಿದ. ‘ದೇವರ ಕೃಪೆಯಿದ್ದರೆ,
ಶನಿವಾರ ಕೊಡುತ್ತೇನೆ’ ಎಂದ.
ಶನಿವಾರವೂ
ದರ್ಜಿ ಏನೋ ಒಂದು ನೆಪ
ಹೇಳಿ, ‘ದೇವರ ಕೃಪೆಯಿದ್ದರೆ...’ ಎಂದು
ಮಾತು ಶುರುಮಾಡಿದ.
‘ನಿಲ್ಲಿಸು, ನಿಲ್ಲಿಸು.
ದೇವರ ಕೃಪೆ ಇಲ್ಲದೆ ಎಷ್ಟು
ದಿನದಲ್ಲಿ ಹೊಲಿದುಕೊಡುತ್ತೀಯ? ಬೇಗ ಹೇಳು’ ಎಂದ ಅಸಹನೆಯಿಂದ.
ಸೂಚನೆ
ನಸ್ರುದ್ದೀನ್
ಹಣ್ಣು ಹಣ್ಣು ಮುದುಕನಾಗಿ ಸಾವಿನ
ನಿರೀಕ್ಷೆಯಲ್ಲಿದ್ದ. ಒಂದು ದಿನ ತನ್ನ
ಪತ್ನಿಗೆ, ‘ನೋಡು ನಾನು ಸತ್ತಮೇಲೆ
ನನ್ನ ಸಮಾಧಿಗೆ ತಲೆಗಲ್ಲು ಇಡಬೇಡ’ ಎಂದ.
‘ಏಕೆ?’
ಕೇಳಿದಳು ಪತ್ನಿ.
‘ನಾನು
ಮೇಲೆ ಸ್ವರ್ಗಕ್ಕೇರುವಾಗ ಕಲ್ಲಿಗೆ ನನ್ನ ತಲೆ
ತಗಲಬಹುದು. ಅದಕ್ಕೆ’ ಎಂದ ಮುದುಕ ನಸ್ರುದ್ದೀನ್.
ಸಾವಿನ
ದೂತ
ನಸ್ರುದ್ದೀನನಿಗೆ
ಇಳಿ ವಯಸ್ಸಾಗಿ ಸಾವಿನ ಹಾದಿ ಕಾಯುತ್ತಿದ್ದ.
ಇನ್ನೇನು ಪ್ರಾಣ ಬಿಡುತ್ತಾನೆ ಎಂದು
ತಿಳಿದಿದ್ದ ಪತ್ನಿ ಕಪ್ಪು ಬಟ್ಟೆ
ಧರಿಸಿ ಬೇಸರದಿಂದಿದ್ದಳು. ಅದನ್ನು ನೋಡಿದ ನಸ್ರುದ್ದೀನ್,
‘ಅದೇನು
ಅಂತಹ ಬಟ್ಟೆ ಧರಿಸಿ ಬೇಸರದಿಂದಿದ್ದೀಯಾ?
ಒಳ್ಳೆ ಬಟ್ಟೆ ಧರಿಸಿ, ಅಲಂಕಾರ
ಮಾಡಿಕೊಂಡು ಸಂತೋಷವಾಗಿರು’ ಎಂದ ನಸ್ರುದ್ದೀನ್ ಮಲಗಿದ್ದ
ಹಾಸಿಗೆಯಿಂದಲೆ.
‘ಅದೇನು
ನಸ್ರುದ್ದೀನ್! ಆ ರೀತಿ ಮಾತನಾಡುತ್ತಿದ್ದೀಯಾ?
ನೀನು ಈ ಸ್ಥಿತಿಯಲ್ಲಿರುವಾಗ ನಾನು
ಹೇಗೆ ಆ ರೀತಿ ಇರಲಿ?’
ಎಂದಳು ಪತ್ನಿ.
‘ಇಲ್ಲ
ನನಗೇನೋ ಆಸೆ. ಇನ್ನೇನು ಸಾವಿನ
ದೂತ ಬರುತ್ತಾನೆ. ಅವನು ಬಂದಾಗ ಚೆನ್ನಾಗಿರುವ
ನಿನ್ನನ್ನು ನೋಡಿ ನನ್ನನ್ನು ಬಿಟ್ಟು
ನಿನ್ನನ್ನೇನಾದರೂ ಕೊಂಡೊಯ್ಯಬಹುದೇನೋ’ ಎಂದು ಹೇಳಿ ನಕ್ಕು ಪ್ರಾಣ
ಬಿಟ್ಟ.
ದಾಸ್ತಾನಿಲ್ಲ
ನಸ್ರುದ್ದೀನ್
ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ. ಅಕ್ಕಿ
ಕೊಳ್ಳಲು ಬಂದಾತ,
‘ಅಕ್ಕಿ
ಸೇರಿಗೆ ಎಷ್ಟು?’ ಎಂದು ಕೇಳಿದ.
ಏನೋ
ಲೆಕ್ಕ ಹಾಕುತ್ತಿದ್ದ ನಸ್ರುದ್ದೀನ್ ‘ಸೇರಿಗೆ ನೂರು ರೂಪಾಯಿ’ ಎಂದ.
ಬೆಲೆ
ಕೇಳಿ ಹೌಹಾರಿದ ಗಿರಾಕಿ,
‘ಏನಯ್ಯಾ
ಆ ರೀತಿ ಬೆಲೆ
ಹೇಳುತ್ತೀಯಾ? ನಿನ್ನಲ್ಲೇನು ಮಾನ ಮರ್ಯಾದೆ ಇಲ್ಲವೆ?’
ಎಂದು ಸಿಟ್ಟಿನಿಂದ ಕೇಳಿದ.
‘ಇಲ್ಲ
ಅವುಗಳ ದಾಸ್ತಾನು ಮುಗಿದುಹೋಗಿದೆ. ಮುಂದಿನ ವಾರ ಬನ್ನಿ’ ಎಂದ ನಸ್ರುದ್ದೀನ್ ತನ್ನ ಲೆಕ್ಕ ಮುಂದುವರಿಸುತ್ತಾ.
ಇಲಿಯ
ಔಷಧ
ನಸ್ರುದ್ದೀನನಿಗೆ
ತುರ್ತಾಗಿ ಹಣ ಬೇಕಾಗಿತ್ತು. ಅದಕ್ಕೊಂದು
ವಿಚಾರ ಹೊಳೆಯಿತು. ಸಣ್ಣ ಚೀಲಗಳಲ್ಲಿ ಮರಳನ್ನು
ತುಂಬಿ, ಅದನ್ನು ಬಳಸುವ ವಿಧಾನವನ್ನು
ಸಣ್ಣ ಅಕ್ಷರಗಳಲ್ಲಿ ಬರೆದು ಅದನ್ನು ಇಲಿಯ
ಔಷಧವೆಂದು ಮಾರಾಟಮಾಡಿದ. ಮರುದಿನವೇ ಜನ ಅವನ ಬಳಿಗೆ
ಆ ಚೀಲಗಳನ್ನು ಹಿಂದಿರುಗಿಸಲು
ಬಂದು,
‘ಈ
ಮರಳಿನಂಥ ಔಷಧದಿಂದ ಒಂದು ಇಲಿಯೂ
ಸಾಯಲಿಲ್ಲ. ಹಣ ಹಿಂದಿರುಗಿಸು’ ಎಂದು ಗಲಾಟೆ ಮಾಡಿದರು.
‘ಇಲ್ಲ...
ಇಲ್ಲ ಖಂಡಿತಾ ಇಲಿ ಸಾಯುತ್ತದೆ.
ಬಹುಶಃ ನೀವೆಲ್ಲಾ ಅದನ್ನು ಇಲಿ ಓಡಾಡುವ
ಕಡೆ ಚೆಲ್ಲಿ ಅದನ್ನು ಇಲಿ
ತಿಂದು ಸಾಯುತ್ತದೆ ಎಂದು ಭಾವಿಸಿರಬೇಕಲ್ಲವೆ?’ ಎಂದು
ಕೇಳಿದ.
ಆ
ಔಷಧ ಕೊಂಡಿದ್ದ ಜನ ಎಲ್ಲರೂ ‘ಹೌದು
ನಾವು ಹಾಗೇ ಮಾಡಿದೆವು. ಆದರೆ
ಒಂದೂ ಇಲಿಯೂ ಅದನ್ನು ತಿಂದಿಲ್ಲ
ಹಾಗೂ ಸತ್ತಿಲ್ಲ’ ಎಂದರು.
‘ನೀವು
ತಪ್ಪುಮಾಡಿದಿರಿ. ಔಷಧದ ಜೊತೆ ಸಣ್ಣಕ್ಷರದಲ್ಲಿ
ಬರೆದಿದ್ದ ಸೂಚನೆಗಳನ್ನು ನೀವು ಓದಲಿಲ್ಲವೆ? ನೀವು
ಆ ಚೀಲದಿಂದ ಇಲಿಯ
ತಲೆಯ ಮೇಲೆ ಹೊಡೆದು ಅದರ
ಬಾಯಿಗೆ ಚೀಲದಲ್ಲಿರುವ ಮರಳಿನಂತಹ ಔಷಧ ತುಂಬಬೇಕು. ಆಗ
ಖಂಡಿತಾ ಇಲಿ ಸಾಯುತ್ತದೆ’ ಎಂದು ಹೇಳಿ ನಸ್ರುದ್ದೀನ್
ಅಲ್ಲಿಂದ ದೂರ ನಡೆದ.
1 ಕಾಮೆಂಟ್:
ತುಂಬಾ ಚೆನ್ನಾಗಿದೆ ಸರ್..
ಕಾಮೆಂಟ್ ಪೋಸ್ಟ್ ಮಾಡಿ