Monday, December 11, 2017

ವ್ಯಂಗ್ಯಚಿತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
ಡಿಸೆಂಬರ್ 2017ರ `ಸಂವಾದ'ದಲ್ಲಿ ಪ್ರಕಟವಾದ ನನ್ನ ಲೇಖನ


ಇತ್ತೀಚೆಗೆ ತಮಿಳುನಾಡಿನ ಜಿ.ಬಾಲಕೃಷ್ಣನ್ (ಬಾಲ) ಎಂಬ ವ್ಯಂಗ್ಯಚಿತ್ರಕಾರನನ್ನು ತಿರುನೆಲ್ವೇಲಿಯ ಕಲೆಕ್ಟರ್ ಸಂದೀಪ್ ನಂದೂರಿಯ ದೂರಿನ ಮೇರೆಗೆ ಪೆÇೀಲೀಸರು ಅರೆಸ್ಟು ಮಾಡಿದರು. ಕಲೆಕ್ಟರರು ಬಾಲ ಬರೆದಿರುವ ವ್ಯಂಗ್ಯಚಿತ್ರವೊಂದುಅಪಮಾನ ಮಾಡುವಂಥದು, ಅವಹೇಳನ ಮಾಡುವಂಥದು ಹಾಗೂ ದುರುದ್ದೇಶ ಹೊಂದಿರುವಂಥದುಎಂದು ದೂರು ನೀಡಿದ್ದರು.  
 
1. ವಿವಾದಕ್ಕೆಡೆಮಾಡಿದ ಬಾಲಾರವರ ವ್ಯಂಗ್ಯಚಿತ್ರ
 
ವ್ಯಂಗ್ಯಚಿತ್ರಕಾರನ ಮೇಲೆ ಪೆÇೀಲೀಸರು ಭಾರತೀಯ ದಂಡ ಸಂಹಿತೆಯ ಕಲಂ 501ರಡಿ ಮಾನನಷ್ಟಕ್ಕಾಗಿ ಹಾಗೂ .ಟಿ. ಕಾಯ್ದೆಯ ಕಲಂ 67ರಡಿ ಅಶ್ಲೀಲ ಚಿತ್ರವೆಂದು ಮೊಕದ್ದಮೆ ದಾಖಲಿಸಿಕೊಂಡರು (ಈಗ ವ್ಯಂಗ್ಯಚಿತ್ರಕಾರ ಬಾಲರವರಿಗೆ ನ್ಯಾಯಾಲಯ ಜಾಮೀನು ನೀಡಿದೆ). ಬಾಲಾರವರ ವ್ಯಂಗ್ಯಚಿತ್ರದಲ್ಲಿ ಬೆಂಕಿಯಲ್ಲಿ ಸುಡುತ್ತಿರುವ ಮಗುವೊಂದರ ದೇಹದ ಮುಂದೆ ತಮಿಳುನಾಡಿನ ಮುಖ್ಯಮಂತ್ರಿ, ತಿರುನೆಲ್ವೇಲಿಯ ಕಲೆಕ್ಟರ್ ಹಾಗೂ ನೆಲ್ಲೈನ ಪೆÇೀಲೀಸ್ ಕಮೀಶನರ್ಗಳು ಬೆತ್ತಲೆಯಾಗಿದ್ದು ಅವರು ತಮ್ಮ ಜನನಾಂಗಗಳನ್ನು ನೋಟಿನ ಕಂತೆಗಳಲ್ಲಿ ಮುಚ್ಚಿಟ್ಟುಕೊಳ್ಳುತ್ತಿರುವುದನ್ನು ಚಿತ್ರಿಸಲಾಗಿತ್ತು. ಬಾಲಾರವರ ವ್ಯಂಗ್ಯಚಿತ್ರಕ್ಕೆ ಕಾರಣವೇನೆಂದರೆ, ಕೆಲದಿನಗಳ ಹಿಂದೆ ಅಲ್ಲಿನ ಇಸಕಿ ಮುತ್ತು ಎಂಬಾತ ವ್ಯಾಪಾರಕ್ಕೆಂದು ಲೇವಾದೇವಿಗಾರರಿಂದ ಒಂದೂವರೆ ಲಕ್ಷ ಸಾಲ ಪಡೆದು ಅವರ ವಿಪರೀತದ ಬಡ್ಡಿ ಹಣ ಕಟ್ಟಲಾಗದೆ ಅವರ ಹಿಂಸೆ ತಾಳಲಾಗದೆ ಸರ್ಕಾರದ ಮೊರೆ ಹೊಕ್ಕಿದ್ದರೂ ಪರಿಹಾರ ಸಿಗದಿದ್ದಾಗ ತನ್ನ ಹೆಂಡತಿ ಮಕ್ಕಳೊಂದಿಗೆ ತಾನೂ ಸಹ ಕಲೆಕ್ಟರರ ಕಚೇರಿಯ ಆವರಣದಲ್ಲೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ರೀತಿಯ ವಿಪರೀತ ಬಡ್ಡಿ ವಿಧಿಸುವ ಲೇವಾದೇವಿದಾರರಿಂದ ರಕ್ಷಣೆ ಪಡೆಯಲು ತಮಿಳುನಾಡಿನ ಕಾನೂನಿನಲ್ಲಿ ಅವಕಾಶವಿದ್ದರೂ ಅಲ್ಲಿನ ಸರ್ಕಾರದ ಅಸಡ್ಡೆ, ನಿರ್ಲಕ್ಷ್ಯತೆಯನ್ನು ಎತ್ತಿತೋರಿಸಲು ಬಾಲಾ ವ್ಯಂಗ್ಯಚಿತ್ರ ರಚಿಸಿದ್ದರು.
     ಬಾಲಾರನ್ನು ಅರೆಸ್ಟು ಮಾಡಿದ ಕೂಡಲೇ ದೇಶದಲ್ಲೆಲ್ಲಾ ಪ್ರತಿಭಟನೆಗಳಾದವು. ಪ್ರತಿಭಟಿಸುವ ವ್ಯಂಗ್ಯಚಿತ್ರಕಾರರು ಪ್ರತಿಭಟನೆಯ ಅಸ್ತ್ರವಾಗಿ ಮತ್ತಷ್ಟು ವ್ಯಂಗ್ಯಚಿತ್ರಗಳನ್ನು ರಚಿಸಿದರು. ಕೇರಳದಲ್ಲಿ ಅಂತಹ ಪ್ರತಿಭಟನೆಯ ವ್ಯಂಗ್ಯಚಿತ್ರಗಳ ಪ್ರದರ್ಶನವೂ ನಡೆಯಿತು
 
 2. ಅಮಾಯಕರ ಸಾವಿಗೆ ಕಾರಣವಾದ ಧನದಾಹಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಸರ್ಕಾರ, `ಸಮಾಜ ವಿರೋಧಿ, ಅಪರಾಧಿ ವ್ಯಂಗ್ಯಚಿತ್ರಕಾರ' ಎನ್ನುತ್ತಾ ವ್ಯಂಗ್ಯಚಿತ್ರಕಾರರ ಬೆನ್ನು ಹಿಂದೆ ಬಿದ್ದಿರುವುದನ್ನು ಸತೀಶ್ ಆಚಾರ್ಯರವರ ವ್ಯಂಗ್ಯಚಿತ್ರ ತೋರಿಸುತ್ತದೆ.ಅಮಾಯಕರ ಸಾವಿಗೆ ಕಾರಣವಾದ ಧನದಾಹಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಸರ್ಕಾರ `ಸಮಾಜ ವಿರೋಧಿ, ಅಪರಾಧಿ ವ್ಯಂಗ್ಯಚಿತ್ರಕಾರ' ಎನ್ನುತ್ತಾ ವ್ಯಂಗ್ಯಚಿತ್ರಕಾರರ ಬೆನ್ನು ಹಿಂದೆ ಬಿದ್ದಿರುವುದನ್ನು ಸತೀಶ್ ಆಚಾರ್ಯರವರ ವ್ಯಂಗ್ಯಚಿತ್ರ ತೋರಿಸುತ್ತದೆ. ರಾಜಕಾರಣಿ ಹಾಗೂ ಸರ್ಕಾರದ ಅಧಿಕಾರಿಗಳನ್ನು ನಗ್ನವಾಗಿ ವ್ಯಂಗ್ಯಚಿತ್ರಗಳಲ್ಲಿ ನಗ್ನವಾಗಿ ತೋರಿಸಬಾರದೇಕೆ ಎನ್ನುವ ಕುರಿತಂತೆ ಚರ್ಚೆಗಳೂ ನಡೆದವು
 3. 1989ರಲ್ಲಿ `ಆಂಧ್ರಭೂಮಿತೆಲುಗು ಪತ್ರಿಕೆಯಲ್ಲಿ ಸುರೇಂದ್ರರವರು ರಚಿಸಿದ ಮುಖ್ಯಮಂತ್ರಿ ಎನ್.ಟಿ.ಆರ್.ರವರ `ಶ್ರೀ ಕೃಷ್ಣ ವಸ್ತ್ರಾಪಹರಣಂವ್ಯಂಗ್ಯಚಿತ್ರ

ಈಗ ` ಹಿಂದೂಪತ್ರಿಕೆಯ ವ್ಯಂಗ್ಯಚಿತ್ರಕಾರ ಸುರೇಂದ್ರರವರು ಕೂಡಲೆ ಫೇಸ್ಬುಕ್ನಲ್ಲಿ ತಾನು 1989ರಲ್ಲಿ ತೆಲುಗು ಪತ್ರಿಕೆ `ಆಂಧ್ರಭೂಮಿಯಲ್ಲಿ ಆಗಿನ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ಆರ್.ರವರ `ಶ್ರೀ ಕೃಷ್ಣ ವಸ್ತ್ರಾಪಹರಣಂಎಂಬ ವ್ಯಂಗ್ಯಚಿತ್ರ ರಚಿಸಿ ಪ್ರಕಟಿಸಿದ್ದು ಅದರಲ್ಲಿ ಎನ್.ಟಿ.ಆರ್.ರವರನ್ನು ನಗ್ನವಾಗಿ ಚಿತ್ರಿಸಲಾಗಿದ್ದರೂ, ಎಲ್ಲರೂ ಎನ್.ಟಿ.ಆರ್.ರವರನ್ನು ಸರ್ವಾಧಿಕಾರಿ ಎಂದು ಕರೆಯುತ್ತಿದ್ದರೂ ಸಹ ಅವರು ತನ್ನನ್ನು ಜೈಲಿಗೆ ಹಾಕಿರಲಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ ಹೈದರಾಬಾದ್ ಪ್ರೆಸ್ ಕ್ಲಬ್ನಲ್ಲಿ ನಡೆದ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಭೇಟಿ ನೀಡಿದ್ದ ಎನ್.ಟಿ.ಆರ್.ರವರನ್ನು ಪತ್ರಕರ್ತರು ಅವರ ಮೆಚ್ಚಿನ ವ್ಯಂಗ್ಯಚಿತ್ರ ಯಾವುದೆಂದು ಕೇಳಿದಾಗ ಅವರು ನಸುನಗುತ್ತಾ ಸುರೇಂದ್ರರವರ `ಶ್ರೀ ಕೃಷ್ಣ ವಸ್ತ್ರಾಪಹರಣಂ  ವ್ಯಂಗ್ಯಚಿತ್ರ ತೋರಿಸಿದರಂತೆ!
 
  4. ರಾಷ್ಟ್ರಪತಿಗಳನ್ನು ಅವರು ಪ್ರತಿನಿಧಿಸುವ ಸಂಸ್ಥೆಗಳಿಗೆ ಅಪಮಾನವಾಗುವಂತಹ ವ್ಯಂಗ್ಯಚಿತ್ರ ರಚಿಸಬಾರದೆಂಬ ಅಲಿಖಿತ ಸಂಪ್ರದಾಯವಿದ್ದರೂ ತುರ್ತುಪರಿಸ್ಥಿತಿಯ ಸಮಯದಲ್ಲಿ ರಾಷ್ಟ್ರಪತಿಗಳಾದ ಫಕ್ರುದ್ದೀನ್ ಆಲಿ ಅಹ್ಮದ್ರವರು ಸ್ನಾನ ಮಾಡುತ್ತಿರುವಾಗಲೇ ಹಲವಾರು ಸುಗ್ರೀವಾಜ್ಞೆಗಳಿಗೆ ಸಹಿ `ಇನ್ನೂ ಸಹಿ ಮಾಡಬೇಕಾದ ಸುಗ್ರೀವಾಜ್ಞೆಗಳಿದ್ದಲ್ಲಿ, ಅವರಿಗೆ ಸ್ವಲ್ಪ ಕಾಯಲು ಹೇಳಿಎನ್ನುತ್ತಿರುವ ಅಬು ಅಬ್ರಹಾಂರವರ ವ್ಯಂಗ್ಯಚಿತ್ರ

ವ್ಯಂಗ್ಯಚಿತ್ರಕಾರ ಅಜಿತ್ ನಿನಾನ್ ಸಂದರ್ಶನವೊಂದರಲ್ಲಿ ಹೇಳಿರುವಂತೆ, ರಾಷ್ಟ್ರಪತಿಗಳನ್ನು ಹಾಗೂ ನ್ಯಾಯಾಧೀಶರನ್ನು ಅವರು ಪ್ರತಿನಿಧಿಸುವ ಸಂಸ್ಥೆಗಳಿಗೆ ಅಪಮಾನವಾಗುವಂತೆ ಯಾವುದೇ ವ್ಯಂಗ್ಯಚಿತ್ರ ರಚಿಸಬಾರದೆಂಬ ಅಲಿಖಿತ ಸಂಪ್ರದಾಯ ವ್ಯಂಗ್ಯಚಿತ್ರಕಾರರಲ್ಲಿದೆ. ಹಾಗಿದ್ದರೂ ಶ್ರೀಮತಿ ಇಂದಿರಾ ಗಾಂಧಿಯ ಆಡಳಿತದ ತುರ್ತುಪರಿಸ್ಥಿತಿಯ ಸಮಯದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂರವರ ಆಗಿನ ರಾಷ್ಟ್ರಪತಿಗಳಾದ ಫಕ್ರುದ್ದೀನ್ ಆಲಿ ಅಹ್ಮದ್ರವರು ಬೆತ್ತಲೆಯಾಗಿ ಸ್ನಾನ ಮಾಡುತ್ತಿರುವಾಗಲೇ ಹಲವಾರು ಸುಗ್ರೀವಾಜ್ಞೆಗಳಿಗೆ ಸಹಿ ಮಾಡಿ ಬಾಗಿಲ ಸಂದಿನಿಂದ ಚಾಚಿರುವ ಕೈಗೆ ಪತ್ರಗಳು ಹಾಗೂ ಪೆನ್ನನ್ನು ಹಿಂದಿರುಗಿಸುತ್ತಾ, `ಇನ್ನೂ ಸಹಿ ಮಾಡಬೇಕಾದ ಸುಗ್ರೀವಾಜ್ಞೆಗಳಿದ್ದಲ್ಲಿ, ಅವರಿಗೆ ಸ್ವಲ್ಪ ಕಾಯಲು ಹೇಳಿಎನ್ನುತ್ತಿರುವ ವ್ಯಂಗ್ಯಚಿತ್ರ `ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಪ್ರಕಟವಾಗಿತ್ತು. ಸಮಯದಲ್ಲಿ ಅಬು ಸಂಸದರೂ ಆಗಿದ್ದುದರಿಂದ ಹಾಗೂ ಅವರಿಗೆ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳೂ ಸಹ ಪರಿಚಯವಿದ್ದುದರಿಂದ ಹಲವಾರು ಜನ ಅಬೂರವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರೂ ಹಾಗೂ ಮಾಧ್ಯಮ ಸೆನ್ಸಾರ್ ಅವಧಿಯಲ್ಲಿ ಉತ್ತುಂಗದಲ್ಲಿದ್ದರೂ ಸಹ ಅಬೂ ಅಬ್ರಹಾಂರವರಿಗೆ ಏನೂ ಆಗಲಿಲ್ಲ. ರೀತಿಯ ಅಬೂರವರ ಪ್ರಯತ್ನ ಹಿಂದೆ ಯಾರೂ ಮಾಡಿರಲಿಲ್ಲ.

ತಮಿಳುನಾಡಿನ ಬಾಲಾರವರ ವ್ಯಂಗ್ಯಚಿತ್ರದ ವಿವಾದ ಕುರಿತಂತೆ ಖ್ಯಾತ ವ್ಯಂಗ್ಯಚಿತ್ರಕಾರ ಪೆÇನ್ನಪ್ಪರವರು ತಮ್ಮ ಫೇಸ್ಬುಕ್ ಪೆÇೀಸ್ಟ್ನಲ್ಲಿ, `ದುರಂತದ ಘಟನೆಯೊಂದನ್ನು ವ್ಯಂಗ್ಯಚಿತ್ರದ ವಿಷಯವಾಗಿ ಚಿತ್ರಿಸುವುದು ಅತ್ಯಂತ ಕಷ್ಟದ ಕೆಲಸ. ಅದನ್ನು ಚಿತ್ರಿಸಲೇಬೇಕಾದಲ್ಲಿ ಅದನ್ನು ಅತ್ಯಂತ ಸೂಕ್ಷ್ಮವಾಗಿ (Subtle) ಚಿತ್ರಿಸಬೇಕು. ಆದರೆ ಬಾಲಾರವರ ವ್ಯಂಗ್ಯಚಿತ್ರ ವಿಷಯದಲ್ಲಿ ನೇರವಾಗಿದೆ. ಅದರಲ್ಲಿ ಬಲಿಪಶುವಾಗಿರುವ ಮಗುವನ್ನು ಬೆಂಕಿಯಲ್ಲಿ ಉರಿಯುತ್ತಿರುವಂತೆ ತೋರಿಸಲಾಗಿದೆ. ಅದರ ಎದುರುಗಡೆ ಮೂವರು ಅಧಿಕಾರಿಗಳನ್ನು, ಬೆತ್ತಲೆಯಾಗಿ, ಅವರ ಗುಪ್ತಾಂಗಗಳನ್ನು ನೋಟಿನ ಕಂತೆಗಳಲ್ಲಿ (ಬಹುಶಃ ಹೊಸ ಅಮಾನ್ಯೀಕರಣಗೊಂಡ ನೋಟುಗಳಿರಬಹುದು) ಮುಚ್ಚಿಕೊಂಡಿರುವಂತೆ ತೋರಿಸಲಾಗಿದೆ. ವ್ಯಂಗ್ಯಚಿತ್ರವೊಂದರಲ್ಲಿ ಇದು ಖಂಡಿತಾ ಸಲ್ಲದುಎಂದು ಹೇಳಿದ್ದಾರೆ
 


 5. ಜವಹರಲಾಲ್ ನೆಹರೂ `ನನ್ನನ್ನೂ ಬಿಡಬೇಡಎಂದಿದ್ದರೆ ಈಗಿನ ರಾಜಕಾರಣಿಗಳು ವ್ಯಂಗ್ಯಚಿತ್ರಕಾರರ ಕಡೆಗೆ ಕೈದೋರುತ್ತಾ `ಅವನನ್ನು  ಬಿಡಬೇಡಿ’ (ಡೋಂಟ್ ಸ್ಪೇರ್ ಹಿಮ್) ಎನ್ನುತ್ತಿದ್ದಾರೆ - `ಡೆಕ್ಕನ್ ಕ್ರಾನಿಕಲ್ನಲ್ಲಿ ಪ್ರಕಟವಾದ ಸುಭಾನಿಯವರ ವ್ಯಂಗ್ಯಚಿತ್ರ

ಹಿಂದಿನ ಪ್ರಧಾನಿ ನೆಹರೂರವರು ಆಗಿನ ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ರವರನ್ನು `Don't Spare me Shankar’ (ನನ್ನನ್ನೂ ಬಿಡಬೇಡ ಶಂಕರ್) ಎಂದು ಹೇಳಿರುವುದು ಹಾಗೂ ಶಂಕರ್ರವರು ಬರೆದಿರುವ ನೆಹರೂರವರ ವ್ಯಂಗ್ಯಚಿತ್ರಗಳ ಸಂಕಲನ `Don't Spare me Shankar’ ಹೆಸರಿನಲ್ಲೇ ಪ್ರಕಟವಾಗಿದೆ. ಬಾಲಾರವರನ್ನು ಅರೆಸ್ಟು ಮಾಡಿದಾಗ `ಡೆಕ್ಕನ್ ಕ್ರಾನಿಕಲ್ ಸುಭಾನಿ ಬರೆದ ವ್ಯಂಗ್ಯಚಿತ್ರದಲ್ಲಿ ನೆಹರೂ `ನನ್ನನ್ನೂ ಬಿಡಬೇಡಎಂದಿದ್ದರೆ ಈಗಿನ ರಾಜಕಾರಣಿಗಳು ವ್ಯಂಗ್ಯಚಿತ್ರಕಾರರ ಕಡೆಗೆ ಕೈದೋರುತ್ತಾ `ಅವನನ್ನು  ಬಿಡಬೇಡಿ(Don't Spare him) ಎನ್ನುತ್ತಿದ್ದಾರೆ
 
 6. ` ಹಿಂದೂಪತ್ರಿಕೆಯಲ್ಲಿ ಪ್ರಕಟವಾದ ಸುರೇಂದ್ರರವರ ವ್ಯಂಗ್ಯಚಿತ್ರವೊಂದರಲ್ಲಿ ನೆಹರೂರವರು ವ್ಯಂಗ್ಯಚಿತ್ರಕಾರನನ್ನು ಹಿಡಿದುಕೊಂಡು `ಡೋಂಟ್ ಸ್ಪೇರ್ ಮಿ’ (ನನ್ನನ್ನು ಬಿಡಬೇಡ) ಎನ್ನುತ್ತಿದ್ದರೆ ಪ್ರಧಾನಿ ಮೋದಿಯವರ ಸುತ್ತಲೂ ಕುಟುಕಲು ಹಾರುತ್ತಿರುವ `ಟೀಕೆಗಳ ಜೇನುನೊಣಗಳನ್ನು ಓಡಿಸಲು ಹಣೆಯಲ್ಲಿ ತಿಲಕವಿಟ್ಟವರು, ಸೊಳ್ಳೆ ಬ್ಯಾಟ್, ದೊಣ್ಣೆ ಮತ್ತು ಮುಳ್ಳಿನ ಗದೆ ಹಿಡಿದು ಹಾರಾಡುತ್ತಿರುವುದು ಪ್ರಸ್ತುತ ರಾಜಕೀಯ ಸಂದರ್ಭವನ್ನು ಸ್ಪಷ್ಟವಾಗಿ ತೋರಿಸುತ್ತದೆ

ವ್ಯಂಗ್ಯಚಿತ್ರಕಾರರ ಅಲಿಖಿತ `ನೀತಿ ಸಂಹಿತೆಏನೇ ಇದ್ದರೂ ಇಂದಿನ ಭಾರತದ ರಾಜಕೀಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾಂತಂತ್ರ್ಯವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಸಂಚು ಹಾಗೂ ಅಲಿಖಿತ ಮಾಧ್ಯಮ ಸೆನ್ಸಾರ್ ಕಟ್ಟಳೆ ಜಾರಿಯಲ್ಲಿದೆಯೆಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಹೆಚ್ಚುತ್ತಿರುವ ಅಸಹಿಷ್ಣುತೆಯ ಪ್ರಸ್ತುತ ಸಂದರ್ಭದಲ್ಲಿ ಬಾಲಾರವರ ವ್ಯಂಗ್ಯಚಿತ್ರ ವಿವಾದ ಮತ್ತು ಅವರ ಮೇಲಿನ ಪೆÇೀಲೀಸ್ ಕ್ರಮಗಳು ವಿಶೇಷ ಅರ್ಥ ಪಡೆದುಕೊಳ್ಳುತ್ತವೆ. ಹಿನ್ನೆಲೆಯಲ್ಲಿಯೇ ` ಹಿಂದೂಪತ್ರಿಕೆಯಲ್ಲಿ ಪ್ರಕಟವಾದ ಸುರೇಂದ್ರರವರ ವ್ಯಂಗ್ಯಚಿತ್ರವೊಂದರಲ್ಲಿ ನೆಹರೂರವರು ವ್ಯಂಗ್ಯಚಿತ್ರಕಾರನನ್ನು ಹಿಡಿದುಕೊಂಡು ``Don't Spare me’ (ನನ್ನನ್ನು ಬಿಡಬೇಡ) ಎನ್ನುತ್ತಿದ್ದರೆ ಪ್ರಧಾನಿ ಮೋದಿಯವರ ಸುತ್ತಲೂ ಕುಟುಕಲು ಹಾರುತ್ತಿರುವ `ಟೀಕೆಗಳ ಜೇನುನೊಣಗಳನ್ನು ಓಡಿಸಲು ಹಣೆಯಲ್ಲಿ ತಿಲಕವಿಟ್ಟವರು, ಸೊಳ್ಳೆ ಬ್ಯಾಟ್, ದೊಣ್ಣೆ ಮತ್ತು ಮುಳ್ಳಿನ ಗದೆ ಹಿಡಿದು ಹಾರಾಡುತ್ತಿರುವುದು ಪ್ರಸ್ತುತ ರಾಜಕೀಯ ಸಂದರ್ಭವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ವ್ಯಂಗ್ಯಚಿತ್ರಕಾರರು ವಿವಾದಕ್ಕೊಳಗಾಗಿರುವುದು ಇದೇ ಮೊದಲಲ್ಲ. ಸಂಪಾದಕೀಯ ಅಥವಾ ರಾಜಕೀಯ ವ್ಯಂಗ್ಯಚಿತ್ರಗಳು ಪ್ರಕಟವಾಗಲು ಪ್ರಾರಂಭವಾದಾಗಿನಿಂದ ರಾಜಕಾರಣಿ ಮತ್ತು ಅಧಿಕಾರದಲ್ಲಿರುವವರ  ಹಾಗೂ ವ್ಯಂಗ್ಯಚಿತ್ರಕಾರರ ನಡುವಿನ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಏಕೆಂದರೆ ಒಂದು ಚಿತ್ರ ಸಾವಿರ ಪದಗಳಿಗೆ ಸಮವೆಂಬ ಚೀನೀ ಗಾದೆಯಂತೆ ಓದುಗರಿಗೆ/ನೋಡುಗರಿಗೆ ತಲುಪಿಸಬೇಕಾದ ಸಂದೇಶವನ್ನು ವ್ಯಂಗ್ಯಚಿತ್ರಗಳು ಕ್ಷಿಪ್ರವಾಗಿ ತಲುಪಿಸಿಬಿಡುತ್ತವೆ. ಅಷ್ಟಲ್ಲದೆ ವ್ಯಂಗ್ಯಚಿತ್ರಕಾರರು ನಿಷ್ಠುರವಾಗಿ ಇದ್ದುದನ್ನು ಇದ್ದಹಾಗೆ ಸುತ್ತುಬಳಸಿ ಹೇಳದೆ ನೇರವಾಗಿ ಇರುವುದನ್ನು ವಿಡಂಬನೆಯಿಂದ, ಲೇವಡಿ ಮಾಡುತ್ತಾ ಹೇಳಬಲ್ಲವರು.
 
 7. ಅಮೆರಿಕದ `ಹಾರ್ಪರ್ಸ್ ವೀಕ್ಲಿಯಲ್ಲಿ 1871ರಲ್ಲಿ ಪ್ರಕಟವಾದ ಥಾಮಸ್ ನ್ಯಾಸ್ಟ್ರವರ `ಹೂ ಸ್ಟೋಲ್ ಪೀಪಲ್ಸ್ ಮನಿ?’ (ಜನರ ಹಣ ಕದ್ದವರು ಯಾರು?) ಎಂಬ ವ್ಯಂಗ್ಯಚಿತ್ರ ಅಮೆರಿಕದ ರಾಜಕೀಯ ವ್ಯಂಗ್ಯಚಿತ್ರಗಳಲ್ಲೇ ಅತ್ಯಂತ ಪ್ರಸಿದ್ಧವಾದುದು ಹಾಗೂ ಇದುವರೆಗೆ ಅತ್ಯಂತ ಹೆಚ್ಚು ಮರುಮುದ್ರಿತ ವ್ಯಂಗ್ಯಚಿತ್ರವಾಗಿದೆ

19ನೇ ಶತಮಾನದಲ್ಲಿ ಅಮೆರಿಕದ ವ್ಯಂಗ್ಯಚಿತ್ರಕಾರ ಥಾಮಸ್ ನ್ಯಾಸ್ಟ್ ಅಲ್ಲಿನ ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದ. 1871 `ಹಾರ್ಪರ್ಸ್ ವೀಕ್ಲಿಯಲ್ಲಿ ಪ್ರಕಟವಾದ `ಹೂ ಸ್ಟೋಲ್ ಪೀಪಲ್ಸ್ ಮನಿ?’ (ಜನರ ಹಣ ಕದ್ದವರು ಯಾರು?) ಎಂಬ ವ್ಯಂಗ್ಯಚಿತ್ರ ಅಮೆರಿಕದ ರಾಜಕೀಯ ವ್ಯಂಗ್ಯಚಿತ್ರಗಳಲ್ಲೇ ಅತ್ಯಂತ ಪ್ರಸಿದ್ಧವಾದುದು. ಅದು ಇದುವರೆಗೆ ಅತ್ಯಂತ ಹೆಚ್ಚು ಮರುಮುದ್ರಿತ ವ್ಯಂಗ್ಯಚಿತ್ರವಾಗಿದೆ. ನ್ಯೂಯಾರ್ಕ್ ನಗರದ ಡೆಮಾಕ್ರಟಿಕ್ ರಾಜಕೀಯ ಪಕ್ಷದ ಟಮ್ಮಾನಿ ಹಾಲ್ ಸದಸ್ಯರ ಬೃಹತ್ ಭ್ರಷ್ಟಾಚಾರವನ್ನು ಜುಲೈ 1871ರಲ್ಲಿ `ನ್ಯೂ ಯಾರ್ಕ್ ಟೈಮ್ಸ್ಬಯಲಿಗೆಳೆದಿತ್ತು. ಅದರ ನಾಯಕ ವಿಲಿಯಂ ಟ್ವೀಡ್ ಎಂಬಾತ. ಸಮಯದಲ್ಲೇ ಭ್ರಷ್ಟಾಚಾರದ ಮೊತ್ತ ಸುಮಾರು 6 ಮಿಲಿಯನ್ ಡಾಲರ್ಗಳಷ್ಟಿತ್ತು. ವ್ಯಂಗ್ಯಚಿತ್ರಕಾರ ನ್ಯಾಸ್ಟ್ ಟ್ವೀಡ್ನನ್ನು ತನ್ನ ವ್ಯಂಗ್ಯಚಿತ್ರಗಳ ಮೂಲಕ ಕಾಡತೊಡಗಿದ. ಒಮ್ಮೆ ಟ್ವೀಡ್, `ನೀವು ವೃತ್ತಪತ್ರಿಕೆಯವರು ಏನಾದರೂ ಬರೆದುಕೊಳ್ಳಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ನನ್ನ ಕ್ಷೇತ್ರದ ಜನರಿಗೆ ಓದಲು ಬರುವುದಿಲ್ಲ. ಆದರೆ ಹಾಳಾದ ಚಿತ್ರಗಳನ್ನು ಅವರೆಲ್ಲಾ ನೋಡುತ್ತಾರಲ್ಲಾ!’ ಎಂದು ನ್ಯಾಸ್ಟ್ನನ್ನು ಶಪಿಸಿದನಂತೆ. ನ್ಯಾಸ್ಟ್ನಿಗೆ ಯೂರೋಪ್ ಉಚಿತ ಪ್ರವಾಸದ ಆಮಿಷ ತೋರಿ ವ್ಯಂಗ್ಯಚಿತ್ರ ಬರೆಯದಿರುವಂತೆ ಮಾಡಲು ಪ್ರಯತ್ನಿಸಿದರು, ಆದರೆ ನ್ಯಾಸ್ಟ್ ಅಂತಹ ಆಮಿಷಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ. ಥಾಮಸ್ ನ್ಯಾಸ್ಟ್ ವ್ಯಂಗ್ಯಚಿತ್ರಗಳ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಆಗ ಎರಡು ದಶಕಗಳ ಕಾಲ ಅಮೆರಿಕಾದ ಅಧ್ಯಕ್ಷರ ಚುನಾವಣೆಯಲ್ಲಿ ಜನಸಾಮಾನ್ಯರ ಆಯ್ಕೆಯ ಮೇಲೂ ವ್ಯಂಗ್ಯಚಿತ್ರಗಳು ಪ್ರಭಾವ ಬೀರುತ್ತಿದ್ದವಂತೆ

ಮಲೇಷಿಯಾದ ವ್ಯಂಗ್ಯಚಿತ್ರಕಾರ ಜುಲ್ಫಿಕ್ಲೀ ಅನ್ವರ್ ಹಖ್ ಎಲ್ಲರಿಗೂ ಜುನಾರ್ ಎಂದೇ ಚಿರಪರಿಚಿತರು. ಮಲೇಷಿಯಾದ ಪ್ರಧಾನ ಮಂತ್ರಿಗಳ ಭ್ರಷ್ಟಾಚಾರವನ್ನು ನಿರ್ದಾಕ್ಷಿಣ್ಯವಾಗಿ ವ್ಯಂಗ್ಯಚಿತ್ರಗಳ ಮೂಲಕ ಬಯಲಿಗೆಳೆಯುತ್ತಿದ್ದಾರೆ. ಮಲೇಷಿಯಾದ ಸರ್ಕಾರ ಭಾರತ ಸರ್ಕಾರದಂತೆ ಅವರ ಮೇಲೂ ದೇಶದ್ರೋಹದ ಆರೋಪ ಹೊರಿಸಿ ಹಲವಾರು ಕೇಸುಗಳನ್ನು ಹೂಡಿದೆ. ಜುನಾರ್ `ರಾಜಕೀಯ ವ್ಯಂಗ್ಯಚಿತ್ರಕಾರನ ಕೆಲಸ ಸರ್ಕಾರವನ್ನು ಟೀಕಿಸುವುದು ಮತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಸರ್ಕಾರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದನ್ನು ಎತ್ತಿತೋರಿಸುವುದಾಗಿದೆ. ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದಲ್ಲಿ ಅದಕ್ಕೇಕೆ ಹೆದರಿಕೆ ಇರಬೇಕು? ನನ್ನ ವ್ಯಂಗ್ಯಚಿತ್ರ ಕಲೆ ಒಂದು ಕೊಡುಗೆಯಲ್ಲ, ಅದು ಒಂದು ಹೊಣೆಗಾರಿಕೆ. ನಾನು ಹೇಗೆ ತಟಸ್ಥವಾಗಿರಲಿ? ನನ್ನ ಪೆನ್ನಿಗೂ ಒಂದು ನಿಲುವಿದೆ. ನನ್ನ ಶಾಯಿಯ ಕೊನೆಯ ಹನಿ ಇರುವರೆಗೂ ನಾನು (ವ್ಯಂಗ್ಯಚಿತ್ರ) ಬರೆಯುತ್ತಲೇ ಇರುತ್ತೇನೆ (How can I be neutral? Even my pen has a stand! I will continue to draw till the last drop of my ink)' ಎನ್ನುತ್ತಾರೆ.
 8. `ನರಕಕ್ಕಿಳ್ಸಿ, ನಾಲಿಗೆ ಸೀಳ್ಸಿ, ಕೈಕಾಲ್ ಕಟ್ಟಿಹಾಕಿದ್ರೂನೇ ಹಲ್ಲಲ್ಲಿ ವ್ಯಂಗ್ಯಚಿತ್ರ ಬರೆಯುತ್ತೇನೆ' ಎನ್ನುವಂತಿದೆ ಮಲೇಷಿಯಾದ ಜುನಾರ್ರವರ ವ್ಯಂಗ್ಯಚಿತ್ರ. `ನಾನೇಕೆ ತಟಸ್ಥವಾಗಿರಲಿ? ನನ್ನ ಪೆನ್ನಿಗೂ ಒಂದು ನಿಲುವಿದೆ. ನನ್ನ ಶಾಯಿಯ ಕೊನೆಯ ಹನಿ ಇರುವರೆಗೂ ನಾನು ವ್ಯಂಗ್ಯಚಿತ್ರ ಬರೆಯುತ್ತಲೇ ಇರುತ್ತೇನೆ ಎನ್ನುತ್ತಾರೆ ಜುನಾರ್.`ನರಕಕ್ಕಿಳ್ಸಿ, ನಾಲಿಗೆ ಸೀಳ್ಸಿ, ಬಾಯ್ ಹೊಲ್ಸಾಕಿದ್ರೂನೇ ಮೂಗ್ನಲ್ಲಿ ಕನ್ನಡ ಪದ್ವಾಡ್ತೀನಿ' ಎನ್ನುವ ರತ್ನನ ಪದಕ್ಕೆ ಸೂಕ್ತವಾಗಿ ಹೊಂದುವ ಹಾಗಿದೆ ಜುನಾರ್ರವರ ವ್ಯಂಗ್ಯಚಿತ್ರ. ಅವರನ್ನು ದೇಶದ್ರೋಹದ ಆಪಾದನೆ, ದಂಡ ಸಂಹಿತೆ, ಪ್ರೆಸ್ ಅಧಿನಿಯಮ ಇತ್ಯಾದಿಗಳ ಸಂಕೋಲೆಗಳಿಂದ ಅವರ ಕೈ, ಕುತ್ತಿಗೆ, ಕಾಲುಗಳನ್ನು ಕಟ್ಟಿಹಾಕಿದ್ದರೂ ಹಲ್ಲಿನಲ್ಲಿ ಕುಂಚ ಕಚ್ಚಿಹಿಡಿದು ವ್ಯಂಗ್ಯಚಿತ್ರ ರಚಿಸುತ್ತಿದ್ದಾರೆ. ಇತ್ತ ತಮಿಳುನಾಡಿನ ಬಾಲ ಸಹ `ನನಗೇನೂ ಹೆದರಿಕೆಯಿಲ್ಲ, ನಾನು ವ್ಯಂಗ್ಯಚಿತ್ರ ಬರೆಯುವುದನ್ನು ಮುಂದುವರಿಸುತ್ತೇನೆ' ಎನ್ನುವ ಮತ್ತೊಂದು ವ್ಯಂಗ್ಯಚಿತ್ರವನ್ನು ತಮ್ಮ ಬಂಧನ-ಜಾಮೀನಿನ ನಂತರ ರಚಿಸಿದ್ದಾರೆ.

ಇಂದಿನ ರಾಜಕಾರಣಿಗಳು ಮತ್ತು ಅಧಿಕಾರದಲ್ಲಿರುವವರು ಏಕೆ ತಮ್ಮನ್ನು ಲೇವಡಿ ಮಾಡುವಂತಹ ವ್ಯಂಗ್ಯಚಿತ್ರಗಳನ್ನು ಇಷ್ಟಪಡುವುದಿಲ್ಲ? ಮಹಾತ್ಮ ಗಾಂಧಿ, ಅಂಬೇಡ್ಕರ್, ಪ್ರಧಾನಿ ನೆಹರೂ ಮುಂತಾದವರು ಹಾಗೂ ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರಾಗಲಿ ಎಂದೂ ವ್ಯಂಗ್ಯಚಿತ್ರಕಾರರನ್ನು ದೂಷಿಸಿದ್ದಿಲ್ಲ. ಒಮ್ಮೆ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ರವರನ್ನು ವ್ಯಂಗ್ಯಚಿತ್ರ ಪ್ರದರ್ಶನವೊಂದರಲ್ಲಿ, ವ್ಯಂಗ್ಯಚಿತ್ರಕಾರರು `ತಮ್ಮನ್ನು ಲೇವಡಿ ಮಾಡಿದಾಗ ತಮಗೇನೂ ಅನ್ನಿಸುವುದಿಲ್ಲವೆ?' ಎಂದು ಕೇಳಿದಾಗ, `ಇಲ್ಲ. ನಾನು ಅವುಗಳನ್ನು ನೋಡಿ ಮುಗುಳ್ನಗುತ್ತೇನೆ. ಜನ ನಿಮ್ಮನ್ನು ಹೇಗೆ ನೋಡುತ್ತಾರೆ ಎನ್ನುವ ತಿಳುವಳಿಕೆಯೂ ಅದರಿಂದ ನಿಮಗೆ ದೊರೆಯುತ್ತದೆ. ಅಷ್ಟಲ್ಲದೆ ವ್ಯಂಗ್ಯಚಿತ್ರಗಾರಿಕೆ ಒಂದು ಕಲೆ, ಕಲೆಯ ಬಗ್ಗೆ ಹೇಗೆ ಕೆಟ್ಟ ಭಾವನೆ ಹೊಂದುವುದು?' ಎಂದು ಹೇಳಿದರಂತೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಕುರಿತಂತೆ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಹಲವಾರು ವ್ಯಂಗ್ಯಚಿತ್ರಗಳನ್ನು ರಚಿಸಿ ಪ್ರಕಟಿಸಿದರು. ಇಂದಿರಾ ಗಾಂಧಿ ಅವರನ್ನು ಅರೆಸ್ಟು ಮಾಡಲಿಲ್ಲ, ಬದಲಿಗೆ ಅವರನ್ನು ರಾಜ್ಯಸಭೆಯ ಸಂಸದರನ್ನಾಗಿ ಮಾಡಿದರು.

ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಆಗಿನ ವಿದೇಶ ವ್ಯವಹಾರಗಳ ಸಚಿವರಾಗಿದ್ದ ಜಸ್ವಂತ್ ಸಿಂಗ್ರವರು ತಾಲಿಬಾನ್ರವರ ಬೇಡಿಕೆಯಂತೆ ಭಯೋತ್ಪಾದಕರನ್ನು ಬಿಡುಗಡೆ ಮಾಡಿದಾಗ ವ್ಯಂಗ್ಯಚಿತ್ರಕಾರ ಸುಧೀರ್ ತೈಲಾಂಗ್ರವರು ಜಸ್ವಂತ್ ಸಿಂಗ್ರವರನ್ನು ತಾಲಿಬಾನ್ ಭಯೋತ್ಪಾದಕರ ಧಿರಿಸಿನಲ್ಲಿರುವಂತೆ ವ್ಯಂಗ್ಯಚಿತ್ರ ರಚಿಸಿದ್ದರು. ಅದು ಪ್ರಕಟವಾದ ದಿನವೇ ಜಸ್ವಂತ್ ಸಿಂಗ್ರವರು ತೈಲಾಂಗ್ರವರಿಗೆ ಕರೆಮಾಡಿ ವ್ಯಂಗ್ಯಚಿತ್ರದ ಮೂಲ ಪ್ರತಿ ತಮಗೆ ಕೊಡುವಂತೆ ಕೇಳಿಕೊಂಡರು. `ನಿಮಗೆ ಅದೇಕೆ ಬೇಕು? ನಾನು ಅದರಲ್ಲಿ ನಿಮ್ಮನ್ನು ಭಯೋತ್ಪಾದಕನ ಹಾಗೆ ಚಿತ್ರಿಸಿದ್ದೀನಲ್ಲವೆ?' ಎಂದು ತೈಲಾಂಗ್ ಕೇಳಿದ್ದಕ್ಕೆ, `ಇರಬಹುದು, ಆದರೆ ಅದರಲ್ಲಿ ನಾನು ಮುದ್ದಾಗಿ ಕಾಣುತ್ತಿದ್ದೇನೆ' ಎಂದು ಜಸ್ವಂತ್ ಸಿಂಗ್ ಹೇಳಿದರಂತೆ, ಅಷ್ಟೇ ಅಲ್ಲ ವ್ಯಂಗ್ಯಚಿತ್ರವನ್ನು ಅವರು ತಮ್ಮ ` ಕಾಲ್ ಟು ಹಾನರ್' ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ ಹಾಗೂ ಅದನ್ನು ತಮ್ಮ ಮನೆಯಲ್ಲಿ ಗೋಡೆಯ ಮೇಲೆ ತೂಗುಹಾಕಿಕೊಂಡಿದ್ದರಂತೆ. ಅದೇ ತೈಲಾಂಗ್ರವರಿಗೆ ಒಮ್ಮೆ ಬಿ.ಜೆ.ಪಿ. ಮುರಳಿ ಮನೋಹರ್ ಜೋಷಿಯವರು `ಕಳೆದ ಆರು ತಿಂಗಳುಗಳಿಂದ ನನ್ನ ಒಂದೂ ವ್ಯಂಗ್ಯಚಿತ್ರ ಏಕೆ ರಚಿಸಿಲ್ಲ?' ಎಂದು ಸಿಟ್ಟಿನಿಂದ ಕರೆಮಾಡಿದ್ದರಂತೆ

ಬ್ರಿಟಿಷರ ಆಡಳಿತದ ಸಮಯದಲ್ಲಿ ಶಂಕರ್ರವರು ಬ್ರಿಟಿಷರನ್ನು ಲೇವಡಿ ಮಾಡುವಂತಹ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದರು. ಒಮ್ಮೆ ಶಂಕರ್ರವರ ಬಳಿ ವೈಸರಾಯ್ರವರು ಕಳುಹಿಸಿದ ವ್ಯಕ್ತಿ ಬಂದು, `ನಮ್ಮ ವೈಸರಾಯ್ರವರಿಗೆ ನಿಮ್ಮ ಇಂದಿನ ವ್ಯಂಗ್ಯಚಿತ್ರ ಇಷ್ಟವಾಯಿತಂತೆ. ತಾವು ಅವರಿಗೆ ಅದರ ಮೂಲ ಪ್ರತಿ ಕೊಡಬೇಕೆಂದು ಕೋರಿಕೆ ಕಳುಹಿಸಿದ್ದಾರೆ' ಎಂದು ಅದರ ಮೂಲ ಪ್ರತಿ ಪಡೆದು ಹೋದರಂತೆ.

ಭಾರತದಲ್ಲಿ ಸ್ವಾತಂತ್ರ್ಯಾನಂತರ ಹಲವಾರು ವ್ಯಂಗ್ಯಚಿತ್ರಗಳು ವಿವಾದಕ್ಕೆಡೆಮಾಡಿವೆ:
(1) ಡಾ|| ಭೀಮರಾವ್ ಅಂಬೇಡ್ಕರರ 1949ರಲ್ಲಿ `ಶಂಕರ್ಸ್ ವೀಕ್ಲಿಯಲ್ಲಿ ಪ್ರಕಟವಾಗಿದ ಶಂಕರ್ರವರ ವ್ಯಂಗ್ಯಚಿತ್ರವೊಂದು ಎನ್.ಸಿ..ಆರ್.ಟಿ. ಪಠ್ಯಪುಸ್ತಕದಲ್ಲಿ ಬೋಧನೆಗೆ ಪೂರಕವಾಗಿ ಬಳಕೆಯಾಗಿತ್ತು (ನೋಡಿ `ಸಂವಾದ’, ಜೂನ್ 2017). ಅಂಬೇಡ್ಕರ್ ಮುಂದಾಳತ್ವದ ಸಮಿತಿಯು ಸಂವಿಧಾನ ರಚನೆಯನ್ನು ಪೂರ್ಣಗೊಳಿಸುವಲ್ಲಿ ತಡವಾಗುತ್ತಿದ್ದುದರಿಂದ ವ್ಯಂಗ್ಯಚಿತ್ರದಲ್ಲಿ ಅಂಬೇಡ್ಕರ್ ನಿಧಾನವಾಗಿ ತೆವಳುವ ಬಸವನಹುಳುವಿನ ಮೇಲೆ ಕೂತು ಚಾವಟಿ ಹಿಡಿದಿದ್ದಾರೆ, ಹಿಂದೆ ನಿಂತಿರುವ ಪ್ರಧಾನಿ ನೆಹರೂ ತಾವು ಒಂದು ಚಾವಟಿ ಹಿಡಿದು ಹೊಡೆಯಲು ಕೈ ಎತ್ತಿದ್ದಾರೆ. 2012ರಲ್ಲಿ ಸಂಸತ್ತಿನಲ್ಲಿಯೂ ವ್ಯಂಗ್ಯಚಿತ್ರದ ಬಗ್ಗೆ ಚರ್ಚೆ ನಡೆದು ಅದು ಅಂಬೇಡ್ಕರ್ರವರಿಗೆ ಹಾಗೂ ಭಾರತದ ದಲಿತ ಸಮುದಾಯಕ್ಕೆ ಮಾಡುತ್ತಿರುವ ಅವಮಾನವೆಂದು ಪ್ರತಿಭಟನೆ ನಡೆದು ಕೊನೆಗೆ ವ್ಯಂಗ್ಯಚಿತ್ರವನ್ನು ತೆಗೆಯಲಾಯಿತು ಹಾಗೂ ಪಠ್ಯಪುಸ್ತಕ ಸಮಿತಿಯ ಸಂಪಾದಕರೂ ಸಹ ರಾಜೀನಾಮೆ ಕೊಟ್ಟರು. ವ್ಯಂಗ್ಯಚಿತ್ರದಲ್ಲಿ ವಿವಾದಾಸ್ಪದ ವಿಷಯವಿಲ್ಲದಿದ್ದರೂ ನೋಡುವ ದೃಷ್ಟಿಕೋನದಿಂದಾಗಿ ಚರ್ಚೆಗೆ ಗ್ರಾಸವಾಯಿತು.
 

9. ರಾಜಕಾರಣಿಗಳನ್ನು ಮತ್ತು ಅಧಿಕಾರದಲ್ಲಿರುವವರನ್ನು `ಸೂಕ್ತ ರೂಪದಲ್ಲಿ ತೋರುತ್ತಿಲ್ಲವೆಂಬ ಕಾರಣಕ್ಕಾಗಿ ಎನ್.ಸಿ..ಆರ್.ಟಿ. ಪಠ್ಯಪುಸ್ತಕದಿಂದ ತೆಗೆಯಲಾದ ಆರ್.ಕೆ.ಲಕ್ಷ್ಮಣ್ರವರ ವ್ಯಂಗ್ಯಚಿತ್ರ.


(2) ಆರ್.ಕೆ.ಲಕ್ಷ್ಮಣ್ರವರ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರೆಡೆಗೆ ಟ್ರೋಫಿ ಕಪ್ನೊಳಗಿಂದ ಭಿಕ್ಷುಕನೊಬ್ಬ ತನ್ನ ಬಟ್ಟಲು ಚಾಚುತ್ತಿರುವ ವ್ಯಂಗ್ಯಚಿತ್ರವೊಂದನ್ನು ಸಹ ಅದು ರಾಜಕಾರಣಿಗಳನ್ನು ಮತ್ತು ಅಧಿಕಾರದಲ್ಲಿರುವವರನ್ನು `ಸೂಕ್ತ ರೂಪದಲ್ಲಿ ತೋರುತ್ತಿಲ್ಲವೆಂಬ ಕಾರಣಕ್ಕಾಗಿ ಎನ್.ಸಿ..ಆರ್.ಟಿ. ಪಠ್ಯಪುಸ್ತಕದಿಂದ ತೆಗೆಯಲಾಯಿತು.

(3) ಸೆಪ್ಟೆಂಬರ್ 2012ರಲ್ಲಿ ಅಸೀಂ ತ್ರಿವೇದಿ ಎಂಬ ವ್ಯಂಗ್ಯಚಿತ್ರಕಾರ ಪಾರ್ಲಿಮೆಂಟ್ ಕಟ್ಟಡವನ್ನು ಅಲ್ಲಿನ ನೆಲೆಸಿರುವ ಭ್ರಷ್ಟಾಚಾರವನ್ನು ಚಿತ್ರಿಸಲು ಅದನ್ನು ನೊಣಗಳು ಮುಸುಕಿರುವ ದುರ್ಗಂಧಯುತ ಶೌಚಾಲಯದ ಹಾಗೆ ಹಾಗೂ ರಾಷ್ಟ್ರಲಾಂಛನದಲ್ಲಿ ಸಿಂಹಗಳ ಬದಲಿಗೆ ತೋಳಗಳನ್ನು ತನ್ನ ವ್ಯಂಗ್ಯಚಿತ್ರದಲ್ಲಿ ಚಿತ್ರಿಸಿದ್ದಕ್ಕಾಗಿ ಆತನ ಮೇಲೆ ಭಾರತೀಯ ಪೀನಲ್ ಕೋಡ್ ಕಲಂ 124(A) ಅಡಿಯಲ್ಲಿ ದೇಶದ್ರೋಹದ ಆಪಾದನೆ ಹೊರೆಸಿ ಅರೆಸ್ಟು ಮಾಡಲಾಯಿತು.

(4) ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಟೀಕಿಸುವಂತಹ ವ್ಯಂಗ್ಯಚಿತ್ರವನ್ನು ಇಮೇಲ್ ಮೂಲಕ ಕಳುಹಿಸಿದ್ದಕ್ಕಾಗಿ ಏಪ್ರಿಲ್ 2012ರಲ್ಲಿ ಜಾಧವಪುರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಅಂಬಿಕೇಶ್ ಮಹಾಪಾತ್ರರವರನ್ನು ಅರೆಸ್ಟು ಮಾಡಲಾಯಿತು. ಪೆÇೀಲೀಸರು ಆತನನ್ನು ಹಿಂಸಿಸಿ ಆತನನ್ನು ಬಿಡಗಡೆ ಮಾಡುವ ಮೊದಲು ತಾನು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್ರ್ಸಿಸ್ಟ್) ಸದಸ್ಯನೆಂಬ ತಪ್ಪು ಹೇಳಿಕೆಯನ್ನು ಬರೆಸಿಕೊಂಡರು. ಸೆರೆಮನೆಯಿಂದ ಹೊರಬಂದ ಆತ ತನ್ನ ಹೇಳಿಕೆಯನ್ನು ನಿರಾಕರಿಸಿದ ಅಷ್ಟೇ ಅಲ್ಲದೆ ಕೊಲ್ಕತ್ತಾದ ಉಚ್ಛ ನ್ಯಾಯಾಲಯ ಆತನನ್ನು ವಿನಾಕಾರಣ ಅರೆಸ್ಟು ಮಾಡಿ ಹಿಂಸಿಸಿದ್ದಕ್ಕಾಗಿ ರೂ.50,000/- ಪರಿಹಾರ ಕೊಡಬೇಕೆಂದು ಸರ್ಕಾರಕ್ಕೆ ಆದೇಶಿಸಿತು.

ವಿವಾದ ಹುಟ್ಟುಹಾಕುವ ವ್ಯಂಗ್ಯಚಿತ್ರಗಳು ಎಂತಹ ದುರಂತ ಉಂಟುಮಾಡಬಹುದೆಂಬುದಕ್ಕೆ ಡ್ಯಾನಿಶ್ ದಿನಪತ್ರಿಕೆಯೊಂದರಲ್ಲಿ 2005ರಲ್ಲಿ ಪ್ರಕಟವಾದ ಕರ್ಟ್ ವೆಸ್ಟರ್ಗಾರ್ಡ್ರವರ ಪ್ರವಾದಿ ಮಹಮ್ಮದ್ರವರ ವ್ಯಂಗ್ಯಚಿತ್ರಗಳೇ ಸಾಕ್ಷಿ. ಆಗ ಜಗತ್ತಿನಾದ್ಯಂತ ಪ್ರಾರಂಭವಾದ (ಬಹುಪಾಲು ಇಸ್ಲಾಮಿಕ್ ರಾಷ್ಟ್ರಗಳಲ್ಲಿ) ಗಲಭೆಗಳು ನೂರಾರು ಸಾವುಗಳಿಗೆ ಕಾರಣವಾಗಿದ್ದಲ್ಲದೆ 2015 ಜನವರಿಯಲ್ಲಿ ಫ್ರಾನ್ಸ್ ಪ್ಯಾರಿಸ್ಸಿನಲ್ಲಿನ ಚಾರ್ಲಿ ಹೆಬ್ಡೊ ಪತ್ರಿಕೆಯ ಸಂಪಾದಕರ ಕೊಲೆಯಲ್ಲಿ ಅವಸಾನಗೊಂಡಿತು. ವಿಪರ್ಯಾಸವೆಂದರೆ, ಪ್ರತಿಭಟಿಸಿದ ಹಾಗೂ ಹಿಂಸೆಯಲ್ಲಿ ತೊಡಗಿದ ಬಹುಪಾಲು ಜನರು ವ್ಯಂಗ್ಯಚಿತ್ರಗಳನ್ನು ನೋಡಿರಲೇ ಇಲ್ಲ.

No comments: