ನನ್ನ ಕೃತಿ `ಮಾತಾಹರಿ’ಯ ಪಿ.ಡಿ.ಎಫ್. (1.8 mb) ಉಚಿತ ಡೌನ್ಲೋಡ್ ಲಭ್ಯವಿದೆ.
ಮಾತಾಹರಿಯ ಹೆಸರು ಬೇಹುಗಾರಿಕೆ, ನಿಗೂಢತೆ ಹಾಗೂ `ಸೆನ್ಶುಯಾಲಿಟಿ’ಯೊಂದಿಗೆ ಸೇರಿಹೋಗಿದೆ. ಸಾಧಾರಣ ಕುಟುಂಬದ ಹುಡುಗಿ ಅತಿ ಭವ್ಯ ಕನಸುಗಳನ್ನು ಕಂಡವಳು, ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದವಳು. ಅದೇ ಅವಳ ಬದುಕಿನ ದುರಂತಗಳಿಗೆ ಕಾರಣವಾಯಿತು. ತಾನು ಭಾರತವನ್ನೇ ನೋಡಿಲ್ಲದಿದ್ದರೂ ತಾನೊಬ್ಬ ಬ್ರಾಹ್ಮಣ ಪೂಜಾರಿಯ ಹಾಗೂ ಕಾಳಿ ದೇವಿಯ ದೇವಸ್ಥಾನದ ದೇಗುಲ ನರ್ತಕಿಯ ಮಗಳೆಂದು ಹೇಳಿಕೊಂಡವಳು. ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ಆಕೆಯ ಐಶಾರಾಮಿ ಬದುಕು, ಅವಳ ಗೆಳೆಯರ ವೃಂದ, ವ್ಯಭಿಚಾರದ ಬದುಕು ಅವಳನ್ನು ಗುಮಾನಿಯಿಂದ ನೋಡುವಂತಿತ್ತು. ಫ್ರೆಂಚ್ ಅಧಿಕಾರಿಗಳಿಗೆ ಅಷ್ಟೇ ಸಾಕಾಗಿತ್ತು. ಆಕೆಯನ್ನು ಒಂದು ಬೆಳಗಿನ ಜಾವ ಕಂಬಕ್ಕೆ ಕಟ್ಟಿ ಗುಂಡು ಹಾರಿಸಿ ಕೊಂದುಹಾಕಿದರು. ಬದುಕಿನಲ್ಲಿ ವೈಯಕ್ತಿಕ ಧಾರುಣ ದುರಂತಗಳನ್ನು ಕಂಡ ಮಾತಾಹರಿ ಸಾವಿನಲ್ಲೂ ದುರಂತ ಕಂಡವಳು. ಲೆಕ್ಕವಿಡದಷ್ಟು ಇನಿಯರನ್ನು ಹೊಂದಿದ್ದ ಆಕೆಯ ದೇಹವನ್ನು ಪಡಯಲು ಯಾರೂ ಮುಂದೆ ಬರಲಿಲ್ಲ. ಆಕೆಯ ದೇಹವನ್ನು ವಿದ್ಯಾರ್ಥಿಗಳ ಅಧ್ಯನಕ್ಕೆಂದು ವೈದ್ಯಕೀಯ ಶಾಲೆಗೆ ನೀಡಲಾಯಿತು. ಆಕೆಯ ತಲೆಯನ್ನು ಎಲ್ಲ ಪ್ರಖ್ಯಾತ ಅಪರಾಧಿಗಳ ತಲೆಯಂತೆ ಕತ್ತರಿಸಿ ಪ್ಯಾರಿಸ್ಸಿನ ಮೆಕಬರ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಆ ತಲೆಯೂ ನಿಗೂಢವಾಗಿ ಮಾಯವಾಯಿತು.
ಮಾತಾಹರಿಯ ಬದುಕಿನ ದುರಂತಗಳನ್ನು ಗೌರಿಲಂಕೇಶರನ್ನೂ ಕಾಡಿತ್ತು. ಪತ್ರಿಕೆಗೆ ಬರೆದುಕೊಡುವಂತೆ ನನ್ನನ್ನು ಕೇಳಿ ಬರೆಯಿಸಿಕೊಂಡ ಈ ಬರಹ `ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ 7 ವಾರಗಳ ಕಾಲ 2006ರಲ್ಲಿ ಪ್ರಕಟವಾಯಿತು. ನಂತರ ಪುಸ್ತಕರೂಪದಲ್ಲಿ 2007ರಲ್ಲಿ ಪ್ರಕಟವಾಯಿತು. ಅದರ ಪಿ.ಡಿ.ಎಫ್. ಡೌನ್ಲೋಡ್ ಲಿಂಕ್ ಇಲ್ಲಿದೆ. ಗೆಳೆಯರೊಂದಿಗೂ ಹಂಚಿಕೊಳ್ಳಿ. ಓದಿ ಅಭಿಪ್ರಾಯ ತಿಳಿಸಿ.
https://archive.org/download/mataharijbalakrishna/Matahari-J%20Balakrishna.pdf
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ