ಅಮಾಸೆ ಟೈಮ್ಸ್ ಅಗ್ರ ವಾರ್ತೆ!
ಟ್ರಾನ್ಸ್‌ಲೇಷನ್ ಟೆರರಿಸಂ ವಿರುದ್ಧ ಕನ್ನಡ ಸಾಹಿತಿಗಳ ಉಗ್ರ ಹೋರಾಟ!
`ಯಾಕೋ ಈಚೆಗೆ ಕನ್ನಡ ಸಾಹಿತ್ಯದಲ್ಲಿ ಒರಿಜಿನಲ್ ಥಿಂಕಿಂಗ್ ಕಡಿಮೆಯಾಗಿದೆ' ಎಂದು ಸಕಾರಣವಾಗೇ ಊಹಿಸಿದ ಡಾ.ಪುಟ್ಟಸ್ವಾಮಿ- ಡಾ.ಜೆ.ಬಾಲಕೃಷ್ಣ ಎಂಬ ಇಬ್ಬರು ಅಗ್ರಿಕಲ್ಚರ್ ಯೂನಿವರ್ಸಿಟಿ ಸಾಹಿತಿಗಳು ಮೊನ್ನೆ ಏಕ್‌ದಂ ಏಳು ಅನುವಾದಗಳ ಸಮೇತ ಎರಗಿದರಷ್ಟೆ? ಜೊತೆಗೆ, ಇನ್ನೂ 12 ಅನುವಾದ ಪುಸ್ತಕಗಳಿಗೆ `ಸ್ಕೆಚ್' ಹಾಕಲಾಗುತ್ತಿದೆ ಎಂದು ಬಹಿರಂಗವಾಗಿ ಘೋಷಿಸಿದರಷ್ಟೆ?ಟ್ರಾನ್ಸ್‌ಲೇಷನ್ ಟೆರರಿಸಂ ವಿರುದ್ಧ ಕನ್ನಡ ಸಾಹಿತಿಗಳ ಉಗ್ರ ಹೋರಾಟ!
ಈ ಮಾತು ಕಿವಿಗೆ ಬಿದ್ದ ತಕ್ಷಣ ಕಂಗಾಲಾದ ಸುಮಾರು 700 ಜನ ಕವಿಗಳು, ಕತೆಗಾರರು, `ಫೋರಂ ಫಾರ್ ಪ್ಯೂರ್ ಅಂಡ್ ಒರಿಜಿನಲ್ ಕನ್ನಡ ಲಿಟರೇಚರ್' ಎಂಬ ಸಂಘಟನೆ ಮಾಡಿಕೊಂಡಿರುವ ಸುದ್ದಿ ಅಮಾಸೆ ಟೈಮ್ಸ್‌ಗೆ ತಲುಪಿದೆ. ಮೊದಲ ಸಭೆಯಲ್ಲಿ ಸದರಿ ಸಂಘಟನೆಯ ಮೆಂಬ್ರುಗಳು ಕನ್ನಡಕ್ಕೆ ಎದುರಾಗಿರುವ ಈ `ಟ್ರಾನ್ಸ್‌ಲೇಷನ್ ಟೆರರಿಸಂ' ವಿರುದ್ಧ ಹೋರಾಡಲೇಬೇಕು ಹಾಗೂ ಕನ್ನಡದ ಒರಿಜಿನಲ್ ಜೊಳ್, ಪೊಳ್ ಕೃತಿಗಳಿಗೇ ಅಗ್ರ ಪ್ರಶಸ್ತಿಗಳನ್ನು ನೀಡಬೇಕು ಎಂದು ಠರಾವು ಪಾಸು ಮಾಡಿದರೂ, ಅದನ್ನು ಯಾರಿಗೆ ಕಳಿಸಬೇಕು ಎಂಬುದು ತಿಳಿಯದೆ ಗೊಂದಲದಲ್ಲಿರುವ ಸುದ್ದಿ ಇದೀಗ ತಾನೆ ಬಂದಿದೆ!
1 ಕಾಮೆಂಟ್:
ನಮಸ್ತೆ..ನಿಮ್ಮ ಬರವಣಿಗೆ ಚೆನ್ನಾಗಿದೆ. ನಿಮ್ಮ ಸಂಪರ್ಕ ಸಂಖ್ಯೆ ನನಗೆ ಸಿಗಬಹುದೆ?
ದಯಮಾಡಿ ನನಗೆ ಇ-ಮೈಲ್ ಮಾಡಿ
chinmayamrao@gmail.com
ನಿಮ್ಮ ಪ್ರೀತಿಯ
ಚಿನ್ಮಯ ಎಮ್ ರಾವ್
ಕಾಮೆಂಟ್ ಪೋಸ್ಟ್ ಮಾಡಿ