Translate

ಶುಕ್ರವಾರ, ಆಗಸ್ಟ್ 29, 2025

ಡಾ.ಮಧು ಸೀತಪ್ಪ ವಿಧಿವಶರಾಗಿದ್ದಾರೆ.


 

ಬಯಲು ಸೀಮೆಗೆ ಶಾಶ್ವತ ನೀರಾವರಿ ಹರಿಸಬೇಕೆಂಬ ಕನಸು ಕಂಡಿದ್ದ ಡಾ.ಮಧುಸೂದನ ಸೀತಪ್ಪ ಆಗಸ್ಟ್ 28ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಡಾ.ಮಧು ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ಸ್ವಾತಂತ್ರö್ಯ ಹೋರಾಟಗಾರರಾಗಿದ್ದ ದಿ. ವಿ.ಸೀತಪ್ಪ ಹಾಗೂ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ದಿ.ಶಾರದಾ ಸೀತಪ್ಪರವರ ಮಗನಾಗಿದ್ದ ಡಾ. ಮಧುರವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ, ಮಿಂಟೋ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ನೇತ್ರ ಚಿಕಿತ್ಸೆಯಲ್ಲಿ ಪ್ರತಿಷ್ಠಿತ ಎಫ್.ಆರ್.ಸಿ.ಎಸ್. ಪದವಿ ಇಂಗ್ಲೆAಡಿನಲ್ಲಿ ಪಡೆದು ನಂತರ ನ್ಯೂರೋಆಫ್ತಾಲ್ಮಾಲಜಿಯಲ್ಲಿ ಎಂ.ಡಿ. ಪದವಿಯನ್ನು ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿ ಇಂಗ್ಲೆAಡಿನ ಆಪ್ಟಿಮ್ಯಾಕ್ಸ್ ಎಂಬ ಆಸ್ಪತ್ರೆಯಲ್ಲಿ ಹಿರಿಯ ಸರ್ಜನ್ನರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಗೆಳೆಯರೊಡಗೂಡಿ ಬಾಗೆಪಲ್ಲಿಯ ಬಳಿ ಹೈಟೆಕ್ ಕೃಷಿಯಲ್ಲಿ ತೊಡಗಿ ನೂರಾರು ಜನರಿಗೆ ಉದ್ಯೋಗ ಒದಗಿಸಿದ್ದರು.

ಕಾಲೇಜಿನ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ರಾಷ್ಟçಮಟ್ಟದಲ್ಲಿ ಪ್ರತಿನಿಧಿಸಿದ್ದ ಬ್ಯಾಸ್ಕೆಟ್‌ಬಾಲ್ ಕ್ರೀಡಾಪಟುವಾಗಿದ್ದ ಡಾ.ಮಧು ವಿದ್ಯಾರ್ಥಿ ದಿನಗಳಲ್ಲಿ ಹಲವಾರು ಹೋರಾಟಗಳಲ್ಲಿಯೂ ತೊಡಗಿದ್ದರು. 1987ರಲ್ಲಿ ಅಂದಿನ ಜನತಾ ಸರ್ಕಾರ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಸೇರಿದ್ದ ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳನ್ನು ಅಂಬೇಡ್ಕರ್, ಎಂ.ಎಸ್.ರಾಮಯ್ಯ ಹಾಗೂ ಕೆಂಪೇಗೌಡ ವೈದ್ಯಕೀಯ ಕಾಲೇಜುಗಳಿಗೆ ಸೇರ್ಪಡೆಯಾಗುವಂತೆ ಆದೇಶ ಹೊರಡಿಸಿದಾಗ, ಆ ಆದೇಶದ ವಿರುದ್ಧ 90 ದಿನಗಳ ಚಳುವಳಿಯಲ್ಲಿ ರಾಜ್ಯ ವೈದ್ಯಕೀಯ ಜಂಟಿಕ್ರಿಯಾ ಸಮಿತಿಯ ಸಂಚಾಲಕರಾಗಿ ಯಶಸ್ವಿಯಾಗಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿ ಸರ್ಕಾರ ಆ ಆದೇಶವನ್ನು ಹಿಂಪಡೆಯುವAತೆ ಮಾಡಿದ್ದಾರೆ.


ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೂ ಒಳಗೊಂಡAತೆ ಇಡೀ ಈ ಬಯಲು ಸೀಮೆಯ ನಿರಂತರ ಬರಗಾಲ, ಕುಸಿಯುತ್ತಿರುವ ಅಂತರ್ಜಲ, ಫ್ಲೋರೈಡ್‌ನಿಂದ ವಿಷಮಯವಾಗುತ್ತಿರುವ ನೀರಿನ ಕುರಿತಂತೆ ಆತಂಕ, ಕಾಳಜಿ ವ್ಯಕ್ತಪಡಿಸುತ್ತಿದ್ದ ಡಾ.ಮಧುರವರು ಮಲೆನಾಡಿನ ನೇತ್ರಾವತಿ ಜಲಾನಯನ ಪ್ರದೇಶದ ಶೇ.10 ಭಾಗದ ಪ್ರದೇಶದಲ್ಲಿನ ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ನೀರನ್ನು ಸಂಗ್ರಹಿಸಿ ಬರಪೀಡಿತ ಪ್ರದೇಶಗಳಿಗೆ ಹರಿಸುವ ಚಿಂತನೆಯ ಮೂಲಕ ಪರಮಶಿವಯ್ಯನವರ ವರದಿಯ ಅನುಷ್ಠಾನಕ್ಕಾಗಿ ಪರಿತಪಿಸಿದವರು. ಅವರ ನೀರಾವರಿ ಚಿಂತನೆಗಳ ಲೇಖನಗಳ ಸಂಗ್ರಹ ಕೃತಿ `ಬಯಲು ಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿ 2012ರಲ್ಲಿ ಪ್ರಕಟವಾಗಿತ್ತು. ಲಕ್ಷಿö್ಮÃಪತಿ ಕೋಲಾರ ಇವರ ನಿರ್ದೇಶನದಲ್ಲಿ "ಮತ್ತೆ `ಬರ' ಬೇಡ" ಎನ್ನುವ ಸಾಕ್ಷö್ಯಚಿತ್ರ ನಿರ್ಮಿಸಿದರು. ಸಮಸಮಾಜಕ್ಕಾಗಿ ಶ್ರಮಿಸಲು ಧರ್ಮನಿರಪೇಕ್ಷ ರಾಜಕೀಯ ಚಿಂತನೆಗಳನ್ನು ಸಹ ಹೊಂದಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದರು.

ಡಾ.ಮಧುರವರು ಇಂಗ್ಲೆAಡಿನ ಲಿವರ್‌ಪೂಲ್‌ನಲ್ಲಿ ವೈದ್ಯರಾಗಿರುವ ಪತ್ನಿ ಶೆಲ್ಲಿ ಅಗರವಾಲ್ ಹಾಗೂ ಪುತ್ರ ಅಯಾನ್ ಮಧುಸೂದನ್‌, ಅಕ್ಕ ರೇಣುಕಾ ಸೀತಪ್ಪರವರನ್ನು ಅಗಲಿದ್ದಾರೆ. ದಿವಂಗತರ ಅಂತ್ಯಕ್ರಿಯೆಯನ್ನು 31ರ ಭಾನುವಾರದಂದು ಮಧ್ಯಾಹ್ನ ತಮ್ಮ ಸ್ವಗ್ರಾಮವಾದ ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪುವಿನಲ್ಲಿ ನಡೆಸಲಾಗುತ್ತಿದೆ.

ಅವರ ಕೆಲವು ಬರೆಹಗಳು ಇಲ್ಲಿವೆ:

https://antaragange.blogspot.com/2012/04/blog-post_06.html


https://antaragange.blogspot.com/2012/04/blog-post.html


ಕಾಮೆಂಟ್‌ಗಳಿಲ್ಲ: