ಶುಕ್ರವಾರ, ಆಗಸ್ಟ್ 02, 2013

ಕೊನ್-ಟಿಕಿ ಎಂಬ ಅದ್ಭುತ ಸಿನೆಮಾ


ನಿನ್ನೆ ನಾನು ನೋಡಿದ ಸಿನೆಮಾ- Kon-Tiki ಎನ್ನುವ ನಾರ್ವೇಜಿಯನ್ ಸಿನೆಮಾ.
1947ರಲ್ಲಿ ಥೋರ್ ಹೇರ್ ಡಾಲ್ ಎನ್ನುವ ನಾರ್ವೇಜಿಯನ್ ಮಾನವ ಶಾಸ್ತ್ರಜ್ಞ ದಕ್ಷಿಣ ಅಮೆರಿಕದ ಜನ 1500 ವರ್ಷಗಳ ಹಿಂದೆ 8000 ಕಿ.ಮೀ. ಸಮುದ್ರದಲ್ಲಿ ತೆಪ್ಪದಲ್ಲಿಯೇ ಪ್ರಯಾಣಿಸಿ ಪಾಲಿನೇಷಿಯಾ ತಲುಪಿದರು ಎಂದು ತನ್ನ ಸಿದ್ದಾಂತವನ್ನು ಮಂಡಿಸಿದಾಗ ಬಹಳಷ್ಟು ವಿಜ್ಞಾನಿಗಳು ಒಪ್ಪುವುದಿಲ್ಲ. ಬರೇ ದಿಮ್ಮಿಗಳ ತೆಪ್ಪದಲ್ಲಿ ಸಮುದ್ರದಲ್ಲಿ ಅಷ್ಟು ದೂರ ಪಯಣಿಸುವುದು ಸಾಧ್ಯವಿಲ್ಲ ಎನ್ನುವುದು ಅವರ ವಾದ. ತನ್ನ ವಾದವನ್ನು ರುಜುವಾತುಮಾಡಲು ಥೋರ್ ಹೇರ್ ಡಾಲ್ ಅದೇ ರೀತಿಯ ಬಾಲ್ಸಾ ಮರದ ದಿಮ್ಮಿಗಳಿಂದ ತಯಾರಿಸಿದ ತೆಪ್ಪದಲ್ಲಿ 1500 ವರ್ಷಗಳ ಹಿಂದಿನ ತಂತ್ರಜ್ಞಾನವನ್ನಷ್ಟೇ ಬಳಸಿಕೊಂಡು ತನ್ನ ಐವರು ಸಹಚರರೊಡನೆ ದಕ್ಷಿಣ ಅಮೆರಿಕದ ಪೆರುವಿನಿಂದ ಪಾಲಿನೇಷಿಯಾ ಯಶಸ್ವಿಯಾಗಿ ತಲುಪುತ್ತಾನೆ. ಆ ಸಾಹಸದ ಚಿತ್ರಣವೇ ಈ ಸಿನೆಮಾ. ಅದ್ಭುತ ಫೋಟೋಗ್ರಫಿ! ಯಾವುದೇ ಸೆಟ್ ನಲ್ಲಿ ಚಿತ್ರೀಕರಣಮಾಡದೆ ಸಾಗರದಲ್ಲಿಯೇ ಮಾಡಲಾಗಿದೆ.

1 ಕಾಮೆಂಟ್‌:

Prashanth ಹೇಳಿದರು...

ಚಲನಚಿತ್ರದ ಸಾರಾಂಶ ಆಸಕ್ತಿ ಮೂಡಿಸುವಂತಿದೆ, ಸಾಧ್ಯವಾದರೆ ವಿಕ್ಷಿಸುತ್ತೇನೆ. ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್..